SportsKannada | ಸ್ಪೋರ್ಟ್ಸ್ ಕನ್ನಡ

ಶಿರ್ವ-ಹೆಚ್.ಜೆ.ಸಿ. ಕ್ರಿಕೆಟ್ ಅಕಾಡೆಮಿ ತೃತೀಯ ಆವೃತ್ತಿ ಉದ್ಘಾಟನೆ

ಶಿರ್ವ,ನ.29: ಇಂದು ಸ್ಥಳೀಯ ಹಿಂದೂ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಕಾಲೇಜಿನ ಹಳೆವಿದ್ಯಾರ್ಥಿ ಸಂಘ ಪ್ರಾಯೋಜಿತ ತೃತೀಯ ಆವೃತ್ತಿಯ ಸೀಸನ್ ಬಾಲ್ ಕ್ರಿಕೆಟ್ ತರಬೇತಿ
ಇಂದು ಸ್ಥಳೀಯ ಹಿಂದೂ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಕಾಲೇಜಿನ ಹಳೆವಿದ್ಯಾರ್ಥಿ ಸಂಘ ಪ್ರಾಯೋಜಿತ ತೃತೀಯ ಆವೃತ್ತಿಯ ಸೀಸನ್ ಬಾಲ್ ಕ್ರಿಕೆಟ್ ತರಬೇತಿ ಕಾರ್ಯಕ್ರಮವನ್ನು ಉಡುಪಿ, ಕರಾವಳಿ ಕಾವಲು ಪಡೆಯ ಪೊಲೀಸ್ ವರಿಷ್ಟರಾದ  ಶ್ರೀಚೇತನ್ IPS ಅವರು ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಿದ್ದರೆ ಶಿಸ್ತು ಮತ್ತು ಕಠಿಣ ಪರಿಶ್ರಮ ಅಗತ್ಯ ಎಂಬ ಕಿವಿಮಾತನ್ನು ವಿದ್ಯಾರ್ಥಿಗಳಿಗೆ ಹೇಳಿದರು. ಇಲ್ಲಿನ ತರಬೇತು ದಾರರಾಗಿರುವ ಶ್ರೀ ಸದಾನಂದ್ ಶಿರ್ವ ಅವರು ಕರ್ನಾಟಕ ಬ್ಯಾಂಕ್ ತಿಪಟೂರಿನಲ್ಲಿ ಕೆಲಸಮಾಡುತ್ತಿದ್ದ ಸಂದರ್ಭದಲ್ಲಿ ನಾನಿನ್ನೂ 6ನೆಯ ತರಗತಿಯ ವಿಧ್ಯಾರ್ಥಿ  ಆ ದಿನಗಳಲ್ಲಿ  ಅವರು  ನಮಗೆ  ಕ್ರಿಕೆಟ್  ಆಡಲು ತರಬೇತಿ ನೀಡಿದ್ದರು ಅವರಂತಹ ತರಬೇತುದಾರರು ನಿಮಗೆ ಸಿಕ್ಕಿರುವುದು ನಿಮ್ಮ ಅದೃಷ್ಟ ಎಂದು ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು.
ಸಮಾರಂಭದ ಆಧ್ಯಕ್ಷತೆಯನ್ನು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕುತ್ಯಾರು ಪ್ರಸಾದ್ ಶೆಟ್ಟಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಉಡುಪಿ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ  ಶ್ರೀ ಬಾಲಕೃಷ್ಣ ಪರ್ಕಳ ಮತ್ತು ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಶ್ರೀ ಸಚ್ಚಿದಾನಂದ ಹೆಗ್ಡೆ ಅವರು ಭಾಗವಹಿಸಿದ್ದರು.ತರಬೇತುದಾರರಾದ ಶ್ರೀ ಸದಾನಂದ ಶಿರ್ವ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಶ್ರೀ ಪ್ರಶಾಂತ್ ಶೆಟ್ಟಿ ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ ಶ್ರೀ ರಮಾನಂದ.ಎಸ್, ಮಣಿಪಾಲ ಕ್ರಿಕೆಟ್ ಅಕಾಡಮಿಯ  ತರಬೇತುದಾರ ರಾದ  ಶ್ರೀ ರೆನ್,ನಿವೃತ ಅಧ್ಯಾಪಕರಾದ ಶ್ರೀ ಪ್ರಭಾಕರ್,ಶ್ರೀ ಅನಂತ ಮೂಡಿತ್ತಾಯ, ಹಿರಿಯ ಕ್ರಿಕೆಟರ್ ಗಳಾದ ಶ್ರೀ ಸಫ್ದಾರ್, ಸಯ್ಯದ್, ರಾಜೇಶ್ ಮಚಾದೋ, ಮತ್ತು ಹಳೆವಿದ್ಯಾರ್ಥಿ   ಸದಸ್ಯರಾದ ಶ್ರೀ ಡೇವಿಡ್, ರೂಪೇಶ್ ಆಚಾರ್ಯ,ನವೀನ್ ಶೆಟ್ಟಿ,ರಾಜೇಶ್ ಶೆಟ್ಟಿ, ಶ್ರೀ ಶೇಖರ್,ನವೀನ್
ಮೋಹನ್ ಇವರು ಉಪಸ್ತಿತರಿದ್ದರು.
Exit mobile version