Site icon SportsKannada ಸ್ಪೋರ್ಟ್ಸ್ ಕನ್ನಡ

ಹೊನಲುಬೆಳಕಿನ ರಾಜ್ಯಮಟ್ಟದ ‘K.M.S CUP ಸೀಸನ್–2’ ವಾಲಿಬಾಲ್ ಟೂರ್ನಿ ಡಿಸೆಂಬರ್ 29–30ರಂದು

ಹೊನಲುಬೆಳಕಿನ ರಾಜ್ಯಮಟ್ಟದ ‘K.M.S CUP ಸೀಸನ್–2’ ವಾಲಿಬಾಲ್ ಟೂರ್ನಿ ಡಿಸೆಂಬರ್ 29–30ರಂದು

ಯಲಹಂಕ ತಾಲ್ಲೂಕಿನ ಕುದುರೆಗೆರೆ ಪ್ರದೇಶದಲ್ಲಿ ಕೆ.ಎಂ.ಶ್ರೀನಿವಾಸ್ ರವರ ಸ್ಮರಣಾರ್ಥ ಹಾಗೂ ಕೆ.ಎಂ. ಸುಬ್ರಮಣಿ ರವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾದ K.M.S CUP ಸೀಸನ್–2 ವಾಲಿಬಾಲ್ ಪಂದ್ಯಾವಳಿ ಡಿಸೆಂಬರ್ 29 ಮತ್ತು 30, 2025ರಂದು ಅದ್ಧೂರಿಯಾಗಿ ನಡೆಯಲಿದೆ.

ರಾಜ್ಯಮಟ್ಟದ ಹೊನಲುಬೆಳಕಿನ ಬಿ ಡಿವಿಷನ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಆಕರ್ಷಕ ಬಹುಮಾನಗಳೊಂದಿಗೆ ಆಯೋಜಿಸಲಾಗಿರುವ ಈ ಕ್ರೀಡಾಕೂಟದಲ್ಲಿ ವಿಜೇತರಿಗೆ ₹66,666, ರನ್ನರ್‌ಅಪ್‌ಗೆ ₹33,333 ಹಾಗೂ ತೃತೀಯ ಸ್ಥಾನಕ್ಕೆ ₹22,222 ನಗದು ಬಹುಮಾನಗಳನ್ನು ಹಂಚಲಾಗುತ್ತದೆ. ಜೊತೆಗೆ ಚತುರ್ಥ ಬಹುಮಾನವೂ ವಿಶೇಷ ಆಕರ್ಷಣೆಯಾಗಿದೆ.

29 ಡಿಸೆಂಬರ್ ಸಂಜೆ 4 ಗಂಟೆಗೆ ನಡೆಯಲಿರುವ ಭವ್ಯ ಉದ್ಘಾಟನಾ ಸಮಾರಂಭ ಮತ್ತು ಸಂಪೂರ್ಣ ಪಂದ್ಯಾವಳಿಯನ್ನು NETMASTERS ಮೂಲಕ ಯೂಟ್ಯೂಬ್ ಲೈವ್‌ನಲ್ಲಿ ಪ್ರಸಾರ ಮಾಡಲಾಗುತ್ತಿದೆ.ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ಆಗಿ ಕಾರ್ಯ ನಿರ್ವಹಿಸಲಿದೆ

ಸಂಘಟಕರಾದ ಶಶಿ, ವೇಣು, ವಿನೋದ್, ನಂದನ್ ಸೇರಿದಂತೆ ಆಯೋಜನಾ ತಂಡವು ಎಲ್ಲ ಕ್ರೀಡಾಭಿಮಾನಿಗಳನ್ನು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಹಾಗೂ ಪಂದ್ಯಾವಳಿಗೆ ಸಾಕ್ಷಿಯಾಗುವಂತೆ ಮನವಿ ಮಾಡಿದೆ.

ಟೂರ್ನಿಯ ಮುಖ್ಯ ಅತಿಥಿಯಾಗಿ ಶ್ರೀ ಕೆ. ಆರ್. ಕೆ. ಆಚಾರ್ಯ ಸ್ಪೋರ್ಟ್ಸ್ ಕನ್ನಡ ಅವರು ಪಾಲ್ಗೊಳ್ಳಲಿದ್ದಾರೆ. SPORTS KANNADA ಈ ಕಾರ್ಯಕ್ರಮದ ಅಧಿಕೃತ ಮೀಡಿಯಾ ಪಾಲುದಾರವಾಗಿದೆ.

Exit mobile version