
ಮಂಗಳೂರು-ವಿಭಿನ್ನ,ವಿಶಿಷ್ಟ ಚಿಂತನೆ ಮತ್ತು ಪ್ರಯೋಗಗಳಿಂದ ಪ್ರಸಿದ್ಧಿ ಪಡೆದ 25 ವರ್ಷಗಳ ಇತಿಹಾಸದ ಹಿರಿಯ ಸಂಸ್ಥೆ K.F.C ಕಿನ್ನಿಗೋಳಿ ಫ್ರೆಂಡ್ಸ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಉಚಿತ ಪ್ರವೇಶಾತಿಯೊಂದಿಗೆ ಮಹಿಳೆಯರಿಗಾಗಿ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಡಿಸೆಂಬರ್ 23 ಮತ್ತು 24 ರಂದು ಕಿನ್ನಿಗೋಳಿ ಐಕಳ ಪೊಂಪೈ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾಟದಲ್ಲಿ ಎಸ್.ಎಮ್.ಎಸ್ ಪಿಂಕ್ ಪ್ಯಾಂಥರ್ಸ್ ಬ್ರಹ್ಮಾವರ,ಯುನೈಟೆಡ್ ಕಿಂಗ್ಸ್ ಮಜಾಲ್,ಆರ್ಯನ್ ಪಿಂಕ್ ಪ್ಯಾಂಥರ್ಸ್ ಏಳಿಂಜೆ,ಸೈಂಟ್ ಅಲೋಶಿಯಸ್ ಕ್ರಿಕೆಟ್ ಅಕಾಡೆಮಿ,ಜಾಲಿ ಫ್ರೆಂಡ್ಸ್ ಪಂಜಿನಡ್ಕ,ವಿಜಯಾ ಯುವ ಸಂಗಮ ಎಕ್ಕಾರ್(ರಿ),ಸೈಂಟ್ ಅಲೋಶಿಯಸ್ ಪ್ರಿ ಯೂನಿವರ್ಸಿಟಿ ಮಂಗಳೂರು ಮತ್ತು ಆಂಜನೇಯ ಸಸಿಹಿತ್ಲು ಸಹಿತ ಒಟ್ಟು 8 ತಂಡಗಳು ಭಾಗವಹಿಸಲಿದೆ.
K.F.C ಕಿನ್ನಿಗೋಳಿ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡದ ಕಿರು ಪರಿಚಯ
K.F.C ಕಿನ್ನಿಗೋಳಿ ಫ್ರೆಂಡ್ಸ್ ಕ್ರಿಕೆಟರ್ಸ್ ಎರಡೂವರೆ ದಶಕಗಳ ಇತಿಹಾಸದ ಸಂಸ್ಥೆ.ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಜಯಿಸಿದ ಕೆ.ಎಫ್.ಸಿ ತಂಡದ ಆಟಗಾರು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಪ್ರತಿಷ್ಠಿತ ತಂಡಗಳನ್ನು ಪ್ರತಿನಿಧಿಸಿರುವುದು ಸಂಸ್ಥೆಯ ಹೆಗ್ಗಳಿಕೆ.
ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಗಣೇಶ್ ಕಿನ್ನಿಗೋಳಿ ಪ್ರಸ್ತುತ ವಿದೇಶದಲ್ಲಿ ನೆಲೆಸಿದ್ದರೂ,ತಂಡದ ಸದಸ್ಯರಾದ ಗಣೇಶ್,ಪ್ರವೀಣ್,ನೂತನ್,ಅರುಣ್,ಶರತ್,ಯೋಗಾನಂದ,ರಫೀಕ್,ಇಲಿಯಾಸ್,ದಾಮೋದರ್,ಅನಂತ ಪದ್ಮನಾಭ ರಾವ್,ಕೇಶವ ಕರ್ಕೇರ,ವಿಶ್ವನಾಥ,ವಿಖೇಶ್,ಅಮಿತ್,ವಿಘ್ನೇಶ್,ಹರೀಶ್,ಶ್ರೀಶ,ಶಶಿ,ಶಮಿತ್ ಇವರೆಲ್ಲರೂ ಒಗ್ಗೂಡುವಿಕೆಯಲ್ಲಿ ಕಳೆದ 3 ವರ್ಷಗಳಿಂದ ಪುರುಷರಿಗಾಗಿ ಲೀಗ್ ಮಾದರಿಯ ಕ್ರಿಕೆಟ್ ಟೂರ್ನಮೆಂಟ್ ಯಶಸ್ವಿಯಾಗಿ ಆಯೋಜಿಸಿದ್ದು,ಇದೀಗ ಮಹಿಳಾ ಕ್ರಿಕೆಟ್ ನ್ನು ಉತ್ತೇಜಿಸುವ ಸಲುವಾಗಿ ಮಹಿಳೆಯರಿಗಾಗಿ ಮುಕ್ತ ಕ್ರಿಕೆಟ್ ಟೂರ್ನಮೆಂಟ್ ನಡೆಸಲು ಸನ್ನದ್ದರಾಗಿದ್ದು,ರಾಜ್ಯ ಮತ್ತು ಹೊರ ರಾಜ್ಯದ ಪ್ರತಿಷ್ಠಿತ 8 ತಂಡಗಳು ಸೆಣಸಾಡಲಿದ್ದು,ದ.ಕ-ಉಡುಪಿ ಜಿಲ್ಲೆಯ ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಲಿದೆ.
ಡಿಸೆಂಬರ್ 23 ಶನಿವಾರ ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಪಂದ್ಯಾಟದ ಉದ್ಘಾಟನೆ ನೆರವೇರಲಿದ್ದು,M9ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದೆ.

