SportsKannada | ಸ್ಪೋರ್ಟ್ಸ್ ಕನ್ನಡ

“ಜನಪ್ರಿಯ ಕಿಟ್ಟಿ” ಎಂದೇ ಪ್ರಖ್ಯಾತರಾದ ಮಾಜಿ ಕ್ರಿಕೆಟಿಗರು

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು,ಕೆ.ಪಿ.ಸಿ.ಸಿ ಸದಸ್ಯರು,ಕ್ರೀಡಾ ಪ್ರೋತ್ಸಾಹಕರು*

“ಜನಪ್ರಿಯ ಕಿಟ್ಟಿ” ಎಂದೇ ಪ್ರಖ್ಯಾತರಾದ ಮಾಜಿ ಕ್ರಿಕೆಟಿಗರು ಶ್ರೀ.ಪಿ.ಎನ್.ಕೃಷ್ಣಮೂರ್ತಿಯವರಿಗೆ ರಾಜ್ಯ ಟೆನಿಸ್ ಕ್ರಿಕೆಟ್ ಹಾಗೂ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ ಪರವಾಗಿ ಹುಟ್ಟು ಹಬ್ಬದ ಹಾರ್ದಿಕ

ಶುಭಾಶಯಗಳು

.

80-90 ರ ದಶಕದಲ್ಲಿ ಬೆಂಗಳೂರಿನ ಪೀಣ್ಯ ಪರಿಸರದ ಪ್ರತಿಬಿಂಬ ಹವ್ಯಾಸಿ ರಂಗ ಹಾಗೂ ರಾಘವೇಂದ್ರ ಕ್ರಿಕೆಟರ್ಸ್ ತಂಡದ ಮೂಲಕಪಿ.ಎನ್‌.ಕೃಷ್ಣಮೂರ್ತಿಯವರು ಕ್ರಿಕೆಟ್ ಜೀವನ ಪ್ರಾರಂಭಿಸಿದ್ದರು.ತದನಂತರದ ದಿನಗಳಲ್ಲಿ ರಾಜ್ಯದ ಪ್ರಸಿದ್ಧ ತಂಡ ಜನಪ್ರಿಯ ಕರ್ನಾಟಕ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ದೊಡ್ಡಗಣೇಶ್ ರಂತಹ ಅಂತರಾಷ್ಟ್ರೀಯ ಆಟಗಾರರನ್ನು,ಮೂವರು ಸಹೋದರ ಜೋಡಿಗಳಾದ ಬಾಬು,ರಾಧಾಕೃಷ್ಣ,ಶ್ರೀನಿವಾಸ್, ಗೋವಿಂದರಾಜು,ರಂಗರಾಜು, ಸತ್ಯಪ್ರಕಾಶ್ ರಂತಹ ಮೇರು ಕ್ರಿಕೆಟಿಗರನ್ನು ರಾಜ್ಯಕ್ಕೆ ಪರಿಚಯಿಸಿ ಹಲವಾರು ಪ್ರತಿಷ್ಟಿತ ಪ್ರಶಸ್ತಿಗಳನ್ನು ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ತನ್ನ ಸ್ಪೋಟಕ ದಾಂಡಿಗತನದ ಮೂಲಕ ಗುರುತಿಸಿಕೊಂಡಿದ್ದ ಇವರು ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಪಂದ್ಯವೊಂದರಲ್ಲಿ ಆರಂಭಿಕ ಆಟಗಾರರಾಗಿ ಕಣಕ್ಕಿಳಿದು ಬಿರುಸಿನ‌ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದರು‌.ಇದಲ್ಲದೇ ಚಮಕ್ ಬೆಂಗಳೂರು, ಶ್ರೀ ಬೆಂಗಳೂರು ಹೀಗೆ ಹೆಚ್ಚಿನ ತಂಡಗಳನ್ನು ಹಲವಾರು ವರ್ಷಗಳ ಕಾಲ ಮುನ್ನಡೆಸಿದ್ದರು.ಪ್ರಸ್ತುತ ಪಿ‌.ಎನ್‌.ಕೆ.ಬಾಯ್ಸ್ ತಂಡವನ್ನು ಕಟ್ಟಿ ಯುವ ಪ್ರತಿಭೆಗಳಿಗೆ ಅವಕಾಶವನ್ನು ಒದಗಿಸಿಕೊಟ್ಟಿದ್ದಾರೆ.
ಕ್ರೀಡಾಜೀವನದುದ್ದಕ್ಕೂ ಯಶಸ್ವಿ ನಾಯಕರಾಗಿ ಗುರುತಿಸಿಕೊಂಡ ಪಿ.ಎನ್.ಕೃಷ್ಣಮೂರ್ತಿ ಯವರು
ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನಕ್ಕೆ ಎಂಟ್ರಿ ಕೊಟ್ಟಿದ್ದರು‌.ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಹಗಲಿರುಳು ದಾಸರಹಳ್ಳಿ ಕ್ಷೇತ್ರದ ಜನರಿಗಾಗಿ ಶ್ರಮಿಸಿ ಪ್ರಭಾವಿ ರಾಜಕೀಯ ವ್ಯಕ್ತಿಯಾಗಿ ಪ್ರಸಿದ್ಧಿ ಗಳಿಸಿದ್ದು,2020 ರ ಈ ವರ್ಷಪೂರ್ತಿ ಕೋವಿಡ್ ಸಂತ್ರಸ್ತರಿಗೆ ನೆರಳಾಗಿ ನಿಂತು ದಿನನಿತ್ಯದ ಅಗತ್ಯತೆಗಳನ್ನು ಒದಗಿಸಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜನರ ನೆಚ್ಚಿನ ಜನನಾಯಕರಾಗಿ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಏಪ್ರಿಲ್‌ನಲ್ಲಿ ಆಯೋಜಿಸಿದ್ದ,
ಲೆಜೆಂಡ್ಸ್ ಕಪ್-2021 ನ ಪ್ರಥಮ ಪ್ರಶಸ್ತಿಯನ್ನು ಪ್ರಾಯೋಜಿಸಿ,ಸಕುಟುಂಬ ಸಮೇತ ಕುಂದಾಪುರಕ್ಕೆ ಆಗಮಿಸಿ,ಶ್ರೀ ಬೆಂಗಳೂರು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ,ಯುಗಾಂತರ ಕಾರ್ಯಕ್ರಮ ಮತ್ತು ಲೆಜೆಂಡ್ಸ್ ಕಪ್ ಸಮಾರೋಪ ಸಮಾರಂಭದ ಸಭಾಧ್ಯಕ್ಷರಾಗಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದರು.
Exit mobile version