SportsKannada | ಸ್ಪೋರ್ಟ್ಸ್ ಕನ್ನಡ

ಸಂಕ್ರಾಂತಿ ಕಪ್ ಗೆದ್ದು ಹೊಸವರ್ಷದ ಶುಭಾರಂಭಗೈದ ಜೈ ಕರ್ನಾಟಕ ಬೆಂಗಳೂರು

ಹೆಬ್ಬಾಳ ಕ್ರಿಕೆಟರ್ಸ್ ವತಿಯಿಂದ ಮಕರ ಸಂಕ್ರಾಂತಿಯ ಪ್ರಯುಕ್ತ ನಡೆದ 2 ನೇ ರಾಜ್ಯ ಮಟ್ಟದ ಹಗಲಿನ ಪಂದ್ಯಾವಳಿ “ಸಂಕ್ರಾಂತಿ ಕಪ್ ಸೀಸನ್ 2 ನ್ನು ಸತತ 2 ನೇ ಬಾರಿ ಜೈ ಕರ್ನಾಟಕ ಬೆಂಗಳೂರು ಗೆದ್ದುಕೊಂಡಿತು.

16 ಬಲಿಷ್ಠ ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯ ಸೆಮಿಫೈನಲ್ ನಲ್ಲಿ ಫ್ರೆಂಡ್ಸ್ ಬೆಂಗಳೂರು ಮೈಟಿ ತಂಡವನ್ನು ಹಾಗೂ ಜೈ ಕರ್ನಾಟಕ
ಜೆ.ಎಮ್.ಸಿ.ಎಮ್.ಬಿ.ಸಿ.ಸಿ ತಂಡವನ್ನು ಸೋಲಿಸಿ ಫೈನಲ್ ಗೆ ನೆಗೆದೇರಿದ್ದವು.

ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಜೈ ಕರ್ನಾಟಕದ ಉತ್ತಪ್ಪ 14 ಎಸೆತಗಳಲ್ಲಿ ಬಿರುಸಿನ 35 ರನ್ ಹಾಗೂ ಪ್ರದೀಪ್ ಇನ್ನಿಂಗ್ಸ್ ನ ಕೊನೆಯ ಹಂತದಲ್ಲಿ ಸಿಡಿಸಿದ ಹ್ಯಾಟ್ರಿಕ್ ಸಿಕ್ಸರ್ ನೆರವಿನಿಂದ 6 ಓವರ್ ಗಳಲ್ಲಿ 70 ರನ್ ಗಳಿಸಿತ್ತು.
ಚೇಸಿಂಗ್ ವೇಳೆ ಫ್ರೆಂಡ್ಸ್ ಬೆಂಗಳೂರು ನವೀನ್ ಬಿರುಸಿನ 27 ರನ್ ಗಳ ಹೊರತಾಗಿಯೂ,ಭಾಗೇದಾರಿಕೆಗೆ ಅವಕಾಶ ನೀಡದ
ಜೈ ಕರ್ನಾಟಕ ಬೌಲರ್ ಗಳ ಮೊನಚಾದ ದಾಳಿಯೆದುರು 42 ರನ್ ಗಳಷ್ಟೇ ಗಳಿಸಲು ಶಕ್ತವಾಯಿತು.

ಪ್ರಥಮ ಪ್ರಶಸ್ತಿ ವಿಜೇತ ಜೈ ಕರ್ನಾಟಕ 1 ಲಕ್ಷ,ರನ್ನರ್ಸ್
ಫ್ರೆಂಡ್ಸ್ ಬೆಂಗಳೂರು 50 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರೆ,
ಫ್ರೆಂಡ್ಸ್ ನ ಭರತ್ ಗಿಳಿಯಾರು ಬೆಸ್ಟ್ ಬೌಲರ್ ಅದೇ ತಂಡದ ನವೀನ್ ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿ ಪಡೆದರೆ,
ಜೈ ಕರ್ನಾಟಕ ಡೇವಿಡ್ ಬೆಸ್ಟ್ ಕೀಪರ್ ಹಾಗೂ ಸರಣಿಯುದ್ದಕ್ಕೂ ಸರ್ವಾಂಗೀಣ ಪ್ರದರ್ಶನ ತೋರಿದ ಸಚಿನ್ ಮಹಾದೇವ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಪಂದ್ಯಾವಳಿಯ ನೇರ ಪ್ರಸಾರವನ್ನು M.Sports ಬಿತ್ತರಿಸಿದರೆ,ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ತೀರ್ಪುಗಾರರಾಗಿ,ವೀಕ್ಷಕ ವಿವರಣೆಯಲ್ಲಿ ಉಡುಪಿಯ ಭಾನುಪ್ರಕಾಶ್ ಕಾರ್ಯ ನಿರ್ವಹಿಸಿದ್ದರು.
ಆರ್‌.ಕೆ.ಆಚಾರ್ಯ ಕೋಟ…

Exit mobile version