SportsKannada | ಸ್ಪೋರ್ಟ್ಸ್ ಕನ್ನಡ

ಕುಂದಾಪುರ : ಟೊರ್ಪೆಡೋಸ್ 80,90 ರ ದಶಕ ಯುವ ಪ್ರತಿಭೆಗಳ ಆರ್ಭಟ ಅನಾವರಣಗೊಂಡ ಸುವರ್ಣಯುಗ

ರಾಜ್ಯ ಟೆನ್ನಿಸ್ ಕ್ರಿಕೆಟ್ ವಲಯದಲ್ಲಿ ವಿಶಿಷ್ಟ ಅಧ್ಯಾಯ ಬರೆದ ತಂಡ ಟೊರ್ಪೆಡೋಸ್ ಕುಂದಾಪುರ, 80,90 ರ ದಶಕ ಯುವ ಪ್ರತಿಭೆಗಳ ಜೊತೆ,ಕುಂದಾಪುರ ಪರಿಸರದ ದೈತ್ಯ ಪ್ರತಿಭೆಗಳ ಆರ್ಭಟ ಅನಾವರಣಗೊಂಡ ಸುವರ್ಣಯುಗ.

ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಇತ್ತೀಚೆಗಷ್ಟೇ “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ಪುರಸ್ಕೃತ ,ರಾಷ್ಟ್ರೀಯ ಕ್ರೀಡಾಪಟು,ಕ್ರೀಡಾ ಶಿಕ್ಷಕ ನಾಯಕ ಗೌತಮ್ ಶೆಟ್ಟಿ ಯವರ ನೇತೃತ್ವದಲ್ಲಿ ಹಲವಾರು ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಕೂಟಗಳ ಜೊತೆ ಅಂತರಾಷ್ಟ್ರೀಯ ಮಟ್ಟದ ಪಂದ್ಯಾಕೂಟ ಸಂಘಟಿಸಿ, ಇತ್ತೀಚೆಗಷ್ಟೇ ಯಶಸ್ವಿ ಟಿ‌.ಪಿ.ಎಲ್ ಪಂದ್ಯಾಕೂಟ ಸಂಘಟಿಸಿರುವುದು ಟೊರ್ಪೆಡೋಸ್ ನ ಹಿರಿಮೆಗೆ ಗರಿಮೆಯಿದ್ದಂತೆ.

ಉದ್ಯೋಗ ನಿಮಿತ್ತ ತಂಡದ ಆಟಗಾರರು ದೂರದೂರಿಗೆ ತೆರಳಬೇಕಾದ ಸಂದರ್ಭದಲ್ಲಿಯೂ, ಟೊರ್ಪೆಡೋಸ್ ತಂಡವನ್ನು ಏಕಾಂಗಿಯಾಗಿ ಮುಂದುವರೆಸಿಕೊಂಡು  ಬಂದಿರುವ ಗೌತಮ್ ಶೆಟ್ಟಿಯವರು ಮಂಗಳೂರಿನ ಹಳೆಯಂಗಡಿಯ ಲೈಟ್ ಹೌಸ್ ಬಳಿ “ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್” ಸ್ಥಾಪಿಸಿ ಯುವ ಕ್ರೀಡಾ ಪ್ರತಿಭೆಗಳನ್ನು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವ ಕಾಯಕದಲ್ಲಿ ತೊಡಗಿದ್ದಾರೆ.

ವಿದ್ಯಾರ್ಥಿಗಳಿಂದ ಪ್ರಾರಂಭವಾಗಿ ವೃತ್ತಿಪರವಕೀಲರು,ವೈದ್ಯರು,ಇಂಜಿನಿಯರ್ಸ್ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡ ಹಿರಿಯ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ,ಪ್ರೋತ್ಸಾಹಿಸುತ್ತಿರುವ ಟೊರ್ಪೆಡೋಸ್ ಸಂಸ್ಥೆ ನಾಳೆ ಆಗಸ್ಟ್ 18 ರವಿವಾರದಂದು ಅಂತರ್ ಜಿಲ್ಲಾ ಮಟ್ಟದ ಶಿಕ್ಷಕರಿಗಾಗಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟವನ್ನು ಸಂಘಟಿಸಲಿದೆ.

ಪುರುಷ ಶಿಕ್ಷಕರಿಗಾಗಿ ಓಪನ್ ಮೆನ್ಸ್ ಸಿಂಗಲ್ಸ್ ಹಾಗೂ ಡಬಲ್ಸ್ ಹಾಗೂ ಮಹಿಳಾ ಶಿಕ್ಷಕಿಯರಿಗಾಗಿ ಓಪನ್ ವುಮೆನ್ ಸಿಂಗಲ್ಸ್ ಹಾಗೂ ಡಬಲ್ಸ್ ಪಂದ್ಯಾಕೂಟಗಳು ನಡೆಯಲಿದೆ. ವಿಜೇತರನ್ನು ಅತ್ಯಾಕರ್ಷಕ ಟ್ರೋಫಿಗಳನ್ನು ನೀಡಿ ಪುರಸ್ಕರಿಸಲಿದ್ದಾರೆ.

– ಆರ್.ಕೆ.ಆಚಾರ್ಯ ಕೋಟ.

Exit mobile version