SportsKannada | ಸ್ಪೋರ್ಟ್ಸ್ ಕನ್ನಡ

ಸೋಲು,ಗೆಲುವನ್ನು ಸಮಾನವಾಗಿ ಸ್ವೀಕರಿಸಿ-ಚಾಲೆಂಜ್ ಕ್ರಿಕೆಟರ್ಸ್ ಸಾಮಾಜಿಕ ಕಳಕಳಿ ಶ್ಲಾಘನೀಯ”-ಕೆ.ಆರ್.ನಾಯಕ್

ಕುಂದಾಪುರ-ಇಲ್ಲಿನ ಗಾಂಧಿಮೈದಾನದಲ್ಲಿ ಚಾಲೆಂಜ್ ಕ್ರಿಕೆಟರ್ಸ್ ಕುಂದಾಪುರ ಇವರ ಆಶ್ರಯದಲ್ಲಿ ಆಯೋಜಿಸಲಾದ ಹೊನಲು ಬೆಳಕಿನ ರಾಷ್ಟ್ರೀಯ ಮಟ್ಟದ ಚಾಲೆಂಜ್ ಟ್ರೋಫಿ-2022
ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಸಂಜೆ ನೆರವೇರಿತು.
ದೀಪ ಬೆಳಗಿಸಿ ಮಾತನಾಡಿದ ಕುಂದಾಪುರದ ಸೂಪರ್ ಇಲೆಕ್ಟ್ರಿಕಲ್ ಕಂಟ್ರಾಕ್ಟರ್ ಮಾಲೀಕ ಕೆ.ಆರ್.ನಾಯಕ್ ಮಾತನಾಡಿ ” ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ‌.ಚಾಲೆಂಜ್ ಕ್ರಿಕೆಟ್ ಕ್ಲಬ್ ನ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಕುಂದಾಪುರ ಪುರಸಭೆ ಅಧ್ಯಕ್ಷೆ ಶ್ರೀಮತಿ ವೀಣಾ ಭಾಸ್ಕರ್ ಮಾತನಾಡಿ “ಚಾಲೆಂಜ್ ಕ್ರಿಕೆಟ್ ಕ್ಲಬ್ ಕಳೆದ 33 ವರ್ಷಗಳಿಂದ ಕ್ರೀಡೆಯೊಂದಿಗೆ ಸಮಾಜ ಸೇವೆಯ ಮೂಲಕ ಇತರ ತಂಡಗಳಿಗೆ ಮಾದರಿಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ ” ಯುವ ಜನಾಂಗ ಮಾದಕ ವ್ಯಸನಗಳ ದಾಸರಾಗದೆ ಸಮಾಜದ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ಕರೆ ನೀಡಿದರು..
 
ಈ ಸಂದರ್ಭ ಕ್ರೀಡೆ ಮತ್ತು ಕಲಾಕ್ಷೇತ್ರದಲ್ಲಿ ಸಾಧನೆಗೈದ ಕುಮಾರಿ ರಚಿತಾ ಹತ್ವಾರ್,ಕುಮಾರಿ ರಮಿತಾ ಹತ್ವಾರ್,
ಕುಮಾರಿ ಚಾರಿತ್ರ್ಯಾ,ಮಾಸ್ಟರ್ ತೇಜಸ್ ಖಾರ್ವಿ,
ಮಾಸ್ಟರ್ ಅನಿಕೇತ್,ಕುಮಾರಿ ಪ್ರಾಚಿ,ಕುಮಾರಿ ಆಧ್ಯ,
ಕುಮಾರಿ ನಿಶ್ಮಿತಾ,ಮಾಸ್ಟರ್ ಈಶಾನ್.ಎ.ಉಪ್ಪೂರ್,
ಮೊಹಮ್ಮದ್ ಅರ್ಮಾನ್,ಕುಮಾರಿ ಧನ್ವಿ ಮರವಂತೆ,
ಕುಮಾರಿ ಅಂಕಿತಾ,ಕುಮಾರಿ ದಿಯಾ ನಾಯರ್,
ಕುಮಾರಿ ಸಮೃದ್ಧಿ ಎಸ್ ಮೊಗವೀರ ಇವರನ್ನು ಸನ್ಮಾನಿಸಲಾಯಿತು.
ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ
ಕುಂದಾಪುರ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಜಯ್.ಎಸ್.ಪೂಜಾರಿ,ಮಂ.ಸೇ.ಸ.ಸಂ.ಲಿ ಮಂದಾರ್ತಿ ನಿರ್ದೇಶಕ ಗುರುಪ್ರಸಾದ್ ಶಿರೂರು,ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರ ಪೂಜಾರಿ,ಶಿರ್ವ ಲಯನ್ಸ್ ಕ್ಲಬ್ ನ ಮಾಜಿ ಗವರ್ನರ್ ಎನ್.ಎಮ್.ಹೆಗ್ಡೆ,ಉದ್ಯಮಿಗಳಾದ ಮಡಾಮಕ್ಕಿ ಶಶಿಧರ ಶೆಟ್ಟಿ,ದಿನೇಶ್ ಹೆಗ್ಡೆ ಮೊಳಹಳ್ಳಿ,ಶ್ರೀಧರ ಆಚಾರ್ ವಡೇರಹೋಬಳಿ,ಮಹೇಶ್ ಪೂಜಾರಿ,ಸಜಿತ್ ಹೆಗ್ಡೆ,ಕುಂದಾಪುರ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕುಸುಮಾಕರ ಶೆಟ್ಟಿ,ವಕೀಲರಾದ ರಮೇಶ್ ಹತ್ವಾರ್,ತಲ್ಲೂರು ಮೆಸ್ಕಾಂ ವಿಜಯ ಪೂಜಾರಿ,ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ,ಶ್ರೀಮತಿ ಪ್ರಿಯಾ ವಸಂತ ಕರ್ಕೇರ ಬೀಜಾಡಿ,ಕುಂದಾಪುರ ಬಿ.ಜೆ.ಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸೌರಭಿ.ವಿ.ಪೈ ಮತ್ತು ಕುಂದಾಪುರ ಪುರಸಭೆ ಸದಸ್ಯರಾದ ರೋಹಿಣಿ ಉದಯ್ ಕುಮಾರ್ ಉಪಸ್ಥಿತರಿದ್ದರು.
ಕೆ.ಪಿ.ಸತೀಶ್ ಸ್ವಾಗತಿಸಿದರೆ,ಶಿವನಾರಾಯಣ್ ಐತಾಳ್ ಕೋಟ ನಿರೂಪಣೆಗೈದರೆ,ಅಭಿಲಾಷ್ ವಂದಿಸಿದರು….
Exit mobile version