Site icon SportsKannada ಸ್ಪೋರ್ಟ್ಸ್ ಕನ್ನಡ

ಶತಕ ಬಾರಿಸಿದ ಜೈಸ್ವಾಲ್.. ಟೀಕೆಗಳಿಗೆ ಉತ್ತರ

 

ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಜೈಸ್ವಾಲ್ ಎರಡನೇ ಇನ್ನಿಂಗ್ಸ್‌ನಲ್ಲಿ ನಿರ್ಣಾಯಕ ಹಂತದಲ್ಲಿ ಅದ್ಭುತ ಆಟವಾಡಿ ಶತಕ ಗಳಿಸಿದರು.

ಸರಣಿಯ ಮೊದಲ ಟೆಸ್ಟ್‌ನಲ್ಲಿ ಜೈಸ್ವಾಲ್ ಶತಕ ಗಳಿಸಿದ್ದರೆ, ಕಳೆದ ಮೂರು ಟೆಸ್ಟ್‌ಗಳಲ್ಲಿ ಎಡವಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದರು.

ಭಾರತ ತಂಡವು ಮೂರನೇ ದಿನದಾಟವನ್ನು ಎರಡು ವಿಕೆಟ್ ನಷ್ಟಕ್ಕೆ 75 ರನ್ ಗಳೊಂದಿಗೆ ಆರಂಭಿಸಿತು. ಜೈಸ್ವಾಲ್ 51 ರನ್ ಗಳೊಂದಿಗೆ ಮತ್ತು ಆಕಾಶ್ ದೀಪ್ 4 ರನ್ ಗಳೊಂದಿಗೆ ಆಟ ಆರಂಭಿಸಿದರು. ಆಕಾಶ್ ದೀಪ್ ಆಕ್ರಮಣಕಾರಿಯಾಗಿ ಆಟವಾಡಿ 66 ರನ್ ಗಳಿಸಿದರೆ, ಇನ್ನೊಂದು ತುದಿಯಲ್ಲಿ ತಾಳ್ಮೆಯಿಂದ ಆಡಿದ ಜೈಸ್ವಾಲ್ ಭಾರತದ ಇನ್ನಿಂಗ್ಸ್ ಅನ್ನು ರೂಪಿಸಿದರು.

ಜೈಸ್ವಾಲ್ ಜವಾಬ್ದಾರಿಯುತ ಆಟ ಪ್ರದರ್ಶಿಸಿ 127 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಜೈಸ್ವಾಲ್ ಅವರ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಆರನೇ ಶತಕವಾಗಿದೆ. ಭಾರತ ತಂಡವು ನಿರ್ಣಾಯಕ ಹಂತದಲ್ಲಿದ್ದ ಸಮಯದಲ್ಲಿ, ಜೈಸ್ವಾಲ್ ಮತ್ತೆ ಶತಕದೊಂದಿಗೆ ತಂಡವನ್ನು ಉಳಿಸಿದ್ದಾರೆ.

Exit mobile version