SportsKannada | ಸ್ಪೋರ್ಟ್ಸ್ ಕನ್ನಡ

ಸಮಾಜಮುಖಿ ಕೆಲಸಕ್ಕಾಗಿ ಐಪಿಎಲ್‌ನಲ್ಲಿ ಕೆಲಸ ಮಾಡಿದೆ ಎಂದು ಹೇಳಿಕೊಳ್ಳಲು ನನಗೆ ನಾಚಿಕೆ ಇಲ್ಲ: ಸಂಸದ ಗೌತಮ್ ಗಂಭೀರ್..!

“ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗಳಲ್ಲಿ ಲೋಕಸಭೆಯ ಸದಸ್ಯನಾದ ನಂತರವೂ ಸಹ ಕೆಲಸ ಮಾಡುವುದಕ್ಕೆ ಕಾರಣವೇನೆಂದರೆ ಪ್ರತಿ ತಿಂಗಳು 5000 ಜನಕ್ಕೆ ನಾನು ಆಹಾರ ವ್ಯವಸ್ಥೆ ಮಾಡಲು ಪಣತೊಟ್ಟಿದ್ದೇನೆ ಈ ಕಾರ್ಯಕ್ಕೆ 25 ಲಕ್ಷ ಹಣ ಬೇಕು. ಇದು ವರ್ಷಕ್ಕೆ ಸುಮಾರು 2.75 ಕೋಟಿ ರೂಪಾಯಿಗಳಾಗುತ್ತದೆ. ಹಾಗೂ ಗ್ರಂಥಾಲಯ ಕಟ್ಟಿಸಲು ನಾನು 25 ಲಕ್ಷ ಖರ್ಚು ಮಾಡಿದ್ದೇನೆ ಅದು ನನ್ನ ಸ್ವಂತ ಹಣದಲ್ಲಿ . ನನ್ನ ಕ್ಷೇತ್ರದಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಕ್ಕಾಗಿ ಜನತೆಗೆ ಕೇಂದ್ರ ಸರ್ಕಾರದ ಅನುದಾನವಲ್ಲದೆ  ನಾನು ನನ್ನ ಸ್ವಂತ ಹಣವನ್ನು ಖರ್ಚು ಮಾಡುತ್ತಿದ್ದೇನೆ ಹೊರತು ಸರ್ಕಾರ ನೀಡುವ ಹಣವನ್ನೆ ನಂಬಿಕುಳಿತಿಲ್ಲ. ಇದಕ್ಕೆಲ್ಲಾ ಹಣ ಖರ್ಚು ಮಾಡಲು  ನಾನು ಮನೆಯಲ್ಲಿ ಹಣದ ಮರವನ್ನೂ ಬೆಳೆಸಿಲ್ಲ, ಹೀಗಾಗಿ ಐಪಿಎಲ್ ಟೂರ್ನಿಯಲ್ಲಿ ಕೆಲಸ ಮಾಡಿದೆ”
ಅವಕಾಶ ದೊರೆತಾಗ ಕ್ರಿಕೆಟ್ ಅಂಗಳದಲ್ಲಿ ಕೆಲಸ ಮಾಡಿ ನನ್ನನ್ನು ನಂಬಿ ಸಂಸದನಾಗಿ ಆಯ್ಕೆಮಾಡಿದ ಕ್ಷೇತ್ರದ ಜನತೆಯ ಜೋತೆಗೆ ನಿಲ್ಲುತ್ತೇನೆ ಎಂದು ಗೌತಮ್ ಗಂಭೀರ್ ಟೀಕಾಕಾರರಿಗೆ ಉತ್ತರವನ್ನು ನೀಡಿದ್ದಾರೆ.
ಈ ವಿಷಯವನ್ನು ಹೇಳಿಕೊಳ್ಳುವುದರಲ್ಲಿ ನನಗೆ ಯಾವುದೇ ಅಂಜಿಕೆ ಇಲ್ಲ ನನಗೆ ನನ್ನ ಕ್ಷೇತ್ರದ ಜನತೆ ಮುಖ್ಯ
ಇನ್ನೂ ಮುಂದುವರಿದು ಮಾತನಾಡಿರುವ ಗೌತಮ್ ಗಂಭೀರ್ ನಾನು ಕೆಲಸ ಮಾಡಿದರೆ ಮಾತ್ರ ಆ 5000 ಜನರಿಗೆ ಆಹಾರ ವ್ಯವಸ್ಥೆ ಮಾಡಲು ಸಾಧ್ಯ, ಅದಕ್ಕಾಗಿ ಐಪಿಎಲ್ ಟೂರ್ನಿಯಲ್ಲಿ ಕೆಲಸ ಮಾಡಿದ್ದೇನೆ ಎಂಬುದನ್ನು ಹೇಳಿಕೊಳ್ಳುವುದರಲ್ಲಿ ನನಗೆ ಯಾವುದೇ ನಾಚಿಕೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಸಮಾಜಮುಖಿ ಕೆಲಸಗಳಲ್ಲಿ ಗಂಭೀರ್ ಎತ್ತಿದ ಕೈ ಎನ್ನುವುದು ಈಗಾಗಲೇ ಎಲ್ಲರಿಗೂ ತಿಳಿದ ವಿಷಯ
ಇನ್ನೂ ಕ್ರಿಕೆಟ್ ಹೊರತುಪಡಿಸಿ ಗಂಭೀರ್ ಜನನಾಯಕನಾಗಿ ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂಬುದರ ಕುರಿತು ಕಣ್ಣಾಡಿಸಿದರೆ ಅವರ ಉತ್ತಮ ಕಾರ್ಯಗಳು ನಮಗೆ ಕಾಣಸಿಗಲಿವೆ. ಅವರ ಕ್ಷೇತ್ರದಲ್ಲಿ ಉಚಿತ ಭೋಜನ ವ್ಯವಸ್ಥೆ ಕೇವಲ ಒಂದು ರೂಪಾಯಿಗೆ ಹೊಟ್ಟೆ ತುಂಬಾ ಊಟ, ಉಚಿತ ಲೈಬ್ರರಿ ಹೀಗೆ ಹತ್ತು
ಹಲವಾರು ಸಮಾಜಮುಖಿ ಕೆಲಸಗಳು ಕಂಡುಬರುತ್ತವೆ
ಸಂಸದನಾಗಿ ತನ್ನ ಕ್ಷೇತ್ರದ ಜನತೆಯ ಸೇವೆಗೆ ಪಣತೋಟ್ಟ ವಿಶ್ವ ಕಂಡ ಖ್ಯಾತ ಕ್ರಿಕೆಟಿಗ ಗೌತಮ್ ಗಂಭೀರ್ ಅವರಿಗೆ ಶುಭವಾಗಲಿ ಅವರ ಬಡವರ ಮೇಲಿನ ಕಾಳಜಿಯ ಜೊತೆ ಜೋತೆಗೆ ಸಮಾಜಸೇವೆ ಕೂಡ ನಿರಂತರವಾಗಿ ಸಾಗಲಿ …..
Exit mobile version