Site icon SportsKannada ಸ್ಪೋರ್ಟ್ಸ್ ಕನ್ನಡ

9 ವರ್ಷಗಳ ನಂತರ ಆರ್.ಸಿ.ಬಿ ಐಪಿಎಲ್ ಫೈನಲ್ ತಲುಪಿದ್ದು ಹೇಗೆ..? ಇದೇ ನೋಡಿ ಸಕ್ಸಸ್ ಮಂತ್ರ..!

9 ವರ್ಷಗಳ ನಂತರ ಆರ್.ಸಿ.ಬಿ ಐಪಿಎಲ್ ಫೈನಲ್ ತಲುಪಿದ್ದು ಹೇಗೆ..? ಇದೇ ನೋಡಿ ಸಕ್ಸಸ್ ಮಂತ್ರ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂಬತ್ತು ವರ್ಷಗಳ ನಂತರ ಐಪಿಎಲ್ ಫೈನಲ್ ತಲುಪಿದೆ. ಚಂಡೀಗಢದ ಮುಲ್ಲಾನ್’ಪುರ ಮೈದಾನದಲ್ಲಿ ಗುರುವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆತಿಥೇಯ ಪಂಜಾಬ್ ಕಿಂಗ್ಸ್ ಪಡೆಯನ್ನು ಬಗ್ಗು ಬಡಿದು ನಾಲ್ಕನೇ ಬಾರಿ ಫೈನಲ್’ಗೆ ಲಗ್ಗೆ ಇಟ್ಟಿದೆ.
ಈ ಬಾರಿ ಆರ್.ಸಿ.ಬಿ ಯಶಸ್ಸಿಗೆ ಕಾರಣ ಟೀಮ್ ಎಫರ್ಟ್. ಸಂಘಟಿತ ಪ್ರದರ್ಶನವೇ ರಾಯಲ್ ಚಾಲೆಂಜರ್ಸ್ ತಂಡದ ಸಕ್ಸಸ್ ಸೀಕ್ರೆಟ್. ಇದಕ್ಕೆ ಸಾಕ್ಷಿ ಆಟಗಾರರು ಪಡೆದ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗಳು. ಆರ್.ಸಿ.ಬಿ ತಂಡ ಐಪಿಎಲ್-2025 ಟೂರ್ನಿಯಲ್ಲಿ ಇದುವರೆಗೆ ಒಟ್ಟು 14 ಪಂದ್ಯಗಳನ್ನಾಡಿದ್ದು, ಈ ಪೈಕಿ ಒಂಬತ್ತು ಮಂದಿ ಆಟಗಾರರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

ಈ ಬಾರಿ ಆರ್.ಸಿ.ಬಿ ಗೆದ್ದ ಪಂದ್ಯಗಳಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದವರ ಪಟ್ಟಿ ಹೀಗಿದೆ:

ಕೃಣಾಲ್ ಪಾಂಡ್ಯ (Vs ಕೋಲ್ಕತಾ ನೈಟ್ ರೈಡರ್ಸ್)

ರಜತ್ ಪಾಟಿದಾರ್ Vs ಚೆನ್ನೈ ಸೂಪರ್ ಕಿಂಗ್ಸ್)

ರಜತ್ ಪಾಟಿದಾರ್ (Vs ಮುಂಬೈ ಇಂಡಿಯನ್ಸ್)

ಫಿಲ್ ಸಾಲ್ಟ್ (Vs ರಾಜಸ್ಥಾನ ರಾಯಲ್ಸ್)

ಟಿಮ್ ಡೇವಿಡ್ (Vs ಪಂಜಾಬ್ ಕಿಂಗ್ಸ್)

ವಿರಾಟ್ ಕೊಹ್ಲಿ (Vs ಪಂಜಾಬ್ ಕಿಂಗ್ಸ್)

ಜೋಶ್ ಹೇಜಲ್ವುಡ್ (Vs ರಾಜಸ್ಥಾನ ರಾಯಲ್ಸ್)

ಕೃಣಾಲ್ ಪಾಂಡ್ಯ (Vs ಡೆಲ್ಲಿ ಕ್ಯಾಪಿಟಲ್ಸ್)

ರೊಮಾರಿಯೋ ಶೆಫರ್ಡ್ (Vs ಚೆನ್ನೈ ಸೂಪರ್ ಕಿಂಗ್ಸ್)

ಜಿತೇಶ್ ಶರ್ಮಾ (Vs ಲಕ್ನೋ ಸೂಪರ್ ಜೈಂಟ್ಸ್)

ಸುಯಾಶ್ ಶರ್ಮಾ (Vs ಪಂಜಾಬ್ ಕಿಂಗ್ಸ್)

Exit mobile version