Site icon SportsKannada ಸ್ಪೋರ್ಟ್ಸ್ ಕನ್ನಡ

ಬೆಳಪು ಸ್ಪೋರ್ಟ್ಸ್ ಕ್ಲಬ್(ರಿ)ಇವರ ಆಶ್ರಯದಲ್ಲಿ ಕಾಪು ತಾಲೂಕು ಮಟ್ಟದ ಕ್ರೀಡಾಕೂಟ

ಬೆಳಪು ಸ್ಪೋರ್ಟ್ಸ್ ಕ್ಲಬ್(ರಿ)ಇವರ ಆಶ್ರಯದಲ್ಲಿ ಕಾಪು ತಾಲೂಕು ಮಟ್ಟದ ಕ್ರೀಡಾಕೂಟ

ಕಾಪು-ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ,ಮೈ ಭಾರತ್ ನೆಹರು ಯುವ ಕೇಂದ್ರ ಉಡುಪಿ ಮತ್ತು ಬೆಳಪು ಸ್ಪೋರ್ಟ್ಸ್ ಕ್ಲಬ್(ರಿ)ಬೆಳಪು ಇವರ ಸಂಯುಕ್ತ ಆಶ್ರಯದಲ್ಲಿ
ಫೆಬ್ರವರಿ 9 ರಂದು ಬೆಳಪು ಪಂಚಾಯತ್ ಕ್ರೀಡಾಂಗಣದಲ್ಲಿ ಕಾಪು ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿದೆ.

ಬೆಳಿಗ್ಗೆ 9 ಗಂಟೆಗೆ ಸರಿಯಾಗಿ
ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ.ದೇವಿ ಪ್ರಸಾದ್ ಶೆಟ್ಟಿ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಿದ್ದಾರೆ.
ಈ ಸಂದರ್ಭ ಮೈ ಭಾರತ್ ನೆಹರೂ ಯುವ ಕೇಂದ್ರ ಉಡುಪಿ ಉಪನಿರ್ದೇಶಕರಾದ ಲೋಕೇಶ್ ಕುಮಾರ್,ಬೆಳಪು ಸ್ಪೋರ್ಟ್ಸ್ ಕ್ಲಬ್(ರಿ)ಬೆಳಪು ಅಧ್ಯಕ್ಷರಾದ ಶಾನವಾಜ್ ಫಜಲುದ್ದೀನ್,ಶಿರ್ವ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಕ್ತಿವೇಲು,ಕಾಪು ತಾಲೂಕು ಯುವಜನ ಸೇವಾ ಅಧಿಕಾರಿ ರಿತೇಶ್ ಶೆಟ್ಟಿ ಸೂಡ,ಸ್ಪೋರ್ಟ್ಸ್ ಕನ್ನಡ ಚಾನೆಲ್ ಮುಖ್ಯಸ್ಥರಾದ ಕೋಟ ರಾಮಕೃಷ್ಣ ಆಚಾರ್,ಕಾಪು ರೋಟರಿ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಎಸ್.ಆಚಾರ್ಯ ಬೆಳಪು,ಅಂಬೇಡ್ಕರ್ ಯುವಕ ಮಂಡಲ ಬೆಳಪು ಅಧ್ಯಕ್ಷ ರವಿ.ಜಿ.ಬೆಳಪು ಮತ್ತು ಮಹಮ್ಮದೀಯ ಮಲ್ಲಾರ್ ಅಧ್ಯಕ್ಷ ಜನಾಬ್ ಅರ್ಷದ್ ಅಹಮದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Exit mobile version