
ಸೌತ್ ಸ್ಟಾರ್ ಅಂಬಲಪಾಡಿ ಮಾಜಿ ಕ್ರಿಕೆಟಿಗ ಪ್ರದೀಪ್ ಕಿದಿಯೂರು(ಮಾಣಿ)ನಿಧನ
ಉಡುಪಿ-ಸೌತ್ ಸ್ಟಾರ್ ಅಂಬಲಪಾಡಿ ತಂಡದ ಮಾಜಿ ಕ್ರಿಕೆಟಿಗ,ಉದ್ಯಮಿ ಪ್ರದೀಪ್ ಕಿದಿಯೂರು(ಮಾಣಿ 52 ವ)ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
90 ರ ದಶಕದ ಉಡುಪಿಯ ಪ್ರತಿಷ್ಠಿತ ತಂಡವಾಗಿದ್ದ ಸೌತ್ ಸ್ಟಾರ್ ಅಂಬಲಪಾಡಿ ತಂಡದ ಅತ್ಯುತ್ತಮ ಬ್ಯಾಟರ್ ಆಗಿ,ರಿವರ್ಸ್ ಸ್ವೀಪ್ ಹೊಡೆತಗಳಿಗೆ ಹೆಸರುವಾಸಿಯಾಗಿದ್ದು ಬಹಳಷ್ಟು ಪಂದ್ಯಗಳಲ್ಲಿ ಗೆಲುವಿನ ರೂವಾರಿಯಾಗಿ ಮೂಡಿಬಂದಿದ್ದರು.
ಸೌತ್ ಸ್ಟಾರ್ ಅಂಬಲಪಾಡಿ 90 ರ ದಶಕದಲ್ಲಿ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಮೊತ್ತ ಮೊದಲ ಬಾರಿಗೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಸಂಘಟಿಸಿದ ಕೀರ್ತಿಯ ತಂಡವಾಗಿದ್ದು ಸಂಸ್ಥೆಯ ಸಕ್ರಿಯ ಸದಸ್ಯರಾಗಿ,ಸ್ನೇಹಜೀವಿಯಾಗಿ ಪ್ರದೀಪ್ ಕಿದಿಯೂರು ಗುರುತಿಸಿಕೊಂಡಿದ್ದರು.
ಅಗಲಿದ ದಿವ್ಯಾತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದು ಸ್ಪೋರ್ಟ್ಸ್ ಕನ್ನಡ-ರಾಜ್ಯ ಟೆನಿಸ್ ಕ್ರಿಕೆಟ್ ನ ಪರವಾಗಿ ಪ್ರಾರ್ಥಿಸುತ್ತೇವೆ.
