SportsKannada | ಸ್ಪೋರ್ಟ್ಸ್ ಕನ್ನಡ

ಭಾರತ ತಂಡದ ಹೊಸ ಜೆರ್ಸಿ ಅನಾವರಣ: ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಹೊಸ ಜೆರ್ಸಿಯಲ್ಲಿ ಕಣಕ್ಕೆ ಇಳಿಯಲಿದೆ ಟೀಮ್ ಇಂಡಿಯಾ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂಬರುವ 2022 ರ ಟಿ 20 ವಿಶ್ವಕಪ್‌ಗಾಗಿ ಟೀಮ್ ಇಂಡಿಯಾದ ಹೊಸ ಅನಾವರಣಗೊಳಿಸಲಾಗುವುದಾಗಿ ಹೇಳಿತ್ತು. ಹೊಸ ಜೆರ್ಸಿಯ ಬಿಡುಗಡೆಗಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು ಎನ್ನುವುದು ಸತ್ಯ. ಈಗ ಅಭಿಮಾನಿಗಳ ಕಾಯುವಿಕೆಯು ಅಂತ್ಯ ವಾಗಿದೆ. ಅದರಂತೆ ಸೆಪ್ಟೆಂಬರ್ 18ರಂದು ಹೊಸ ವಿನ್ಯಾಸದ ಜೆರ್ಸಿಯನ್ನು ಅನಾವರಣಗೊಳಿಸಲಾಗಿದೆ.
ಈ ಬಾರಿಯ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಹೊಸ ಡ್ರರ್ಸ್ ನೊಂದಿಗೆ ಕಣಕ್ಕಿಳಿಯಲಿದೆ. ಟೀಮ್ ಇಂಡಿಯಾದ ಅಧಿಕೃತ ಜೆರ್ಸಿ ಪ್ರಾಯೋಜಕ ಎಂಪಿಎಲ್ (MPL) ಸ್ಪೋರ್ಟ್ಸ್ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯಗಳಲ್ಲಿ ಭಾರತ ತಂಡದ ಆಟಗಾರರು ಇದೇ ಜೆರ್ಸಿಯನ್ನು ಧರಿಸಿ ಕಣಕ್ಕಿಳಿಯಲಿದ್ದಾರೆ.
ಈ ಜೆರ್ಸಿಯು ಮೊದಲಿನಂತೆಯೇ ತಿಳಿ ಆಕಾಶ ನೀಲಿ ಛಾಯೆಗಳನ್ನು ಹೊಂದಿದೆ. 2007ರಲ್ಲಿ ಟಿ20 ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಯ ಸಂದರ್ಭದಲ್ಲಿ ಭಾರತ ಇದೇ ರೀತಿಯ ಹೊಸ ಜೆರ್ಸಿಯನ್ನು ಹೊಂದಿತ್ತು. ಪುರುಷರ ತಂಡವನ್ನು ಹೊರತುಪಡಿಸಿ, ಹರ್ಮನ್‌ಪ್ರೀತ್ ಕೌರ್ ಮತ್ತು ತಂಡ ಕೂಡ ತಮ್ಮ ಮುಂಬರುವ ಪಂದ್ಯಗಳಿಗೆ ಇದೇ ಜರ್ಸಿಯನ್ನು ಧರಿಸಲಿದ್ದಾರೆ.
ಸೆಪ್ಟೆಂಬರ್ 20ರಿಂದ ಟಿ20 ಸರಣಿ ಆರಂಭವಾಗಲಿದೆ
ಏಷ್ಯಾ ಕಪ್ 2022 ರ ಸಮಯದಲ್ಲಿ ಟೀಮ್ ಇಂಡಿಯಾದ ಜರ್ಸಿಗೆ ಹೋಲಿಸಿದರೆ, ಹೊಸ  ನೀಲಿ ಬಣ್ಣದ ಹಗುರವಾದ ಆಛಾಯೆಯನ್ನು ಹೊಂದಿದೆ, ಅವರು 2007 ರ ಟಿ20 ವಿಶ್ವಕಪ್‌ನಲ್ಲಿ ಹೊಂದಿದ್ದರು. ಎಂಪಿಎಲ್ (MPL) 2020 ರಲ್ಲಿ ಕಿಟ್ ಪ್ರಾಯೋಜಕರಾಗಿ ಅಧಿಕಾರ ವಹಿಸಿಕೊಂಡ ನಂತರದ ವರ್ಷಗಳಲ್ಲಿ ಇದು ಮೂರನೇ ಭಾರತೀಯ ಜೆರ್ಸಿಯಾಗಿದೆ.
ಮೇಲೆ ಹೇಳಿದಂತೆ, ಸೆಪ್ಟೆಂಬರ್ 20 ರಂದು (ಮಂಗಳವಾರ) ಮೊಹಾಲಿಯಲ್ಲಿ ಪ್ರಾರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. 2022 ರ ಟಿ20 ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ನಿರಾಸೆ ಅನುಭವಿಸಿರುವ ಟೀಂ ಇಂಡಿಯಾ, ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್‌ಗೆ ಹೋಗುವ ಮೊದಲು ಸರಣಿ ಗೆಲ್ಲುವ ಮೂಲಕ ಆತ್ಮವಿಶ್ವಾಸ ಪಡೆಯಲು ಯತ್ನಿಸಲಿದೆ.
ಮೊಹಮ್ಮದ್ ಶಮಿ ಬದಲಿಗೆ ಉಮೇಶ್ ಯಾದವ್
ಆದಾಗ್ಯೂ, ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆಯ ನಂತರ ಹಿರಿಯ ವೇಗಿ ಮೊಹಮ್ಮದ್ ಶಮಿ ಹೊರಗುಳಿಯುವುದರೊಂದಿಗೆ ಭಾರತ ತಂಡಕ್ಕೆ ಆಘಾತ ಎದುರಾಗಿದೆ ಇದು ದುರಂತ ಕೂಡ ಹೌದು
ಮುಂಬರುವ ಪಂದ್ಯಗಳಿಗೆ ಅವರ ಬದಲಿ ಆಟಗಾರನಾಗಿ ವೇಗಿ ಉಮೇಶ್ ಯಾದವ್ ಅವರನ್ನು ಆಯ್ಕೆ ಸಮಿತಿ ಹೆಸರಿಸಿದೆ. ಏತನ್ಮಧ್ಯೆ, ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ತಂಡಕ್ಕೆ ಮರಳಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸಿ ತಂಡವು ಪ್ರತಿಭಾವಂತ ಬ್ಯಾಟರ್ ಟಿಮ್ ಡೇವಿಡ್ ಅವರನ್ನು ತಮ್ಮ ತಂಡದಲ್ಲಿ ಹೆಸರಿಸಿದೆ ಈತ ಬಲಗೈ ಬ್ಯಾಟರ್ ಡೆತ್ ಓವರ್‌ಗಳಲ್ಲಿ ಬ್ಯಾಟ್‌ನೊಂದಿಗೆ ನಿರ್ಣಾಯಕ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ.
Exit mobile version