SportsKannada | ಸ್ಪೋರ್ಟ್ಸ್ ಕನ್ನಡ

ಡಿಸೆಂಬರ್ 15 ರಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಏಕದಿನ…ಸೂಪರ್ ಸಂಡೆಯಲ್ಲಿ ಯಾರಿಗೆ ಗೆಲುವು?

ನಾಳೆಯಿಂದ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಏಕದಿನ ಸರಣಿ ಅಡಲಿದ್ದು, ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಎರಡು ತಂಡಗಳು ಕಠಿಣ ಅಭ್ಯಾಸ ನಡೆಸುತ್ತಿವೆ. ಟಿ20 ಸರಣಿ ಭರ್ಜರಿ ಗೆಲುವಿನ ಬೆನ್ನಲ್ಲೇ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಗೆ ಟೀಂ ಇಂಡಿಯಾ ಸಿದ್ಧವಾಗಿದ್ದು, ಮೊದಲ ಪಂದ್ಯ ಆಡಲು ಚೆನ್ನೈಗೆ ಬಂದಿಳಿದೆ.ಟಿ20 ಸರಣಿಯನ್ನು ಗೆದ್ದಿರುವ ಭಾರತ ತಂಡ ತನ್ನ ಆತ್ಮವಿಶ್ವಾಸ ಸ್ವಲ್ಪ ಹೆಚ್ಚು ಮಾಡಿಕೊಂಡಿದೆ.

ಟಿ20 ಸರಣಿ ಯಲ್ಲಿ 2 ಪಂದ್ಯ ಸೋತು ಹಿನ್ನಡೆ ಅನುಭವಿಸಿರುವ ಪ್ರವಾಸಿ ತಂಡ ಏಕದಿನ ಸರಣಿ ಗೆದ್ದು ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ವಿಂಡೀಸ್ ಸರಣಿಯಿಂದ ಭುವಿ ಮತ್ತು ಧವನ್ ಔಟ್:

ಸರಣಿ ಆರಂಭಕ್ಕೂ ಮುನ್ನವೇ ಭಾರತಕ್ಕೆ ಮತ್ತೊಂದು ಆಘಾತವಾಗಿದೆ. ಸ್ನಾಯು ಸೆಳೆತಕ್ಕೊಳಗಾಗಿರುವ ಅನುಭವಿ ಬೌಲರ್ ಭುವಿ ವಿಂಡೀಸ್ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ತಿಳಿಸಿದ್ದು, ಭುವಿ ಬದಲಿಗೆ ಶಾರ್ದೂಲ್ ಠಾಕೂರ್​​ಗೆ ಅವಕಾಶ ನೀಡಲಾಗಿದೆ. ಕಳೆದ ಕೆಲವು ಸಮಯಗಳಿಂದ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಭುವನೇಶ್ವರ್ ಕುಮಾರ್, ವಿಂಡೀಸ್ ಸರಣಿಯ ವೇಳೆ ತಂಡವನ್ನು ಸೇರಿಕೊಂಡಿದ್ದರು. ಇದೀಗ ಗಾಯದಿಂದಾಗಿ ಮತ್ತೆ ತಂಡದಿಂದ ಹೊರಗುಳಿವಂತಾಗಿದೆ.
ಹಾಗೆ ಈಗಾಗಲೇ ಗಾಯಾಳು ಆಗಿರುವ ಶಿಖರ್ ಧವನ್ ಸಂಪೂರ್ಣ ಗುಣಮುಖರಾಗದ ಕಾರಣ ಕೂಡ ಅನುಭವಿ ಧವನ್ ಕೂಡ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಇವರ ಬದಲು ಕರ್ನಾಟಕದ ಆಟಗಾರ ಮಯಾಂಕ್ ಅಗರ್ವಾಲ್​ಗೆ ಅವಕಾಶ ನೀಡಲಾಗಿದೆ.ಹಾಗೆ ಬಹು ದಿನಗಳ ಬಳಿಕ ಕೇದರ್ ಜಾಧವ್ ಟೀಂ ಇಂಡಿಯಾಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ.
ಒಟ್ಟಿನಲ್ಲಿ ಭಾರತದ ಗಾಯಾಳುಗಳ ಪಟ್ಟಿ ಬೆಳೆಯುತ್ತಲೇ ಇದೆ. ಜಸ್ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಈಗಾಗಲೇ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುವ ಹಂತದಲ್ಲಿದ್ದು, ಜನವರಿ ವೇಳೆಯಲ್ಲಿ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ನಾಳೆ ಚೆನ್ನೈ (ಡಿ.15), 2ನೇ ಪಂದ್ಯ ವಿಶಾಖಪಟ್ಟಣ (ಡಿ.18) ಹಾಗೂ ಅಂತಿಮ ಪಂದ್ಯ ಕಟಕ್ (ಡಿ.22) ಕ್ರೀಡಾಂಗಣದಲ್ಲಿ ನಡೆಯಲಿದೆ.
ಹಾಗೆ ಭಾರತ ಮತ್ತು ವೆಸ್ಟ್ ಇಂಡೀಸ್ ಇದುವರೆಗಿನ ಮುಖಾಮುಖಿ ನೋಡುವುದಾದರೆ
ಒಟ್ಟು ಪಂದ್ಯಗಳು 127
ಭಾರತ ಗೆಲುವು 60
ವೆಸ್ಟ್ ಇಂಡೀಸ್ 62
ಟೈ 2
ಪಂದ್ಯ ರದ್ದು 3
ಈ ಅಂಕಿ ಅಂಶಗಳ ಪ್ರಕಾರ ವೆಸ್ಟ್ ಇಂಡೀಸ್ ಸ್ವಲ್ಪ ಮಟ್ಟಿನ ಮುನ್ನಡೆ ಇದ್ದರೂ ಕೂಡ ಪ್ರಸ್ತುತ ಭಾರತ ತಂಡ ಬಲಿಷ್ಠವಾಗಿದ್ದು ವಿಂಡೀಸ್ ನ ಮಣಿಸುವ ವಿಶ್ವಾಸದಲ್ಲಿದೆ.

ಏಕದಿನಕ್ಕೆ ಭಾರತ ತಂಡ ಇಂತಿದೆ.
ಏಕದಿನ ತಂಡ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪನಾಯಕ), ಶ್ರೇಯಸ್‌ ಐಯ್ಯರ್‌, ಕೇದರ್‌ ಜಾಧವ್‌, ಮಯಾಂಕ್ ಅಗರ್ವಾಲ್, ಕೆ.ಎಲ್‌ ರಾಹುಲ್‌, ರಿಷಭ್‌ ಪಂತ್‌, ಮನೀಶ್‌ ಪಾಂಡೆ, ರವೀಂದ್ರ ಜಡೇಜಾ, ಶಿವಂ ದುಬೆ, ಯಜುವೇಂದ್ರ ಚಹಲ್‌, ದೀಪಕ್‌ ಚಹರ್‌, ಕುಲ್ದೀಪ್‌ ಯಾದವ್‌, ಮೊಹಮ್ಮದ್‌ ಶಮಿ, ಶಾರ್ದೂಲ್ ಠಾಕೂರ್

– ಪ್ರೀತಮ್ ಹೆಬ್ಬಾರ್.

Exit mobile version