SportsKannada | ಸ್ಪೋರ್ಟ್ಸ್ ಕನ್ನಡ

ಸಚಿನ್ ಸರ್ವಾಂಗೀಣ ಆಟ- ಜೈ ಕರ್ನಾಟಕಕ್ಕೆ ಸಂಕ್ರಾಂತಿ ಕಪ್ ಕಿರೀಟ.

ಸಚಿನ್ ಸರ್ವಾಂಗೀಣ ಆಟ-
ಜೈ ಕರ್ನಾಟಕಕ್ಕೆ ಸಂಕ್ರಾಂತಿ ಕಪ್ ಕಿರೀಟ.

ಮಾರುತಿ ಕ್ರಿಕೆಟರ್ಸ್ ಆಶ್ರಯದಲ್ಲಿ
ಬೆಂಗಳೂರಿನ ಕೆ.ಆರ್.ಪುರಂ ನ ಸರಕಾರಿ ಕಾಲೇಜು ಅಂಗಣದಲ್ಲಿ ಜನವರಿ 18 ಮತ್ತು 19 ರಂದು ನಡೆದಿದ್ದ 2 ದಿನಗಳ ಹಗಲಿನ‌ ರಾಜ್ಯ ಮಟ್ಟದ ಪಂದ್ಯಾವಳಿ “ಸಂಕ್ರಾಂತಿ ಕಪ್-2020 ನ್ನು ಜೈ ಕರ್ನಾಟಕ ತಂಡ ತನ್ನ ಮುಡಿಗೇರಿಸಿಕೊಂಡಿತು.

ಕಳೆದ ವಾರ ಹೆಬ್ಬಾಳದಲ್ಲಿ ನಡೆದಿದ್ದ ಸಂಕ್ರಾಂತಿ ಕಪ್ ಜಯಿಸಿದ್ದ ಜೈ ಕರ್ನಾಟಕ ಸತತ 2 ನೇ ವಾರ ಚಾಂಪಿಯನ್ ಪಟ್ಟ ಅಲಂಕರಿಸಿತು.

ರಾಜ್ಯದ ಬಲಿಷ್ಠ 20 ತಂಡಗಳು ಭಾಗವಹಿಸಿದ್ದ ಈ ಪಂದ್ಯಾವಳಿಯ ಲೀಗ್ ಹಂತದ ಹೋರಾಟದ ಬಳಿಕ,
ಉಪಾಂತ್ಯ ಪಂದ್ಯಗಳಲ್ಲಿ
ವಿಭೂಷಣ್ ಕೆ.ಆರ್.ಪುರಂ,ನ್ಯಾಶ್ ಆಟಗಾರರನ್ನೊಳಗೊಂಡ ಎ.ವೈ.ಎಸ್ ತಂಡವನ್ನು ಹಾಗೂ ಜೈ ಕರ್ನಾಟಕ,ಐಕ್ಯ ಬೆಂಗಳೂರು
ತಂಡವನ್ನು ಸೋಲಿಸಿ ಫೈನಲ್ ಗೆ ನೆಗೆದೇರಿತ್ತು.

ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಜೈ ಕರ್ನಾಟಕದ ಆರಂಭಿಕ ಜೋಡಿ, ಭರ್ಜರಿ ಫಾರ್ಮ್ ನಲ್ಲಿರುವ ಸಚಿನ್ ಮಹಾದೇವ್ 23, ವಿನೋದ್ 17, ನೆರವಿನಿಂದ 1 ವಿಕೆಟ್ ನಷ್ಟಕ್ಕೆ 47 ರನ್ ಕಲೆ ಹಾಕಿತ್ತು.
ಇದಕ್ಕುತ್ತರವಾಗಿ ಜೈ ಕರ್ನಾಟಕದ ಬೌಲರ್ ಗಳ ತೀಕ್ಷ್ಣ ದಾಳಿಯೆದುರು ರನ್ ಗಳಿಸಲು ಪರದಾಡಿದ ವಿಭೂಷಣ್ ಆಟಗಾರರು 5 ವಿಕೆಟ್ ಕಳೆದುಕೊಂಡು ಕೇವಲ 23 ರನ್ ಗಳಿಸಲಷ್ಟೇ ಶಕ್ತವಾಯಿತು.

ಪ್ರಥಮ ಪ್ರಶಸ್ತಿಯಾಗಿ ಜೈ ಕರ್ನಾಟಕ
50 ಸಾವಿರ,ರನ್ನರ್ಸ್ ವಿಭೂಷಣ್ ಕೆ‌.ಆರ್.ಪುರಂ ತಂಡ 25 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.

ವೈಯಕ್ತಿಕ ಪ್ರಶಸ್ತಿಯಾಗಿ ಬೆಸ್ಟ್ ಬ್ಯಾಟ್ಸ್‌ಮನ್ ಐಕ್ಯ ಶ್ರೀಕಾಂತ್,ಬೆಸ್ಟ್ ಬೌಲರ್ ವಿಭೂಷಣ್ ನ‌ ಅರುಣ್,
ಹಾಗೂ ಸರಣಿಯುದ್ದಕ್ಕೂ ಶ್ರೇಷ್ಠ ಸವ್ಯಸಾಚಿ ಪ್ರದರ್ಶನ ತೋರಿದ ಸಚಿನ್ ಮಹಾದೇವ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಪಂದ್ಯಾವಳಿಯ ಮುಖ್ಯ ಅತಿಥಿಗಳಾಗಿ
ಕೆ.ಆರ್‌.ಪುರಂ ನ ಶಾಸಕ ಬಿ.ಎ.ಬಸವರಾಜ್,ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್,
ವಿನಾಯಕ ಜ್ಯುವೆಲ್ಲರಿ ಮತ್ತು ಸಿಲ್ಕ್ ನ ಆರ್.ಚಿದಂಬರ್,55 ನೇ ವಾರ್ಡ್ ನ ಕಾರ್ಪೋರೇಟರ್ ಶ್ರೀಕಾಂತ್ ಗೌಡ,53 ನೇ ವಾರ್ಡ್ ನ ಕಾರ್ಪೋರೇಟರ್ ಜಯಪ್ರಕಾಶ್,ಬಿ.ಜೆ.ಪಿ ಯುವ ನಾಯಕ ಚೆನ್ನಕೇಶವ,ಕೆ‌.ಆರ್.ಪುರಂ ನ ಪೋಲಿಸ್ ವೃತ್ತ ನಿರೀಕ್ಷಕ ಅಂಬರೀಶ್ ಹಾಗೂ ಬಿ‌.ಜೆ.ಪಿ ಯುವ ನಾಯಕ ಅರುಣ್ ಯಾದವ್ ಆಗಮಿಸಿದ್ದರು.

ಪಂದ್ಯಾವಳಿಯ ನೇರ ಪ್ರಸಾರ ಕ್ರಿಕ್ ಸೇ ಬಿತ್ತರಿಸಿದರೆ,ಗಿರಿಧರ್ ವೀಕ್ಷಕ ವಿವರಣೆಯಲ್ಲಿ ಸಹಕರಿಸಿದ್ದರು.
ಆರ್.ಕೆ.ಆಚಾರ್ಯ ಕೋಟ…

Exit mobile version