SportsKannada | ಸ್ಪೋರ್ಟ್ಸ್ ಕನ್ನಡ

ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಉದ್ಘಾಟನೆ

ಉಡುಪಿ ಜಿಲ್ಲೆಯ ಹಿರಿಯ-ಕಿರಿಯ ಆಟಗಾರರ ಸಮ್ಮುಖದಲ್ಲಿ ಮಂಗಳವಾರ ಸಂಜೆ T.C.A (ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್)
ಉದ್ಘಾಟನಾ ಸಮಾರಂಭ ಉಡುಪಿಯ ಮಿಶನ್ ಕಂಪೌಂಡ್ ನ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಜರುಗಿತು.ಹಿರಿಯ ರಣಜಿ ಆಟಗಾರರಾದ ದಯಾನಂದ ಬಂಗೇರ ಇವರು ದೀಪ ಬೆಳಗಿಸುವುದರ ಮೂಲಕ ಇತರ ಎಲ್ಲಾ ಅತಿಥಿ ಗಣ್ಯರೊಂದಿಗೆ ಉದ್ಘಾಟನೆ ಮಾಡಲಾಯಿತು.
ಉದ್ಘಾಟನೆ ಬಳಿಕ ಮಾತನಾಡಿದ T.C.A ಅಧ್ಯಕ್ಷರಾದ ಟೊರ್ಪೆಡೋಸ್ ಗೌತಮ್ ಶೆಟ್ಟಿ
“ಉಡುಪಿ ಜಿಲ್ಲೆಯಲ್ಲಿ ನಡೆಯುವ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾಟಗಳಲ್ಲಿ ಶಿಸ್ತು,ವೃತ್ತಿಪರತೆ,ಆಟಗಾರರಿಗೆ ಅಗತ್ಯವಿರುವ ಸೌಲಭ್ಯ,ಗ್ರಾಮೀಣ ಪ್ರದೇಶದ ತಂಡಗಳಿಗೆ ಪ್ರಾಯೋಜಕತ್ವ,ಕಿಟ್ ಒದಗಿಸುವುದು,ಮೂಲಭೂತ ಸೌಕರ್ಯ ಕಲ್ಪಿಸುವುದು,ಜಿಲ್ಲೆಯ ತಂಡಗಳನ್ನು ಒಂದೇ ವೇದಿಕೆಯಡಿ ತಂದು ಟೂರ್ನಿಗಳನ್ನು ನಡೆಸಲು ನೆರವಾಗುವುದು,ಟೆನ್ನಿಸ್ಬಾಲ್ ಕ್ರಿಕೆಟ್ ನಲ್ಲಿ ಪಳಗಿದ ಯುವ ಪ್ರತಿಭೆಗಳಿಗೆ ಲೆದರ್ ಬಾಲ್ ಕ್ರಿಕೆಟ್ನಲ್ಲೂ ಅವಕಾಶ ಸಿಗುವ ಬಗ್ಗೆ ವಿವಿಧ ಕ್ಲಬ್ ಗಳ ಜೊತೆ ಸಂಪರ್ಕ ಕಲ್ಪಿಸುವುದು ಹೀಗೆ ಹತ್ತು ಹಲವಾರು ಸದುದ್ದೇಶಗಳನ್ನಿಟ್ಟುಕೊಂಡು ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಗೆ ಪುನರ್ಜೀವ ಕಲ್ಪಿಸಲಾಗಿದೆ ಹಾಗೂ ಟೆನ್ನಿಸ್ಬಾಲ್ ಕ್ರಿಕೆಟ್ ಸಮಾಜದಲ್ಲಿ ನಮಗೆ ಗುರುತು ನೀಡಿದೆ,ಬದುಕಲು ಕಲಿಸಿದೆ,ಯಶಸ್ಸಿನ ಹಾದಿ ಸುಗಮವಾಗಿಸಿದೆ‌.ಆದ್ದರಿಂದ ಟೆನ್ನಿಸ್ಬಾಲ್ ಕ್ರಿಕೆಟ್ ಉಳಿಸಿ-ಬೆಳೆಸುವುದು ಪ್ರತಿಯೊಬ್ಬ ಆಟಗಾರರ ಜವಾಬ್ದಾರಿಯಾಗಿದೆ” ಎಂದರು.ಕಾರ್ಯಕ್ರಮದಲ್ಲಿ ಆಸೀನರಾದ ಸಂಸ್ಥೆಯ ಪದಾಧಿಕಾರಿಗಳು ಶುಭಹಾರೈಸಿದರು.
ಈ ಸಂದರ್ಭ ಸಭೆಯಲ್ಲಿ ಭಾಗವಹಿಸಿದ ಸದಸ್ಯರ ಕೆಲವು ಗೊಂದಲಗಳನ್ನು ಅಧ್ಯಕ್ಷರೊಂದಿಗೆ ಸಂವಾದ ಮಾಡುವುದರ ಮೂಲಕ ಬಗೆಹರಿಸಿಕೊಂಡು ಎಲ್ಲರೂ ಉತ್ತಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಗೌರವಾಧ್ಯಕ್ಷರಾದ ಶರತ್ ಶೆಟ್ಟಿ ಪಡುಬಿದ್ರಿ,ದಯಾನಂದ ಬಂಗೇರ,ಶ್ರೀಧರ ಶೆಟ್ಟಿ,ಉದಯ್ ಕುಮಾರ್ ಕಟಪಾಡಿ,ಡಾ.ವಿನೋದ್ ನಾಯಕ್,ಪ್ರಭಾಕರ್ ಶೆಟ್ಟಿ,ಯಾದವ್ ನಾಯಕ್, ಜಾನ್ ಪ್ರೇಮ್ ಕುಮಾರ್,ನಾರಾಯಣ ಶೆಟ್ಟಿ,ಪ್ರವೀಣ್ ಕುಮಾರ್,ಪ್ರವೀಣ್ ಪಿತ್ರೋಡಿ,ಚೇತನ್ ಕುಮಾರ್ ಇನ್ನಿತರ ಹಿರಿಯ ಆಟಗಾರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರವೀಣ್ ಕುಮಾರ್ ಬೈಲೂರು ಸಂಯೋಜಿಸಿದರು ಹಾಗೂ
ಶಿವನಾರಾಯಣ ಐತಾಳ್ ಕೋಟ ಕಾರ್ಯಕ್ರಮ ನಿರೂಪಣೆ ಮಾಡಿದರು.
Exit mobile version