SportsKannada | ಸ್ಪೋರ್ಟ್ಸ್ ಕನ್ನಡ

ಅಂಧರ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ ನಲ್ಲಿ ದಾಖಲಾಯ್ತು ತ್ರಿಶತಕ..!!!

ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಶತಕ ಸಿಡಿಸುವುದು ಬ್ಯಾಟ್ಸ್‌ಮನ್‌ ಪಾಲಿಗೆ ಅದು ಅದ್ಭುತ ಸಾಧನೆಯಾಗಿದೆ ಅದರಲ್ಲಿಯೂ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಲು ಸಾಧ್ಯವಾದರೆ ಆತನ ಪಾಲಿಗದು ಮಹಾನ್ ಸಾಧನೆಯೆ ಹೌದು.
ನೂರಾರು ವರ್ಷಗಳ ಇತಿಹಾಸವಿರುವ ಏಕದಿನ ಕ್ರಿಕೆಟ್‌ ನಲ್ಲಿ ಬೆರಳೆಣಿಕೆಯ ಆಟಗಾರಷ್ಟೇ ಈವರೆಗೆ ದ್ವಿಶತಕ ಸಿಡಿಸಲು ಸಾಧ್ಯವಾಗಿದೆ . ಕ್ರಿಕೆಟ್ ದೇವರೆಂದು ಕರೆಯಲ್ಪಡುವ ವಿಶ್ವದ ಅಗ್ರಮಾನ್ಯ ಆಟಗಾರ ಭಾರತದ ಹೆಮ್ಮೆಯ ಕ್ರಿಕೆಟ್ ಪಟು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌, ಭಾರತದ ಪರವಾಗಿ ಆರಂಭ
ಆಟಗಾರನಾಗಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡುತ್ತಿದ್ದ ವೀರೇಂದ್ರ ಸೆಹ್ವಾಗ್‌ ಹಾಗೂ ಮತ್ತೊಬ್ಬ ಭಾರತದ ಹೆಮ್ಮೆಯ ಕ್ರಿಕೆಟಿಗ ರೋಹಿತ್‌ ಶರ್ಮಾ, ನ್ಯೂಜಿಲೆಂಡ್‌ ತಂಡದ ಮಾರ್ಟಿನ್‌ ಗಪ್ಟಿಲ್‌,ವೆಸ್ಟ್ ಇಂಡಿಸ್ ತಂಡದ ಕ್ರಿಸ್‌ ಗೇಲ್‌ , ಪಾಕಿಸ್ತಾನ ತಂಡದ ಫಾಕರ್ ಜಮಾನ್ ಅಂತಹ ಸಾಧಕರು ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇದುವರೆಗೂ ದ್ವಿಶತಕ ಹೊಡೆಯಲು ಸಾಧ್ಯವಾಗಿದೆ. ಅದರೆ ಏಕದಿನ ಕ್ರಿಕೆಟ್‌ ನಲ್ಲಿ ಈ ವರೆಗೆ ತ್ರಿಶತಕ ದಾಖಲಾಗಿಲ್ಲ. ರೋಹಿತ್‌ ಶರ್ಮಾ ಶ್ರೀಲಂಕಾ ವಿರುದ್ಧ ಕಲೆಹಾಕಿದ  264 ರನ್‌ ಈ ವರೆಗಿನ ಅತ್ಯಧಿಕ ವೈಯುಕ್ತಿಕ ರನ್ ದಾಖಲೆಯಾಗಿದೆ.ಇದೀಗ ಆಸ್ಟ್ರೇಲಿಯಾದ ಯುವ ಆಟಗಾರನೊಬ್ಬ ಏಕದಿನ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸುವ ಮೂಲಕ ಇಡೀ ಕ್ರಿಕೆಟ್‌ ಜಗತ್ತು ಬೆರಗಾಗುವಂತೆ ಮಾಡಿದ್ದಾನೆ.
ಆಸ್ಟ್ರೇಲಿಯಾದ ಅಂಧರ ಕ್ರಿಕೆಟ್‌ನ ಆರಂಭಿಕ ಬ್ಯಾಟ್ಸ್‌ಮನ್ ಸ್ಟೀಫನ್ ನೀರೋ ಬ್ರಿಸ್ಬೇನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 140 ಎಸೆತಗಳಲ್ಲಿ 309 ರನ್ ಗಳಿಸಿ ವಿಶ್ವದಾಖಲೆ ಬರೆದಿದ್ದಾನೆ ಈ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿದ ನೀರೋ 49 ಬೌಂಡರಿ ಹಾಗೂ ಒಂದು ಸಿಕ್ಸರ್‌ ಗಳೊಂದಿಗೆ ದಾಖಲೆ ಮಾಡಿದ್ದಾರೆ.
ನೀರೋ ಅವರ ಅಬ್ಬರದ ಸ್ಫೋಟಕ ಬ್ಯಾಟಿಂಗ್ ನಿಂದ  ಆಸ್ಟ್ರೇಲಿಯಾ ತಂಡವು ನಿಗದಿತ 40 ಓವರ್‌ ಗಳಲ್ಲಿ 541 ರನ್‌ ಕಲೆಹಾಕಿತು. ಇದು ಅಂಧರ ಕ್ರಿಕೆಟ್‌ ನಲ್ಲಿ ನೂತನ ದಾಖಲೆಯಾಗಿದೆ.

ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 269 ರನ್‌ ಗಳಿಂದ ಗೆದ್ದು ಬೀಗಿದೆ. ನೀರೋ ತ್ರಿಶತಕ ಸಿಡಿಸುವ ಮೂಲಕ 1998 ರ ಅಂಧರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಮಸೂದ್ ಜಾನ್ ನಿರ್ಮಿಸಿದ 262 ರನ್ ಔಟಾಗದೆ ಹೊಡೆದಿದ್ದು ಇದು ವರೆಗಿನ ಅತ್ಯದಿಕ ಮೊತ್ತದ ಜೊತೆಗೆ ವಿಶ್ವದಾಖಲೆಯಾಗಿತ್ತು ಈ ದಾಖಲೆಯನ್ನು ಪುಡಿಗಟ್ಟುವುದರ ಜೊತೆಗೆ ತ್ರಿ ಶತಕವನ್ನು ಸ್ಟೀಫನ್ ನೀರೋ ಬಾರಿಸುವುದರ ಜೊತೆಗೆ ವಿಶ್ವದಾಖಲೆಯನ್ನು ಮಾಡಿದ್ದಾರೆ.
Exit mobile version