SportsKannada | ಸ್ಪೋರ್ಟ್ಸ್ ಕನ್ನಡ

ಬೆಂಗಳೂರು- ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ದಾಖಲೆಯ ಪಂದ್ಯಾಕೂಟ-ಕರ್ನಾಟಕ ಟೆನಿಸ್ಬಾಲ್ ಕ್ರಿಕೆಟ್ ಪ್ರೀಮಿಯರ್‌ ಲೀಗ್-ಕೆ‌.ಟಿ.ಪಿ.ಎಲ್-2022

ಕ್ರೀಡೆ ಹಾಗೂ ಶೈಕ್ಷಣಿಕ ಕ್ಷೇತ್ರದ ಹರಿಕಾರ ಸೃಷ್ಟಿ ಲೋಕೇಶ್ ಇವರ ಸಾರಥ್ಯದ ಅವಿಘ್ನ ಸೃಷ್ಟಿ ತಂಡ ಕರ್ನಾಟಕ ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ವಿನೂತನ ದಾಖಲೆ ಬರೆಯಲು ಸನ್ನದ್ಧವಾಗಿದೆ.
ಐ.ಪಿ‌.ಎಲ್ ಮಾದರಿಯಲ್ಲಿ ಕರ್ನಾಟಕದಲ್ಲಿ ಮೊತ್ತಮೊದಲ ಬಾರಿಗೆ 1 ಕೋಟಿ ರೂ ವೆಚ್ಚದಲ್ಲಿ ಕರ್ನಾಟಕ ಟೆನಿಸ್ಬಾಲ್ ಕ್ರಿಕೆಟ್ ಪ್ರೀಮಿಯರ್‌ ಲೀಗ್ ಪಂದ್ಯಾವಳಿ ಏಪ್ರಿಲ್ ನಲ್ಲಿ ಹೊನಲು ಬೆಳಕಿನ ಮಾದರಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.
ಜನವರಿಯಲ್ಲಿ ನಡೆದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಕರ್ನಾಟಕದ ಖ್ಯಾತ ಕ್ರಿಕೆಟಿಗ ಅಭಿಮನ್ಯು ಮಿಥುನ್ ಇವರಿಂದ ಕೆ‌.ಟಿ.ಪಿ.ಎಲ್ ನ ಲೋಗೋ ಬಿಡುಗಡೆ ನಡೆಸಲಾಯಿತು.ಈ ಸಂದರ್ಭ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹಿರಿಯ,ಕಿರಿಯ ಆಟಗಾರರು ಆಗಮಿಸಿದ್ದು,ಈ ಸಂದರ್ಭ ಟೆನಿಸ್ಬಾಲ್ ಕ್ರಿಕೆಟ್ ನಲ್ಲಿ ವಿಶೇಷ ಸಾಧನೆಗೈದ‌ವರನ್ನು ಸನ್ಮಾನಿಸಲಾಯಿತು.
ಐಕಾನ್ ಆಟಗಾರರು ಆಲ್ರೌಂಡರ್ಸ್,ಬ್ಯಾಟ್ಸ್‌ಮನ್‌ ಗಳ ಪೆರೇಡ್ ವೇದಿಕೆಯಲ್ಲಿ ನಡೆಸಲಾಯಿತು.
ಈಗಾಗಲೇ ರಾಜ್ಯದ ನಾನಾ ಭಾಗಗಳ ಪ್ರಸಿದ್ಧ ಉದ್ಯಮಿಗಳು,ಕ್ರೀಡಾ ಪ್ರೋತ್ಸಾಹಕರು 12 ಫ್ರಾಂಚೈಸಿಗಳನ್ನು ಖರೀದಿಸಿದ್ದು,ಆಲ್ರೌಂಡರ್
ಮತ್ತು ಬ್ಯಾಟ್ಸ್‌ಮನ್‌ ಗಳನ್ನು ಇತ್ತೀಚೆಗಷ್ಟೇ ತಂಡದ ಮಾಲೀಕರ ಭೇಟಿಯಲ್ಲಿ ಲಕ್ಕಿ ಡ್ರಾ ಮೂಲಕ ಹಂಚಲಾಯಿತು.
1)ನದೀಮ್ ಅಖ್ತರ್ ಮಾಲೀಕತ್ವದ ಎಮ್.ಕೆ.ಎಸ್ ಗ್ರೂಪ್ಸ್ ತಂಡದಲ್ಲಿ  ಸಾಗರ್ ಭಂಡಾರಿ ಮತ್ತು ರಾಕರ್ಸ್ ನವೀನ್
2)ಶಿವಗಂಗಾ ಶ್ರೀನಿವಾಸ್ ಮಾಲೀಕತ್ವದ ಶಿವಗಂಗಾ ಕ್ರಿಕೆಟರ್ಸ್ ದಾವಣಗೆರೆ ತಂಡದಲ್ಲಿ ರಿಯಲ್ ಫೈಟರ್ಸ್ ಹರಿ ಮತ್ತು ಇಮ್ದಾದ್ ಈಲು
3)ಗುರುಪ್ರಸಾದ್ ಮಾಲೀಕತ್ವದ ಗುರು ಕ್ರಿಕೆಟರ್ಸ್ ತಂಡದಲ್ಲಿ ಅಶೋಕ್ ಪಿಳ್ಳೈ ಮತ್ತು ಸ್ಯಾಂಡಿ
4)ಅಜಯ್ ರಾವ್ ಮಾಲೀಕತ್ವದ ರಾಕರ್ಸ್ ರಾಗಿಗುಡ್ಡ ತಂಡದಲ್ಲಿ ಗಿಳಿಯಾರು ನಾಗ ಮತ್ತು ಆರಿಫ್ ಮುಕ್ಕ
5)ಭರತ್ ಗೌಡ ಮಾಲೀಕತ್ವದ ತ್ರಿಶೂಲ್ ಸೇನಾ ತಂಡದಲ್ಲಿ ನಸ್ರುದ್ದೀನ್ ಮತ್ತು ಮೊಹ್ಸಿನ್
6)ಮನೋಜ್ ಬೆಂಗಳೂರು ಮಾಲೀಕತ್ವದ ರಂಗ ಇಲೆವೆನ್ ಗ್ರೂಪ್ಸ್ ತಂಡದಲ್ಲಿ ನವೀನ್ ಚೂ ಮತ್ತು ಅಪೆಕ್ಸ್
7)ರಾಘು ಮಾಲೀಕತ್ವದ ಕ್ರಿಷಾ ಇಲೆವೆನ್ ಕುಂದಾಪುರ ತಂಡದಲ್ಲಿ ಕಿಝರ್ ಮತ್ತು ಸಲೀಂ
8)ಮಂಜುನಾಥ್.ಟಿ ಮಾಲೀಕತ್ವದ ಕ್ರಿಕೆಟ್ ನಕ್ಷತ್ರ ತಂಡದಲ್ಲಿ ಹಾಲಪ್ಪ ದಾವಣಗೆರೆ ಮತ್ತು ಸಚಿನ್
ಮಹಾದೇವ್
9)ಹೆಚ್‌.ಪಿ‌.ಅಮರ್ ನಾಥ್ ಮಾಲೀಕತ್ವದ  ಸ್ನೇಹಜೀವಿ ಕ್ರಿಕೆಟರ್ಸ್ ಮೈಸೂರು ತಂಡದಲ್ಲಿ 
ಅಕ್ಷಯ್ ಸಿ.ಕೆ ಮತ್ತು ಪುರುಷಿ
10)ಹೇಮಂತ್ ಮಾಲೀಕತ್ವದ ನಾಗ ಇಲೆವೆನ್ ಬೆಂಗಳೂರು ತಂಡದಲ್ಲಿ ಡೇವಿಡ್ ಮತ್ತು ಸ್ವಸ್ತಿಕ್ ನಾಗರಾಜ್
11)ಅರುಣ್ ಕುಮಾರ್ ಹೆಚ್‌.ಎಸ್ ಮಾಲೀಕತ್ವದ ಪವರ್ ಸ್ಟಾರ್ ಪುನೀತ್ ಬ್ಲಾಸ್ಟರ್ಸ್ ಬೆಂಗಳೂರು
ತಂಡದಲ್ಲಿ ಸಚಿನ್ ಕೋಟೇಶ್ವರ ಮತ್ತು ಮಾರ್ಕ್ ಮಹೇಶ್
12)ಎ‌.ಎನ್.ಕೃಷ್ಣಕುಮಾರ್ ಮಾಲೀಕತ್ವದ ಮಟ್ಕಲ್ ತುಮಕೂರು ತಂಡದಲ್ಲಿ ಉತ್ತಪ್ಪ ಮತ್ತು ರಾಜಾ ಸಾಲಿಗ್ರಾಮ.
ಈ ಸಂದರ್ಭ ಮಾತನಾಡಿದ ಸೃಷ್ಟಿ ಲೋಕೇಶ್ ರವರು ಟೂರ್ನಮೆಂಟ್ ನ ಯಶಸ್ಸಿನಲ್ಲಿ ಪ್ರತಿಯೊಂದು ತಂಡದ ಜವಾಬ್ದಾರಿಯಿದೆ‌.ಕರ್ನಾಟಕ ಟೆನಿಸ್ಬಾಲ್ ಕ್ರಿಕೆಟ್ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನಕ್ಕೆ ಎಲ್ಲರ ಸಹಕಾರವಿರಲಿ ಎಂದರು.
ಟೂರ್ನಮೆಂಟ್ ನ ಪ್ರಮುಖ ಆಯೋಜಕರಾದ ರವೀಂದ್ರ ತೋಳಾರ್,ಸಚಿನ್ ಮಹಾದೇವ್,ಆದರ್ಶ,ಜಗದೀಶ್, ಮತ್ತು ಸೋಮಣ್ಣ,ವೀಕ್ಷಕ ವಿವರಣೆಕಾರ ಗಿರಿ ಕೆ.ಆರ್‌.ಪುರಂ ಉಪಸ್ಥಿತರಿದ್ದರು.
Exit mobile version