SportsKannada | ಸ್ಪೋರ್ಟ್ಸ್ ಕನ್ನಡ

ಕಾರ್ಕಳ-ಸ್ವರಾಜ್ ಮೈದಾನದಲ್ಲಿ ಟೆನಿಸ್ಬಾಲ್ ಕ್ರಿಕೆಟ್ ಗತವೈಭವ-ಮೊದಲ ಟೂರ್ನಿಯಲ್ಲಿ ಯಶಸ್ಸು ಸಾಧಿಸಿದ T.C.A ಉಡುಪಿ

ಕೋಟ ರಾಮಕೃಷ್ಣ ಆಚಾರ್ಯ-ಸ್ಪೋರ್ಟ್ಸ್ ಕನ್ನಡ ವರದಿ
ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಕಾರ್ಕಳದಲ್ಲಿ ನಡೆದ ಮೊದಲ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಆರ್.ಕೆ‌.ಕಾರ್ಕಳ ಗೆಲುವನ್ನು ಸಾಧಿಸಿದೆ.
ಟಿ-10 ಮಾದರಿಯಲ್ಲಿ ಎರಡು ದಿನಗಳ ಕಾಲ ಹಗಲಿನಲ್ಲಿ ನಡೆದ ಪಂದ್ಯಾಕೂಟದಲ್ಲಿ ಲೀಗ್ ಹಂತದ ರೋಚಕ ಕದನಗಳ ಬಳಿಕ ಫೈನಲ್ ನಲ್ಲಿ ಆರ್.ಕೆ.ಕಾರ್ಕಳ,ಗ್ರೌಂಡ್ ಫ್ರೆಂಡ್ಸ್ ಬೆಳ್ಮಣ್ ತಂಡವನ್ನು ಸೋಲಿಸಿತ್ತು.
ಟೂರ್ನಿಯುದ್ದಕ್ಕೂ ಶ್ರೇಷ್ಠ ಸವ್ಯಸಾಚಿ ಪ್ರದರ್ಶನ ನೀಡಿದ ರಕ್ಷಿತ್ ನಂದಳಿಕೆ ಅರ್ಹವಾಗಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರೆ,ಬೆಸ್ಟ್ ಬ್ಯಾಟ್ಸ್‌ಮನ್‌ ನಿತಿನ್ ಹೆಗ್ಡೆ,ಬೆಸ್ಟ್ ಬೌಲರ್ ರವಿ ಬೈಲೂರು,ಫೈನಲ್ ನ ಪಂದ್ಯಶ್ರೇಷ್ಟ ಪ್ರಶಸ್ತಿ ರಕ್ಷಿತ್ ನಂದಳಿಕೆ ಪಾಲಾಯಿತು.
ಸಮಾರೋಪ ಸಮಾರಂಭದಲ್ಲಿ ಮಾತ‌ನಾಡಿದ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ “ಶೂನ್ಯ ವಿವಾದಗಳೊಂದಿಗೆ ನಿರಾತಂಕವಾಗಿ ಶಿಸ್ತಿನಿಂದ ಪಂದ್ಯಾಟ ಮುಕ್ತಾಯ ಕಂಡಿದೆ,ಇದೇ T.C.A ಮೊದಲ ಪ್ರಯತ್ನದ ಯಶಸ್ಸಿನ ಶುಭ ಮುನ್ಸೂಚನೆ” ಎಂದು ಹರ್ಷ ವ್ಯಕ್ತಪಡಿಸಿದರು.
ಗೌರವಾಧ್ಯಕ್ಷರಾದ ಶರತ್ ಶೆಟ್ಟಿ ಪಡುಬಿದ್ರಿ ಟೂರ್ನಮೆಂಟ್ ನಲ್ಲಿ ಶ್ರಮಿಸಿದ ಸರ್ವ ಸದಸ್ಯರಿಗೂ ಧನ್ಯವಾದ ತಿಳಿಸಿದರು ಹಾಗೂ ಹಿರಿಯ ಆಟಗಾರರಾದ ಪ್ರವೀಣ್ ಕುಮಾರ್ ಬೈಲೂರು ಕಾರ್ಕಳ ತಾಲೂಕಿನ ಯಶಸ್ಸಿನಂತೆ ಮುಂದೆಯೂ ಕೂಡ ಎಲ್ಲಾ ತಾಲೂಕಿನಲ್ಲಿ ಮುಂದುವರಿಯಬೇಕು ಅದಕ್ಕೂ ಸರ್ವಸದಸ್ಯರ ಸಹಕಾರ ಅಗತ್ಯವೆಂದು ತಿಳಿಸಿದರು.
ಈ ಸಂದರ್ಭ ಹಿರಿಯ ಆಟಗಾರರಾದ ಯಾದವ್ ನಾಯಕ್,ಭಾಸ್ಕರ್ ಆಚಾರ್ಯ, ಚೇತನ್ ದೇವಾಡಿಗ,
ಪ್ರವೀಣ್ ಪಿತ್ರೋಡಿ,ವಿಷ್ಣುಮೂರ್ತಿ ಉರಾಳ,
M9 ಸ್ಪೋರ್ಟ್ಸ್ ನ  ಸೌಜನ್ ಮತ್ತು ಅಪ್ಪು ಪಡುಬಿದ್ರಿ ಉಪಸ್ಥಿತರಿದ್ದರು.
Exit mobile version