SportsKannada | ಸ್ಪೋರ್ಟ್ಸ್ ಕನ್ನಡ

ಸ್ಟಾರ್ ವರ್ಟೆಕ್ಸ್ ಕಂಪೆನಿಯ ಸಂಸ್ಥಾಪಕಿ ಸಮಾಜಮುಖಿ ಚಿಂತನೆಯ ಕೋಲಾರದ ಗಾಯತ್ರಿ ಮುತ್ತಪ್ಪ ಇವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

ನಾಳಿನ ಉತ್ತಮ ಬದುಕಿನ ನಿರೀಕ್ಷೆ ಮತ್ತು ನಂಬಿಕೆಯೇ ನಮ್ಮ ಬದುಕಿಗೆ ಅರ್ಥ ಕೊಡುವ ಬೆಳಕು, ಆ ಬೆಳಕನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಸಾಗಿಬಂದ ಜೀವನದ ದಾರಿಗೆ ಒಳ್ಳೆಯ ಅರ್ಥ ಬರುತ್ತದೆ
ಇದು ಡಾ. ಗಾಯತ್ರಿ ಮುತ್ತಪ್ಪ ಇವರಿಗೆ ಸಲ್ಲುತ್ತದೆ.
ಕೋಲಾರದ ಗಣಿನಾಡಿನ ಶ್ರೀನಿವಾಸಪುರ ತಾಲ್ಲೂಕಿನ ಮಣಿಗಾನಹಳ್ಳಿಯಲ್ಲಿ ಹುಟ್ಟಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಶ್ರೀನಿವಾಸಪುರದಲ್ಲಿ ಪೂರೈಸಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾಂ ಇಲ್ಲಿ ಇಂಜಿನಿಯರಿಂಗ್ ಪೂರೈಸಿ, 2011 ರಲ್ಲಿ ಕಾರ್ಯನಿರ್ವಾಹಕ ಹುದ್ದೆಯಲ್ಲಿ ತೊಡಗಿಸಿಕೊಂಡ ಇವರು 2016 ರಲ್ಲಿ ತನ್ನದೇ ನಾಯಕತ್ವದಲ್ಲಿ “ಸ್ಟಾರ್ ವರ್ಟೆಕ್ಸ್” ಅನ್ನುವ ಸ್ವಂತ ಸಂಸ್ಥೆಯನ್ನು ಹುಟ್ಟು ಹಾಕಿ ಅದರಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು.
ಕ್ರೀಡೆ ಹಾಗೂ ಸಮಾಜ ಸೇವೆಯಲ್ಲಿ
 ನಿರಂತರವಾಗಿ ತನ್ನನ್ನು ತಾನು ತೊಡಗಿಸಿಕೊಂಡ ಇವರು ಕೊರೋನದ ಸಂಕಷ್ಟದ ನಡುವೆಯೂ ಮನೆ ಮನೆಗೆ ತೆರಳಿ ದಿನ ನಿತ್ಯದ ರೇಷನ್ ಸಾಮಗ್ರಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.2019 ರಲ್ಲಿ ಬಾದಾಮಿಯ ನೆರಪೀಡಿತ ಪ್ರದೇಶಕ್ಕೆ ತೆರಳಿ ಸಂತ್ರಸ್ತರಿಗೆ ಸಹಾಯಹಸ್ತ ನೀಡಿರುತ್ತಾರೆ.
ಇತ್ತೀಚೆಗೆ ಟಿ. ವಿ. 9 ರಲ್ಲಿ ಪ್ರಸಾರವಾದ ನೆಲಮಂಗಲದ ಗೌರಮ್ಮ ಎನ್ನುವ ಮಹಿಳೆಯ ಸಂಕಷ್ಟಕ್ಕೆ ಮರುಗಿ 3 ತಿಂಗಳ ರೇಷನ್ ಸಾಮಗ್ರಿಗಳನ್ನು ನೀಡಿದ್ದು ಅಲ್ಲದೆ ಅನೇಕ ನೊಂದ ಬಡವರಿಗೆ ಸಹಾಯ ನೀಡುತ್ತಿರುವ ಇವರು ಪ್ರಚಾರ ಬಯಸದೆ ತೆರೆಮರೆಯಲ್ಲಿಯೇ ಕೆಲಸವನ್ನು ಪ್ರೀತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೇಕಾಗುವ ಪುಸ್ತಕ ಮತ್ತು ಕ್ರೀಡಾ ಪರಿಕರಗಳನ್ನು ನೀಡಿ ಸಹಕರಿಸಿದ್ದಾರೆ. ಇವೆಲ್ಲದರ ಜೊತೆಗೆ ನೊಂದ ಅನೇಕರಿಗೆ ತನ್ನ ಸಂಸ್ಥೆಯಲ್ಲಿ ಕೆಲಸ ನೀಡುವ ಮೂಲಕ ಅವರ ಭವಿಷ್ಯಕ್ಕೆ ಸಹಕಾರಿಯಾಗಿದ್ದಾರೆ.
ಇತ್ತೀಚೆಗೆ ಇವರ ಸಮಾಜಮುಖಿ ಕೆಲಸ ಮತ್ತು ತೊಡಗುವಿಕೆಯನ್ನು ಗಮನಿಸಿ “UNIVERSAL DEVELOPMENT COUNCIL ” ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ನಿರ್ಧರಿಸಿದ್ದು ಇದೇ ಜುಲೈ ತಿಂಗಳ 10ನೇ ತಾರೀಖಿನಂದು ಅದರ ಪದವಿ ಪ್ರದಾನ ಸಮಾರಂಭ ನಡೆಯಲಿದೆ .
ನಿರಂತರವಾಗಿ ತನ್ನನ್ನು ತಾನು ಸಮಾಜಮುಖಿಯಾಗಿ ತೊಡಗಿಸಿಕೊಂಡಿರುವ ಇವರು ಶ್ರೀನಿವಾಸಪುರದ ದಿ‌.ಲಕ್ಷ್ಮಿ ನರಸಮ್ಮ ಮತ್ತು  ಶ್ರೀಯುತ ಮುತ್ತಪ್ಪ ಇವರ ಪುತ್ರಿ.
ಸಮಾಜದಲ್ಲಿ ಇನ್ನೂ ಹೆಚ್ಚಿನ ನಿಮ್ಮ ಸೇವೆಗಳು ಸಿಗುವಂತಾಗಲಿ ಅನ್ನುವ ಶುಭ ಹಾರೈಕೆಯೊಂದಿಗೆ
ಡಾ. ಗಾಯತ್ರಿ ಮುತ್ತಪ್ಪ ಇವರಿಗೆ ರಾಜ್ಯ ಟೆನಿಸ್ ಕ್ರಿಕೆಟ್ ಮತ್ತು ಸ್ಪೋರ್ಟ್ಸ್ ಕನ್ನಡ ಜಾಲತಾಣದ ವತಿಯಿಂದ ಹಾರ್ದಿಕ ಶುಭಾಶಯಗಳು.
Exit mobile version