Site icon SportsKannada ಸ್ಪೋರ್ಟ್ಸ್ ಕನ್ನಡ

“ಉಡುಪಿಯಲ್ಲಿ ಐಟಿ ಕ್ರಿಕೆಟ್ ಚಾಪಿಯನ್ ಶಿಪ್ “

“ಉಡುಪಿಯಲ್ಲಿ ಐಟಿ ಕ್ರಿಕೆಟ್ ಚಾಪಿಯನ್ ಶಿಪ್ “

ಉಡುಪಿಯಲ್ಲಿ ಮೆಗಾ ಐಟಿ ಕ್ರಿಕೆಟ್ ಟೂರ್ನಿ: ಕರ್ನಾಟಕದ ಮೊಟ್ಟ ಮೊದಲ ಟೆನಿಸ್ ಬಾಲ್ ಕ್ರಿಕೆಟ್ ವೆಬ್ಸೈಟ್ ಮತ್ತು ಜನಪ್ರಿಯ ಕ್ರೀಡಾ ವಾಹಿನಿಯಾಗಿರುವ ಸ್ಪೋರ್ಟ್ಸ್ ಕನ್ನಡ ಇದೀಗ ಮತ್ತೊಂದು ಮಹತ್ವಾಕಾಂಕ್ಷಿ ಕ್ರಿಕೆಟ್ ಕ್ರೀಡಾಕೂಟಕ್ಕೆ ಶ್ರುತಿ ಹಾಕಿದೆ. ರಾಜ್ಯಮಟ್ಟದ ಲೆಜೆಂಡ್ಸ್ ಕಪ್ ಟೂರ್ನಮೆಂಟ್ ಅನ್ನು ಎರಡು ಬಾರಿ ಯಶಸ್ವಿಯಾಗಿ ಆಯೋಜಿಸಿದ ಸ್ಪೋರ್ಟ್ಸ್ ಕನ್ನಡ, ಈ ಬಾರಿ ಐಟಿ (ಮಾಹಿತಿ ತಂತ್ರಜ್ಞಾನ) IT (Information technology) ಉದ್ಯಮಗಳ ಆಟಗಾರರಿಗೆ ಸಮರ್ಪಿತವಾಗಿ ವಿಶಿಷ್ಟ ಟೂರ್ನಮೆಂಟ್ ಆಯೋಜನೆಗೈಯುತ್ತಿದೆ.

ಉಡುಪಿಯಲ್ಲಿ ದೊಡ್ಡ ಮಟ್ಟದ ಐಟಿ ಕ್ರಿಕೆಟ್ ಹಬ್ಬ ನೆರವೇರಲಿದೆ. ಸ್ಪೋರ್ಟ್ಸ್ ಕನ್ನಡ ಸುದ್ದಿವಾಹಿನಿಯ ಪ್ರಾಯೋಜಕತ್ವದಲ್ಲಿ ನೆರವೇರಲಿರುವ ಈ ಪಂದ್ಯಾವಳಿಯು ಒಟ್ಟು 12 ತಂಡಗಳ ಕೂಡುವಿಕೆಯಲ್ಲಿ ಮಹಾತ್ಮ ಗಾಂಧಿ ಬಯಲು ರಂಗ ಮಂದಿರ ಮೈದಾನ ಉಡುಪಿಯಲ್ಲಿ ಇದೇ ಬರುವ ನವೆಂಬರ್ 8 ಹಾಗೂ 9 ರಂದು ನೆರವೇರಲಿದೆ.

ಮಂಗಳೂರು, ಉಡುಪಿ ವಲಯದ ಹನ್ನೆರಡು ಐಟಿ ಕಂಪನಿಗಳು ಈ ಟೂರ್ನಮೆಂಟ್ ನಲ್ಲಿ ಭಾಗವಹಿಸಲಿದ್ದು, ಈ ವರ್ಷದ ನವೆಂಬರ್ 8 ಮತ್ತು 9 ರಂದು ಉಡುಪಿಯ ಮಹಾತ್ಮ ಗಾಂಧಿ ಬಯಲು ರಂಗ ಮಂದಿರ ಮೈದಾನದಲ್ಲಿ ಲೀಗ್ ಕಮ್ ನಾಕ್ ಔಟ್ ಐಟಿ ಕ್ರಿಕೆಟ್ ಪಂದ್ಯಾವಳಿಯನ್ನು ನಿಗದಿಪಡಿಸಲಾಗಿದೆ. ಪಂದ್ಯಾವಳಿಯ ವಿಜೇತರಿಗೆ 1 ಲಕ್ಷ ನಗದು ಬಹುಮಾನ ಮತ್ತು ಐಟಿ ಕ್ರಿಕೆಟ್ ಚಾಂಪಿಯನ್‌ಶಿಪ್ (ಉಡುಪಿ ಚಾಪ್ಟರ್) ಟ್ರೋಫಿ ಹಾಗೂ ರನ್ನರ್ ಅಪ್ ತಂಡಕ್ಕೆ 50,000 ರೂ. ನಗದು ಬಹುಮಾನ ಜೊತೆಗೆ ರನ್ನರ್ ಅಪ್ ಟ್ರೋಫಿ ನೀಡಲಾಗುವುದು. ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಮ್ಯಾನ್ ಆಫ್ ದಿ ಮ್ಯಾಚ್, ಪ್ಲೇಯರ್ ಆಫ್ ದಿ ಟೂರ್ನಮೆಂಟ್, ಬೆಸ್ಟ್ ಬ್ಯಾಟ್ಸ್ ಮ್ಯಾನ್, ಬೆಸ್ಟ್ ಬೌಲರ್ ಹೀಗೆ ಇನ್ನಿತರ ವೈಯುಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು. ಸ್ಪೋರ್ಟ್ಸ್ ಕನ್ನಡ ಚಾನೆಲ್ ಈ  ಪಂದ್ಯಾವಳಿಯ  ನೇರಪ್ರಸಾರವನ್ನು ಬಿತ್ತರಿಸಲಿಧೆ. ಉಡುಪಿ ವೈಬ್ಸ್ ಈ ಟೂರ್ನಿಯ ಮೀಡಿಯಾ ಪಾರ್ಟ್ನರ್ ಆಗಿರಲಿದೆ. UR ಸ್ಪೋರ್ಟ್ಸ್ ಇವೆಂಟ್ ಪಾರ್ಟ್ನರ್ ಆಗಿ ಸಹಕರಿಸಲಿದೆ.

ಈಗಾಗಲೇ ತಂಡಗಳ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು ಆಸಕ್ತ ತಂಡಗಳು ಹಾಗೂ ಪ್ರಾಯೋಜಕತ್ವದಲ್ಲಿ ಕೈ ಜೋಡಿಸಲು ಇಚ್ಚಿಸುವವರು ಕೆಳಗೆ ನಮೂದಿಸಿದ ಸಂಖ್ಯೆಯನ್ನು ಸಂಪರ್ಕಿಸಬೇಕಾಗಿ ಕೋರಿಕೆ.

ಸಂಪರ್ಕ ಸಂಖ್ಯೆ:

ಕೆ ಆರ್ ಕೆ ಆಚಾರ್ಯ 9148167683.

ಸುರೇಶ್ ಭಟ್ ಮುಲ್ಕಿ 9845483433

ಸ್ಪೋರ್ಟ್ಸ್ ಕನ್ನಡ ಆಯೋಜಿಸುತ್ತಿರುವ ಈ ಐಟಿ ಕ್ರಿಕೆಟ್ ಟೂರ್ನಮೆಂಟ್ ಐಟಿ ಕ್ರೀಡಾಪ್ರೇಮಿಗಳಿಗೆ ಹೊಸ ಅನುಭವ ನೀಡಲಿದ್ದು, ಉದ್ಯೋಗ ಹಾಗೂ ಕ್ರೀಡೆ ನಡುವಿನ ಸಮತೋಲನವನ್ನು ಪ್ರದರ್ಶಿಸುವ ವಿಶಿಷ್ಟ ವೇದಿಕೆಯಾಗಲಿದೆ.

Exit mobile version