Site icon SportsKannada ಸ್ಪೋರ್ಟ್ಸ್ ಕನ್ನಡ

ದುಬಾಯಿ: ಕಟೀಲ್ ಫ್ರೆಂಡ್ಸ್ ಕ್ರಿಕೆಟ್ ತಂಡದಿಂದ ‘ಕಟೀಲ್ ಪ್ರೀಮಿಯರ್ ಲೀಗ್ – 2025’ 14ನೇ ಸೀಸನ್ ಅದ್ಧೂರಿ ಆರಂಭಕ್ಕೆ ಸಜ್ಜು

ದುಬಾಯಿ: ಕಟೀಲ್ ಫ್ರೆಂಡ್ಸ್ ಕ್ರಿಕೆಟ್ ತಂಡದಿಂದ ‘ಕಟೀಲ್ ಪ್ರೀಮಿಯರ್ ಲೀಗ್ – 2025’ 14ನೇ ಸೀಸನ್ ಅದ್ಧೂರಿ ಆರಂಭಕ್ಕೆ ಸಜ್ಜು

ದುಬಾಯಿ — ಕನ್ನಡಿಗರ ಕ್ರಿಕೆಟ್ ಕ್ರೀಡಾ ಸಂಸ್ಕೃತಿಗೆ ನೇರ ಬೆಳಕಾಗಿರುವ ಕಟೀಲ್ ಫ್ರೆಂಡ್ಸ್ ದುಬಾಯಿ ವತಿಯಿಂದ ಆಯೋಜಿಸಲಾಗುತ್ತಿರುವ ಕಟೀಲ್ ಪ್ರೀಮಿಯರ್ ಲೀಗ್ 2025 (ಸೀಸನ್ – 14) ಡಿಸೆಂಬರ್ 2 ರಂದು ದುಬಾಯಿಯ ಉಮ್ ಅಲ್ ಕುವೈನ್‌ನ AKW Sports ಗ್ರೌಂಡ್ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಕರ್ನಾಟಕ ಮೂಲದ ಕ್ರೀಡಾಪಟುಗಳಿಗೆ ವಿಶಿಷ್ಟ ವೇದಿಕೆ ಸೃಷ್ಟಿಸಿರುವ ಈ  ಕ್ರಿಕೆಟ್ ಟೂರ್ನಮೆಂಟ್ ಕ್ರೀಡಾಪ್ರಿಯರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.

ಟೂರ್ನಮೆಂಟ್‌ಗೆ ಪ್ರಮುಖ ಪ್ರಾಯೋಜಕರಾಗಿ LONGMARCH ಕೈಜೋಡಿಸಿದ್ದು, BARRELS ಮತ್ತು Ranger  ಸಹಭಾಗಿಗಳಾಗಿ ಬೆಂಬಲ ನೀಡಿದ್ದಾರೆ. 14ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸ್ಪರ್ಧೆ ಕರ್ನಾಟಕದ ಟೆನಿಸ್ ಬಾಲ್ ಕ್ರಿಕೆಟ್ ಅಭಿಮಾನಿಗಳಲ್ಲಿ ಅತಿ ದೊಡ್ಡ ಬ್ರಾಂಡ್ ಆಗಿ ಗುರುತಿಸಿಕೊಂಡಿದ್ದು, ಅಂತರಾಷ್ಟ್ರೀಯ ವೇದಿಕೆಯಲ್ಲಿನ ಕನ್ನಡಿಗರ ಕ್ರೀಡಾ ಸಾಮರ್ಥ್ಯ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದೆ.

ಟೂರ್ನಮೆಂಟ್ ಉದ್ಘಾಟನೆ ಬೆಳಗ್ಗೆ 8:00 ಗಂಟೆಗೆ ಹಾಗೂ ಸಮಾರೋಪ ಸಮಾರಂಭ ರಾತ್ರಿ 9:00 ಗಂಟೆಗೆ ವಿಜೃಂಭಣೆಯಿಂದ ಆಯೋಜಿಸಲಿದ್ದಾರೆ. ದುಬೈ ನಲ್ಲಿ ವಾಸಿಸುವ ಕನ್ನಡಿಗರು ಈ ಕ್ರೀಡಾ ಕೂಟವನ್ನು ಉತ್ಸಾಹದಿಂದ ನಿರೀಕ್ಷಿಸುತ್ತಿದ್ದಾರೆ.

ಈ ಬಾರಿ ಅತ್ಯಂತ ಸ್ಪರ್ಧಾತ್ಮಕ 16 ತಂಡಗಳು ಕಿರೀಟಕ್ಕಾಗಿ ಕಣಕ್ಕಿಳಿಯುತ್ತಿದ್ದು, ಅವುಗಳಲ್ಲಿ —
Arasa Warriors, Crown Honnavar, Deira Warriors, DJS Challengers, Donia Brothers, Friends Udupi, Team Elegant Mangalore, Vid One Victor, Gulf Geleyaru, Naveen XI, Nifa Strikers, Twings Super Srikers, United Kodiyal, Varah Roopa Mangalore,  Zannu Alain, Ranger ಇತ್ಯಾದಿ ಶಕ್ತಿಶಾಲಿ ತಂಡಗಳು ಭಾಗವಹಿಸುತ್ತವೆ.

ಆಟಗಾರರು, ಅಭಿಮಾನಿಗಳು  ಬರವಂತೆ ಆಯೋಜಕರು ಆಹ್ವಾನ ನೀಡಿದ್ದು, “ಎಲ್ಲರೂ ಬಂದು ನಿಮ್ಮ ನೆಚ್ಚಿನ ತಂಡಗಳಿಗೆ ಹರ್ಷೋದ್ಗಾರ ನೀಡಿ, ಈ ಟೂರ್ನಿಯ ಭಾಗವಾಗಿರಿ” ಎಂದು ಕಟೀಲ್ ಫ್ರೆಂಡ್ಸ್ ದುಬಾಯಿ ತಂಡ ಕರೆ ನೀಡಿದೆ.

ಗಲ್ಫ್ ಗೆಳೆಯರು ತಂಡಕ್ಕೆ ಸ್ಪೋರ್ಟ್ಸ್ ಕನ್ನಡ ಪ್ರತಿನಿಧಿ ವಿಠಲ್ ರಿಷಾನ್ ನಾಯಕ್ ಅವರನ್ನು ತಂಡದ ಮ್ಯಾನೇಜರ್ ಆಗಿ ನೇಮಿಸಲಾಗಿದೆ. ಕರ್ನಾಟಕ ಆಟಗಾರರಿಗಾಗಿ ಮಾತ್ರ ಮೀಸಲಾಗಿರುವ ಈ ವಿಶೇಷ ಲೀಗ್, ವಿದೇಶದ ನೆಲೆಯಲ್ಲೂ ಕನ್ನಡಿಗರು ಕ್ರಿಕೆಟ್‌ನಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

Exit mobile version