SportsKannada | ಸ್ಪೋರ್ಟ್ಸ್ ಕನ್ನಡ

ಫ್ರೆಂಡ್ಸ್ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ- ಡಾ.ಗಾಯತ್ರಿ ಮುತ್ತಪ್ಪ ಇವರಿಗೆ ಗೌರವ ಸನ್ಮಾನ

ಬೆಂಗಳೂರು-ಇಲ್ಲಿನ ಪೀಣ್ಯದಲ್ಲಿ ರಾಜ್ಯದ ಪ್ರತಿಷ್ಠಿತ ತಂಡ ಫ್ರೆಂಡ್ಸ್ ಬೆಂಗಳೂರು ಇವರ ಆಶ್ರಯದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಸ್ಟಾರ್ ವರ್ಟೆಕ್ಸ್ ಕಂಪೆನಿಯ ಮಾಲಕಿ,ಸಮಾಜ ಸೇವಕಿ ಹಾಗೂ ಕ್ರೀಡಾಪ್ರೋತ್ಸಾಹಕಿ ಡಾ.ಗಾಯತ್ರಿ ಮುತ್ತಪ್ಪ ಕೋಲಾರ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಫ್ರೆಂಡ್ಸ್ ಬೆಂಗಳೂರು ತಂಡದ ಮಾಲೀಕರಾದ ಶ್ರೀಯುತ ರೇಣು ಗೌಡ,ಕಿರಣ್ ಗೌಡ,ಸ್ಪೋರ್ಟ್ಸ್ ಕನ್ನಡ ಕೋಟ ರಾಮಕೃಷ್ಣ ಆಚಾರ್,ಸಾಗರ್ ಭಂಡಾರಿ,ನವೀನ್ ರಾಕರ್ಸ್ ಮತ್ತು ಫ್ರೆಂಡ್ಸ್ ಬೆಂಗಳೂರು ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು…
Exit mobile version