SportsKannada | ಸ್ಪೋರ್ಟ್ಸ್ ಕನ್ನಡ

ವಿಶ್ವಜೀತ್ ಸಾಹಸ-10pl “ಫ್ರೆಂಡ್ಸ್ ಕುವೈಟ್” ವಿಶ್ವ ವಿಜೇತ.

 

ಯು ಎ ಇ ಮೂಲದ ತೈಲ ಮತ್ತು ಅನಿಲ ಉತ್ಪಾದನಾ ಘಟಕ ಪೆಟ್ರೋಮ್ಯಾನ್ ಸಂಸ್ಥೆ ಮತ್ತು ಶಾರ್ಜಾದ ಕ್ರಿಕೆಟ್ ಕೌನ್ಸಿಲ್ ಸಹಭಾಗಿತ್ವದಲ್ಲಿ ನಡೆದ ಟೆನ್ನಿಸ್ ಕ್ರಿಕೆಟ್ ವಿಶ್ವಕಪ್ 10pl ಸೀಸನ್ 3 ಚಾಂಪಿಯನ್ ಪಟ್ಟವನ್ನು ಮೂಲ್ಕಿ ಮೂಲದ ಕುವೈಟ್ ನ ಉದ್ಯಮಿ
ಅಮಿತ್ ಫುರ್ಟಾಡೋ ಮಾಲೀಕತ್ವದ “ಫ್ರೆಂಡ್ಸ್ ಕುವೈಟ್” ಅಲಂಕರಿಸಿತು.

ಶಾರ್ಜಾ ಅಂಗಣದಲ್ಲಿ ಹೊನಲು ಬೆಳಕಿನಡಿಯಲ್ಲಿ ಸಾಗಿದ ಈ ಅದ್ಧೂರಿಯ ಪಂದ್ಯಾವಳಿಯಲ್ಲಿ 16 ಪ್ರಸಿದ್ಧ ತಂಡಗಳು ಭಾಗವಹಿಸಿದ್ದವು.

ಲೀಗ್ ಹಂತದ ರೋಚಕ ಹಣಾಹಣಿಗಳ ಬಳಿಕ,
ಸೆಮಿಫೈನಲ್ ನಲ್ಲಿ
ಫ್ರೆಂಡ್ಸ್ ಕುವೈಟ್ ತಂಡ ಎಸ್.ಜೆ‌.ಎ ಗ್ರೂಪ್ ಆಫ್ ಕಂಪೆನೀಸ್ ತಂಡವನ್ನು ಹಾಗೂ ಗ್ಲೋಬಲಿಂಕ್ ವೆಸ್ಟರ್ನ್ ಶಿಪ್ಪಿಂಗ್ ತಂಡ,ಪೆಟ್ರೋಮ್ಯಾನ್ ತಂಡವನ್ನು ಸೋಲಿಸಿ ಫೈನಲ್ ಗೆ ಲಗ್ಗೆಯಿಟ್ಟಿದ್ದರು.

ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಫ್ರೆಂಡ್ಸ್ ಕುವೈಟ್ ತಂಡ ಯೋಗೇಶ್ ಪವಾರ್ ಸಿಡಿಸಿದ 31ರನ್ ಗಳ ನೆರವಿನಿಂದ 10 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 72 ರನ್ ಗೆಲುವಿನ ಗುರಿಯನ್ನು ಎದುರಾಳಿ ತಂಡಕ್ಕೆ ನೀಡಿತ್ತು.
ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಗ್ಲೋಬಲಿಂಕ್ ತಂಡ ಫ್ರೆಂಡ್ಸ್ ಕುವೈಟ್ ನ ವೇಗಿಗಳಾದ ವಿಶ್ವಜೀತ್ ಹಾಗೂ ಅಂಕುರ್ ಸಿಂಗ್ ಮೊನಚಾದ ದಾಳಿಗೆ 8 ವಿಕೆಟ್ ನಷ್ಟಕ್ಕೆ ಕೇವಲ 61 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೋಪ್ಪಿಕೊಂಡಿತ್ತು.

ವಿಜೇತ ಫ್ರೆಂಡ್ಸ್ ಕುವೈಟ್ ಹಾಗೂ ರನ್ನರ್ಸ್ ಗ್ಲೋಬಲಿಂಕ್ ವೆಸ್ಟರ್ನ್ ತಂಡಗಳು ಆಕರ್ಷಕ ಟ್ರೋಫಿಯೊಂದಿಗೆ ಗರಿಷ್ಠ ನಗದು ಬಹುಮಾನಗಳನ್ನು ಪಡೆದುಕೊಂಡರು.

ವೈಯಕ್ತಿಕ ಶ್ರೇಷ್ಠ ನಿರ್ವಹಣೆಗಾಗಿ ನೀಡಿದ ಪ್ರಶಸ್ತಿಗಳನ್ನು ಕ್ರಮವಾಗಿ,
ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿ


ಫ್ರೆಂಡ್ಸ್ ಕುವೈಟ್ ನ ಥಾಮಸ್ ಡಯಾಸ್,ಅತ್ಯಧಿಕ ಸಿಕ್ಸರ್ ಪ್ರಶಸ್ತಿ ಯೋಗೀಶ್ ಪವಾರ್,ಬೆಸ್ಟ್ ಫೀಲ್ಡರ್ ಅಂಕುರ್ ಸಿಂಗ್,
ಬೆಸ್ಟ್ ಬೌಲರ್ ಪೆಟ್ರೋಮ್ಯಾನ್ ತಂಡದ ಸರೋಜ್ ಹಾಗೂ 10pl ಸರಣಿಯುದ್ದಕ್ಕೂ ತನ್ನ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಶ್ರೇಷ್ಠ ನಿರ್ವಹಣೆ ನೀಡಿದ ರಾಯಗಡ್ ವಿಶ್ವಜೀತ್ (ಮೋಟ್ಯಾ)ಅರ್ಹವಾಗಿ
ಸರಣಿ ಶ್ರೇಷ್ಠ ಹಾಗೂ ಫೈನಲ್ ನ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.

Exit mobile version