SportsKannada | ಸ್ಪೋರ್ಟ್ಸ್ ಕನ್ನಡ

ಐದು ಬಾರಿ ಅಂಡರ್ 19 ವಿಶ್ವಕಪ್ ಗೆದ್ದ ಭಾರತ ತಂಡದ ಸಂಪೂರ್ಣ ವಿವರ

ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ಕಿರಿಯರ ತಂಡ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ಮತ್ತೊಂದು ಬಾರಿ ಅಂಡರ್ 19 ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. 2020ರ ವಿಶ್ವಕಪ್‌ನಲ್ಲಿ ಫೈನಲ್ ಪಂದ್ಯದಲ್ಲಿ ಕೈತಪ್ಪಿದ್ದ ಅಂಡರ್ 19 ವಿಶ್ವಕಪ್ ಈ ಬಾರಿ ಭಾರತದ ಕೈ ತಪ್ಪದಂತೆ ನೋಡಿಕೊಳ್ಳುವಲ್ಲಿ ಯಶ್ ಧುಲ್ ಪಡೆ ಯಶಸ್ವಿಯಾಗಿದೆ.
ಅಂಡರ್ 19 ವಿಶ್ವಕಪ್‌ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವಾಗಿದೆ. ಈ ಬಾರಿಯ ಗೆಲುವಿನೊಂದಿಗೆ ಭಾರತ ಐದನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಅಲ್ಲದೆ ಸತತ ನಾಲ್ಕು ಆವೃತ್ತಿಯಿಂದ ಭಾರತ ಫೈನಲ್ ಹಂತಕ್ಕೇರಲು ಯಶಸ್ವಿಯಾಗುತ್ತಿದೆ. ಇದು ಕಿರಿಯರ ವಿಶ್ವಕಪ್‌ನಲ್ಲಿ ಭಾರತದ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ.
*ಭಾರತ ಇದುವರೆಗೆ ಗೆದ್ದ ಅಂಡರ್ 19 ವಿಶ್ವಕಪ್‌ ನ ತಂಡಗಳಲ್ಲಿದ್ದ ಆಟಗಾರರು ಯಾರು? ಬನ್ನಿ ನೋಡೋಣ*
2000 ಇಸವಿಯಲ್ಲಿ ಅಂಡರ್ 19 ವಿಶ್ವಕಪ್ ಗೆದ್ದ ತಂಡದ ನಾಯಕ *ಮೊಹಮ್ಮದ್ ಕೈಫ್*
ಭಾರತ ಅಂಡರ್ 19 ವಿಶ್ವಕಪ್‌ಅನ್ನು ಮೊದಲ ಬಾರಿಗೆ ಮುಡಿಗೇರಿಸಿಕೊಂಡಿದ್ದು 2000ನೇ ಇಸವಿಯಲ್ಲಿ. ಅಂದು ಭಾರತ ಅಂಡರ್ 19 ತಂಡದ ನಾಯಕನಾಗಿದ್ದವರು ಮೊಹಮ್ಮದ್ ಕೈಫ್ ಕೊಲಂಬೋದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ವನ್ನು 6 ವಿಕೆಟ್‌ಗಳಿಂದ ಮಣಿಸಿದ ಭಾರತ ವಿಜಯದ ನಗೆ‌ ಬಿರಿತ್ತು . ಈ ಅಂಡರ್ 19 ವಿಶ್ವಕಪ್ ಟೂರ್ನಿಯಿಂದ ಭಾರತಕ್ಕೆ ಭವಿಷ್ಯದ ಸೂಪರ್ ಸ್ಟಾರ್ ಯುವರಾಜ್ ಸಿಂಗ್ ಅವರನ್ನು ಪರಿಚಯ ಮಾಡಿಕೊಟ್ಟಿತ್ತು.
*ಅಂದಿನ ಭಾರತ ತಂಡದಲ್ಲಿದ್ದ ಆಟಗಾರರು:* ಮೊಹಮ್ಮದ್ ಕೈಫ್ (ನಾಯಕ), ಯುವರಾಜ್ ಸಿಂಗ್, ಅನುಪ್ ದಾವೆ, ಮಿಹಿರ್ ದಿವಾಕರ್, ನೀರಜ್ ಪಟೇಲ್, ವೇಣುಗೋಪಾಲ್ ರಾವ್, ಅಜಯ್ ರಾತ್ರಾ, ರವನೀತ್ ರಿಕಿ, ಮನೀಶ್ ಶರ್ಮಾ, ವಿದ್ಯುತ್ ಶಿವರಾಮಕೃಷ್ಣನ್, ರೀತೀಂದರ್ ಸೋಧಿ, ಶಲಭ್ ಶ್ರೀವಾಸ್ತವ, ಮೃತ್ಯುಂಜಯ್ ತ್ರಿಪಾಠಿ, ಅರ್ಜುನ್ ಯಾದವ್.
.
2008ರ ಅಂಡರ್ 19 ವಿಶ್ವಕಪ್ ಟೂರ್ನಿಯ ನಾಯಕ *ವಿರಾಟ್ ಕೊಹ್ಲಿ*
ಭಾರತ 2ನೇ ಬಾರಿಗೆ ಅಂಡರ್ 19 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದು 2008ರಲ್ಲಿ ಅಂದು ಭಾರತ ಕಿರಿಯರ ತಂಡವನ್ನು ಮುನ್ನಡೆಸಿದ್ದು *ವಿರಾಟ್ ಕೊಹ್ಲಿ* ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಡಿಎಲ್‌ಎಸ್ ನಿಯಮದಲ್ಲಿ ಗೆಲುವು ಸಾಧಿಸಿತ್ತು. ಈ ವಿಶ್ವಕಪ್ ಟೂರ್ನಿಯಿಂದ ಭಾರತಕ್ಕೆ ಕೆಲವು ಭವಿಷ್ಯದ  ಸೂಪರ್ ಸ್ಟಾರ್‌ ಆಟಗಾರರು ದೊರೆತರು.
ವಿರಾಟ್ ಕೊಹ್ಲಿ ಮಾತ್ರವಲ್ಲದೆ ರವೀಂದ್ರ ಜಡೇಜಾ, ಮನೀಶ್ ಪಾಂಡೆ ಕೂಡ ಈ ತಂಡದ ಉತ್ತಮ ಆಟಗಾರರಾಗಿದ್ದರು
*ಅಂದಿನ ಭಾರತ ತಂಡದ ಆಟಗಾರರು:* ವಿರಾಟ್ ಕೊಹ್ಲಿ (ನಾಯಕ), ರವೀಂದ್ರ ಜಡೇಜಾ (ಉಪನಾಯಕ), ಅಜಿತೇಶ್ ಅರ್ಗಲ್, ನೆಪೋಲಿಯನ್ ಐನ್‌ಸ್ಟೈನ್, ಶ್ರೀವತ್ಸ್ ಗೋಸ್ವಾಮಿ, ಪೆರ್ರಿ ಗೋಯಲ್, ಇಕ್ಬಾಲ್ ಅಬ್ದುಲ್ಲಾ, ಸಿದ್ಧಾರ್ಥ್ ಕೌಲ್, ತರುವರ್ ಕೊಹ್ಲಿ, ಅಭಿನವ್ ಮುಕುಂದ್, ಮನೀಶ್ ಪಾಂಡೆ, ಪ್ರದೀಪ್ ಸಾಂಗ್ವಾನ್, ಡಿ ಶಿವ ಕುಮಾರ್ ಸಾಂಗ್ವಾನ್ , ತನ್ಮಯ್ ಶ್ರೀವಾಸ್ತವ್, ಸೌರಭ್ ತಿವಾರಿ
2012 ಅಂಡರ್ 19 ವಿಶ್ವಕಪ್ ತಂಡದ ನಾಯಕ *ಉನ್ಮುಕ್ತ್ ಚಾಂದ್*
ಭಾರತದ ಮೂರನೇ ಕಿರಿಯರ ವಿಶ್ವಕಪ್ ಚಾಂಪಿಯನ್ ಪಟ್ಟ ನಾಲ್ಕು ವರ್ಷಗಳ ನಂತರ ಮುಡಿಗೇರಿತ್ತು. 2012ರಲ್ಲಿ ಭಾರತ ಉನ್ಮುಕ್ತ್ ಚಾಂದ್ ನೇತೃತ್ವದಲ್ಲಿ ಗೆಲುವು ಸಾಧಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿತ್ತು ಆಸ್ಟ್ರೇಲಿಯಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ನಾಯಕನ ಜವಾಬ್ದಾರಿಯುತ ಆಟವಾಡಿದ ಉನ್ಮಕ್ತ್ ಚಾಂದ್ ಶತಕ ಸಿಡಿಸಿ ಗೆಲುವಿಗೆ ಪ್ರಮುಖ ಕಾರಣವಾಗಿದ್ದರು. ಹನುಮ ವಿಹಾರಿ ಈ ಟೂರ್ನಿಯಿಂದ ಭಾರತಕ್ಕೆ ದೊರೆತ ಪ್ರಮುಖ ತಾರಾ ಆಟಗಾರನಾಗಿದ್ದರು.
*ಅಂದಿನ ಭಾರತ ತಂಡದಲ್ಲಿದ್ದ ಆಟಗಾರರು:* ಉನ್ಮುಕ್ತ್ ಚಂದ್ (ನಾಯಕ), ಅಕ್ಷದೀಪ್ ನಾಥ್ (ಉಪನಾಯಕ), ಬಾಬಾ ಅಪರಾಜಿತ್, ಪ್ರಶಾಂತ್ ಚೋಪ್ರಾ, ಸಂದೀಪನ್ ದಾಸ್, ಹರ್ಮೀತ್ ಸಿಂಗ್, ಅಖಿಲ್ ಹೆರ್ವಾಡ್ಕರ್, ರಶ್ ಕಲಾರಿಯಾ, ವಿಕಾಸ್ ಮಿಶ್ರಾ, ಕಮಲ್ ಪಾಸಿ, ಸ್ಮಿತ್ ಪಟೇಲ್, ರವಿಕಾಂತ್ ಸಿಂಗ್, ಸಂದೀಪ್ ಶರ್ಮಾ , ಹನುಮ ವಿಹಾರಿ, ವಿಜಯ್ ಜೋಲ್.
2018 ಅಂಡರ್ 19 ವಿಶ್ವಕಪ್ ತಂಡದ ನಾಯಕ *ಪೃಥ್ವಿ ಶಾ*
 2018ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ಪೃಥ್ವಿ ಶಾ ನೇತೃತ್ವದಲ್ಲಿ ಕಣಕ್ಕಿಳಿದಿತ್ತು. ಈ ಸಂದರ್ಭದಲ್ಲಿಯೂ ಭಾರತ ಆಸ್ಟ್ರೇಲಿಯಾ ಕಿರಿಯರ ತಂಡವನ್ನು ಬಗ್ಗು ಬಡಿದ ಭಾರತ ಗೆಲುವು ಸಾಧಿಸುವ ಮೂಲಕ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತ್ತು
 ಈ ಸಂದರ್ಭದಲ್ಲಿ ಭಾರತ ಅಂಡರ್ 19 ತಂಡಕ್ಕೆ ಕೋಚ್ ಆಗಿದ್ದವರು ಹಾಲಿ ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್.
*ಭಾರತ ತಂಡ:* ಪೃಥ್ವಿ ಶಾ, ಶುಭ್ಮನ್ ಗಿಲ್ (ಉಪನಾಯಕ), ಶ್ರೀ ವಂಶಿ, ಆರ್ಯನ್ ಜುಯಲ್, ಮಂಜೋತ್ ಕಲ್ರಾ, ಶಿವಂ ಮಾವಿ, ಕಮಲೇಶ್ ನಾಗರಕೋಟಿ, ರಿಯಾನ್ ಪರಾಗ್, ಇಶಾನ್ ಪೊರೆಲ್, ಹಿಮಾಂಶು ರಾಣಾ, ಅನುಕುಲ್ ರಾಯ್, ಅಭಿಷೇಕ್ ಶರ್ಮಾ, ಅರ್ಷದೀಪ್ ಸಿಂಗ್, ಶಿವ ಸಿಂಗ್, ಆದಿತ್ಯ ಠಾಕ್ರೆ, ಪಂಕಜ್ ಯಾದವ್.
2022ರ ಅಂಡರ್ 19 ವಿಶ್ವಕಪ್ ಟೂರ್ನಿಯ ನಾಯಕ *ಯಶ್ ಧುಲ್*
ಈ ಸಾಲಿನಲ್ಲಿ  ಶನಿವಾರ ನಡೆದ 2022ರ ಆವೃತ್ತಿಯ ಅಂಡರ್ 19 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ಕಿರಿಯರ ತಂಡವನ್ನು 4 ವಿಕೆಟ್‌ಗಳ ಅಂತರದಿಂದ ಮಣಿಸಿದ ಭಾರತ ಐದನೇ ಬಾರಿಗೆ ವಿಜಯದ ನಗೆ ಬಿರಿತು
ಯಶ್ ಧುಲ್ ನೇತೃತ್ವದ ಭಾರತ ತಂಡ ಟೂರ್ನಿಯ ಅಷ್ಟು ಪಂದ್ಯಗಳಲ್ಲು ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವುದಲ್ಲದೆ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತು ಫೈನಲ್‌ ಪಂದ್ಯವನ್ನು ಅರ್ಹವಾಗಿಯೆ ಗೆದ್ದು ಬೀಗಿದ ಭಾರತ ವಿಶ್ವಕಪ್ ಗೆಲ್ಲುವ ಮೂಲಕ ಕಿರಿಯರ ವಿಶ್ವಕಪ್‌ನಲ್ಲಿ  ಟ್ರೋಫಿಯ ದಾಖಲೆಯನ್ನು ಭಾರತ 5ಕ್ಕೇರಿಸಿಕೊಂಡಿದೆ.
*ಭಾರತ ತಂಡ:* ಯಶ್ ಧುಲ್ (ನಾಯಕ), ಹರ್ನೂರ್ ಸಿಂಗ್, ಅಂಗ್‌ಕ್ರಿಶ್ ರಘುವಂಶಿ, ಎಸ್‌ಕೆ ರಶೀದ್ (ಉಪನಾಯಕ), ನಿಶಾಂತ್ ಸಿಂಧು, ಸಿದ್ದಾರ್ಥ್ ಯಾದವ್, ದಿನೇಶ್ ಬಾನಾ (ವಿಕೆಟ ಕೀಪರ್), ಆರಾಧ್ಯ ಯಾದವ್ (ವಿಕೆಟ್ ಕೀಪರ್), ರಾಜ್ ಅಂಗದ್ ಬಾವಾ, ಮಾನವ್ ಪರಾಖ್, ಕೌಶಲ್ ತಾಂಬೆ , ಆರ್ ಎಸ್ ಹಂಗರ್ಗೇಕರ್, ವಾಸು ವತ್ಸ್, ವಿಕ್ಕಿ ಒಸ್ತ್ವಾಲ್, ರವಿಕುಮಾರ್, ಗರ್ವ್ ಸಾಂಗ್ವಾನ್.
ಸ್ಟ್ಯಾಂಡ್‌ಬೈ ಆಟಗಾರರು: ರಿಷಿತ್ ರೆಡ್ಡಿ, ಉದಯ್ ಸಹರನ್, ಅಂಶ್ ಗೋಸಾಯಿ, ಅಮಿತ್ ರಾಜ್ ಉಪಾಧ್ಯಾಯ, ಪಿಎಂ ಸಿಂಗ್ ರಾಥೋಡ್.
ಭಾರತ ಕ್ರಿಕೆಟ್ ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದಿನದಿಂದ ದಿನಕ್ಕೆ ಎತ್ತರಕ್ಕೆ ಏರುತ್ತಿದೆ ಭವಿಷ್ಯದ ಉತ್ತಮ ಆಟಗಾರರು ಸಾಕಷ್ಟು ಮಂದಿ ತಮ್ಮ ಉತ್ತಮ ಆಟವನ್ನು ಪ್ರದರ್ಶಿಸುತ್ತಿದ್ದಾರೆ
Exit mobile version