
ಕಾಪು ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ
ಭಾರತ ಸರ್ಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ ಹಾಗೂ ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ), ಬೆಳಪು ಇವರ ಜಂಟಿ ಆಶ್ರಯದಲ್ಲಿ ಕಾಪು ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟವು ದಿನಾಂಕ 09-02-2025 ರಂದು ಬೆಳಪು ಗ್ರಾಮ ಪಂಚಾಯತ್ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಜರುಗಿತು.
ಬೆಳಪು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ಶಾನವಾಜ್ ಫಜಲುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಕ್ರೀಡಾಕೂಟವನ್ನು ಶಾಂತಿಯ ಸಂಕೇತವಾದ ಪಾರಿವಾಳ ಹಾರಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮಕ್ಕೆ ಮೈ ಭಾರತ್ ನೆಹರು ಯುವ ಕೇಂದ್ರದ ಉಪನಿರ್ದೇಶಕರಾದ ಶ್ರೀ ಲೋಕೇಶ್ ಕುಮಾರ್ ಗೌರವ ಅತಿಥಿಗಳಾಗಿ ಭಾಗವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ರಿತೇಶ್ ಶೆಟ್ಟಿ ಸೂಡ (ಯುವಜನ ಸೇವಾ ಅಧಿಕಾರಿ, ಕಾಪು ತಾಲೂಕು), ಶ್ರೀ ಬಾಲಕೃಷ್ಣ ಎಸ್. ಆಚಾರ್ಯ ಬೆಳಪು (ಅಧ್ಯಕ್ಷರು, ರೋಟರಿ ಕ್ಲಬ್, ಕಾಪು), ಶ್ರೀ ಕೋಟ ರಾಮಕೃಷ್ಣ ಆಚಾರ್ಯ (ಮಾಲೀಕರು, SportsKannada.com), ಜನಾಬ್ ಅರ್ಷದ್ ಅಹಮದ್ (ಅಧ್ಯಕ್ಷರು, ಮಹಮ್ಮದೀಯ ಮಲ್ಲಾರ್), ಶ್ರೀ ರವಿ ಜಿ. ಬೆಳಪು (ಅಧ್ಯಕ್ಷರು, ಅಂಬೇಡ್ಕರ್ ಯುವಕ ಮಂಡಲ, ಬೆಳಪು) ಉಪಸ್ಥಿತರಿದ್ದರು.
ಜನಾಬ್ ಶಭಿ ಅಹ್ಮದ್ ಖಾಜಿ (ಅಧ್ಯಕ್ಷರು, ಜಮೀಯ್ಯತುಲ್ ಫಲಾಹ್ (ರಿ), ಕಾಪು) ಹಾಗೂ ಶ್ರೀಯುತ ಯೋಗೀಶ್ ಪೂಜಾರಿ (ಅಧ್ಯಕ್ಷರು, ಬಿಲ್ಲವರ ಸಂಘ, ಬೆಳಪು) ಕೂಡ ಆಗಮಿಸಿ ಶುಭ ಹಾರೈಸಿದರು.
ಸ್ಪರ್ಧೆಯ ಫಲಿತಾಂಶ:
ಪುರುಷರ ವಿಭಾಗ:
ವಾಲಿಬಾಲ್: ಯೆಲ್ಲೂರು ಫ್ರೆಂಡ್ಸ್ ಕ್ಲಬ್ A (ವಿನ್ನರ್), ದುರ್ಗಾ ಪಣಿಯೂರು A (ರನ್ನರ್-ಅಪ್)
ಬ್ಯಾಡ್ಮಿಂಟನ್: ಭಾವಿತ್ ಕುಂಜೂರ್ (ವಿನ್ನರ್), ದೀಕ್ಷಿತ್ ಕೆ. (ರನ್ನರ್-ಅಪ್)
ಭಾರ ಎತ್ತುವ ಸ್ಪರ್ಧೆ: ಕಾರ್ತಿಕ್ ಮಣಿಪುರ (ವಿನ್ನರ್)
ಮಹಿಳೆಯರ ವಿಭಾಗ:
ಖೋ ಖೋ: ಟೀಮ್ ಮಣಿಪುರ (ವಿನ್ನರ್), ಟೀಮ್ ಯೆರ್ಮಾಳ್ (ರನ್ನರ್-ಅಪ್)
100 ಮೀ ಓಟ: ರಿಂಕು (ವಿನ್ನರ್), ವೀಣಾ (ರನ್ನರ್-ಅಪ್)
ಸ್ಲೋ ಸೈಕಲ್ ಸ್ಪರ್ಧೆ: ಪದ್ಮಶ್ರೀ (ವಿನ್ನರ್), ಅರ್ಪಿತಾ (ರನ್ನರ್-ಅಪ್)
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜನಾಬ್ ಮುಸ್ತಾಕ್ ಸಾಹೇಬ್ (ಉದ್ಯಮಿ, ಮುಸ್ತಾಕ್ ಎಲೆಕ್ಟ್ರಿಕಲ್ಸ್, ಕಾಪು), ಜನಾಬ್ ಅಬ್ದುಲ್ ರಜಾಕ್ ಬಿ.ಎಂ (ದೈಹಿಕ ಶಿಕ್ಷಣ ಶಿಕ್ಷಕರು, ಸರಕಾರಿ ಸಂಯುಕ್ತ ಪ್ರೌಢ ಶಾಲೆ, ಬೆಳಪು) ಹಾಗೂ ಬೆಳಪು ಸ್ಪೋರ್ಟ್ಸ್ ಕ್ಲಬ್‌ನ ಪದಾಧಿಕಾರಿಗಳಾದ ಉಪಾಧ್ಯಕ್ಷ ಸಾಹಿದ್ ನವಾಜ್, ಕಾರ್ಯದರ್ಶಿ ಉಸ್ಮಾನ್ ಘನಿ, ಕ್ರೀಡಾ ಕಾರ್ಯದರ್ಶಿ ರಾಜೇಶ್ ಆಚಾರ್ಯ, ಜಂಟಿ ಕಾರ್ಯದರ್ಶಿ ಅಸದ್ ಅಲಿ, ಸಂಘಟನಾ ಕಾರ್ಯದರ್ಶಿ ಶಮೀಮ್ ಕುಶ್ದಿಲ್, ಆದಿಲ್ ಜಲೀಲ್, ಹಾಗೂ ಸಮಿತಿ ಸಲಹೆಗಾರರಾದ ಶಾನವಾಜ್ ನೂರುಲ್ಲಾ, ಶೇಖ್ ಖಾಲಿದ್ ಅಹಮದ್, ಸೈಯದ್ ಅಹಮದ್ ಅಂಜಲಬೆಟ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಾಜೇಶ್ ಆಚಾರ್ಯ ನಿರೂಪಿಸಿದರು.
