SportsKannada | ಸ್ಪೋರ್ಟ್ಸ್ ಕನ್ನಡ

ಫ್ರೆಂಡ್ಸ್ ಕಪ್-ಸೋತ ತಂಡಗಳಿಗೂ ಇಲ್ಲಿದೆ ಆಶಾದಾಯಕ ಅಂಶ-ಆರಂಭದಲ್ಲಿ ಪಂದ್ಯ ಸೋತರೂ ಪ್ರಶಸ್ತಿ ಗೆಲ್ಲುವ ಅವಕಾಶ…!!!

ಬೆಂಗಳೂರು-ಫ್ರೆಂಡ್ಸ್ ಕಪ್ 2ನೇ ಆವೃತ್ತಿಯ ಕ್ರಿಕೆಟ್​ ​ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಪೀಣ್ಯ ಎರಡನೇ ಹಂತದ ಮೈದಾನದಲ್ಲಿ ಟೂರ್ನಿಯು ಬೆಂಗಳೂರು ಫ್ರೆಂಡ್ಸ್ ಸ್ಪೋರ್ಟ್ಸ್ ಅಂಡ್  ಕಲ್ಚರಲ್ ಅಸೋಸಿಯೇಷನ್  ಅತಿಥ್ಯದಲ್ಲಿ ಆಯೋಜನೆಗೊಂಡಿದೆ. 16 ಬಲಿಷ್ಠ ತಂಡಗಳು ಚಾಂಪಿಯನ್‌ ಆಗುವ ಗುರಿಯೊಂದಿಗೆ ಕಣಕ್ಕಿಳಿಯಲಿವೆ.
ಫ್ರೆಂಡ್ಸ್ ಕಪ್  ಟೂರ್ನಿಯ ಮೊದಲ ಪಂದ್ಯದಲ್ಲಿ ಮೈಟಿ ಬೆಂಗಳೂರು ತಂಡವು ಶ್ರೀಲಂಕಾದ ಸೂಪರ್ ಫ್ಯಾಷನ್ಸ್  ಅನ್ನು ಎದುರಿಸಲಿದೆ. ಹಾಗೆಯೇ ಇಂದಿನ ಮತ್ತೊಂದು ಹಣಾಹಣಿಯಲ್ಲಿ ಸ್ಥಳೀಯ ದಾಸರಹಳ್ಳಿ XI ಹಾಗೂ ವೀನಸ್ ಶ್ರೀಲಂಕಾ ತಂಡಗಳು ಕಣಕ್ಕಿಳಿಯಲಿವೆ.
ಟೂರ್ನಿಯಲ್ಲಿ ಈ ಬಾರಿ ಗರಿಷ್ಠ 16 ತಂಡಗಳು ಭಾಗವಹಿಸುತ್ತಿದ್ದು,  16 ತಂಡಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಲ್ಪಟ್ಟಿದ್ದು, 27  ಪಂದ್ಯಗಳು ನಾಲ್ಕು ದಿನಗಳ ಕಾಲ ನಡೆಯಲಿವೆ. ಫ್ರೆಂಡ್ಸ್ ಕಪ್  ಹೆಚ್ಚು ಕಾವು ಪಡೆಯುತ್ತಿದ್ದಂತೆ ಮುಖಾಮುಖಿಯಲ್ಲಿ  ಕಿರೀಟ​ ಗೆಲ್ಲುವಲ್ಲಿ ಯಾರು ಫೇವ್​ರೆಟ್​​ ಎಂಬ ನಿರೀಕ್ಷೆ ಕ್ರಿಕೆಟ್​ ಅಭಿಮಾನಿಗಳಲ್ಲಿ ಹೆಚ್ಚುತ್ತಿದೆ. ರಾಜ್ಯದ ಕೆಲವು ಶ್ರೇಷ್ಠ ತಂಡಗಳು ತನ್ನ ತವರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸುವ ಲೆಕ್ಕಾಚಾರದಲ್ಲಿದೆ. ಆದರೆ, ಶ್ರೀಲಂಕಾದ ಎರಡು ತಂಡಗಳು ನಿಸ್ತೇಜವಾಗಿಯೇನಿಲ್ಲ. ಈ ತಂಡಗಳಿಗೂ ಪುಟಿದೇಳುವ ಸಾಮರ್ಥ್ಯ ಇದೆ. ಕಳೆದ ಬಾರಿ ಶ್ರೀಲಂಕಾದ ಒಂದು ತಂಡ ಫ್ರೆಂಡ್ಸ್ ಕಪ್ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಛತ್ತೀಸ್‌ಗಢ ತಂಡವೂ ಈ ಬಾರಿ ತನ್ನ ಬಲವನ್ನು ತೋರಲು ಮುಂದಾಗಿದೆ. ಚೆನ್ನೈ ಕೂಡ ಈ ಬಾರಿ ಪ್ರಬಲ ತಂಡವಾಗಿ ಕಂಡು ಬರುತ್ತಿದೆ. ಒಟ್ಟಿನಲ್ಲಿಎಲ್ಲಾ ತಂಡಗಳಿಂದಲೂ ಕೂಡ ತೀವ್ರ  ಪೈಪೋಟಿ ನಿರೀಕ್ಷಿಸಲಾಗುತ್ತಿದೆ.
 ಫ್ರೆಂಡ್ಸ್ ಕಪ್-ಸೋತ ತಂಡಗಳಿಗೂ ಇಲ್ಲಿದೆ ಆಶಾದಾಯಕ ಅಂಶ-ಆರಂಭದಲ್ಲಿ ಪಂದ್ಯ ಸೋತರೂ ಪ್ರಶಸ್ತಿ ಗೆಲ್ಲುವ ಅವಕಾಶ….!!!
ಫ್ರೆಂಡ್ಸ್ ಕಪ್ ಪಂದ್ಯಾವಳಿಯನ್ನು 2023ರಿಂದ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಇದನ್ನು ಲೀಗ್ ಮತ್ತು ನಾಕ್ ಔಟ್  ಸ್ವರೂಪದಲ್ಲಿ ಆಡಿಸಲಾಗುತ್ತಿತ್ತು. ಈ ವರ್ಷ ಹೊಸ ವಿಧಾನವನ್ನು ಆಯೋಜಕರು ಪ್ರಯತ್ನಿಸುತ್ತಿದ್ದಾರೆ.  ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ತಂಡ ನೇರವಾಗಿ ಕ್ವಾರ್ಟರ್ ಫೈನಲ್ ಅರ್ಹತೆ ಪಡೆಯಲಿದೆ. ಮೊದಲ ಎರಡು ಪಂದ್ಯವನ್ನು ಕಳೆದುಕೊಂಡ ಪ್ರತಿ ತಂಡಕ್ಕೆ ಮತ್ತೊಮ್ಮೆ ಆಡಲು ಹೆಚ್ಚುವರಿ ಅವಕಾಶವಿದೆ ಮತ್ತು ಎಲ್ಲಾ ಪಂದ್ಯಗಳು ಮುಖ್ಯವಾಗಿವೆ. ಹೆಚ್ಚಾಗಿ ಎರಡು ಪಂದ್ಯಗಳಲ್ಲಿ ಸೋತ ನಂತರ ತಂಡವು ಮೂರನೇ ಔಪಚಾರಿಕ ಪಂದ್ಯವನ್ನು ಆಡಲು ನಿರಾಕರಿಸುತ್ತಿತ್ತು ಅಥವಾ ಮುಂದಿನ ಪಂದ್ಯವನ್ನು ಸಾಂದರ್ಭಿಕವಾಗಿ ತೆಗೆದುಕೊಳ್ಳುತ್ತಿದ್ದರು. ಸೋತ ತಂಡಗಳಿಗೆ ನಿರಾಸೆಯಾಗಬಾರದು, ಟೂರ್ನಿಯಿಂದ ಹೊರಬೀಳಬಾರದು, ಎನ್ನುವ ಕಾರಣಕ್ಕೆ  ಮತ್ತೊಂದು ಅವಕಾಶ ನೀಡಬೇಕು ಎನ್ನುವ ದ್ರಷ್ಟಿಯಲ್ಲಿ ಹೆಚ್ಚುವರಿ ಪಂದ್ಯಗಳನ್ನು ಆಡಿಸಲಾಗುವುದು. ಪಂದ್ಯಾವಳಿಯಿಂದ ಹೊರಗುಳಿಯುವಂತಹ ಸಮಸ್ಯೆಗಳನ್ನು ಈ ವಿಧಾನವು ಖಂಡಿತವಾಗಿಯೂ ಪರಿಹರಿಸುತ್ತದೆ ಮತ್ತು ಇನ್ನೊಂದು ಪಂದ್ಯವು ಇತರ ತಂಡಕ್ಕೆ ಪ್ರಮುಖವಾಗಬಹುದು ಎಂಬುವುದು ಆಯೋಜಕರ ನಂಬಿಕೆ.
“ಆಯೋಜಕರು ಇಲ್ಲಿ ರಾಜಕಾರಣಿಗಳಿಂದ ಯಾವುದೇ ಪ್ರಾಯೋಜಕತ್ವವನ್ನು ತೆಗೆದುಕೊಳ್ಳುವುದಿಲ್ಲ. ಹಾಗಾಗಿ ರಾಜಕಾರಣಿಗಳ ಬ್ಯಾನರ್‌ಗಳಿಲ್ಲ, ಭಾಷಣವಿಲ್ಲ.  ಕೇವಲ ಒಳ್ಳೆಯ ಕ್ರಿಕೆಟ್ ಮಾತ್ರ ಇರುತ್ತದೆ” ಎಂದು  ಫ್ರೆಂಡ್ ಬೆಂಗಳೂರಿನ ರೇಣು ಗೌಡ ಸ್ಪೋರ್ಟ್ಸ್ ಕನ್ನಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
Exit mobile version