SportsKannada | ಸ್ಪೋರ್ಟ್ಸ್ ಕನ್ನಡ

ಮಂಗಳೂರಿನಲ್ಲಿ ಕಶ್ವಿಸ್ ಮೊದಲನೆಯ ಅಂತರಾಷ್ಟ್ರೀಯ ಓಪನ್ ಫಿಡೆ ರೇಟೆಡ್ ರಾಪಿಡ್ ಚೆಸ್ ಟೂರ್ನಮೆಂಟ್ 2023 ಪಂದ್ಯಾವಳಿ ಸಮಾರೋಪ ಸಮಾರಂಭ ರತ್ನವೇಲು ಪ್ರಥಮ.

ಕಶ್ವಿ ಚೆಸ್ ಸ್ಕೂಲ್(ರಿ) ಕುಂದಾಪುರ ಇವರ ಆಯೋಜಕತ್ವದಲ್ಲಿ ಕಶ್ವಿಸ್ ಮೊದಲನೆಯ ಅಂತರಾಷ್ಟ್ರೀಯ ಓಪನ್ ಫಿಡೆ ರೇಟೆಡ್ ರಾಪಿಡ್ ಚೆಸ್ ಟೂರ್ನಮೆಂಟ್ 2023  ಎರಡು ದಿನಗಳ ಚೆಸ್ ಪಂದ್ಯಾಕೂಟ ಡಿಸೆಂಬರ್ 10 ರಂದು ಮುಕ್ತಾಯಗೊಂಡಿತು.
ಮಂಗಳೂರಿನ ಇಂಡಿಯಾನ ಕನ್ವೆನ್ಷನ್ ಸೆಂಟರ್ ನಲ್ಲಿ ಶನಿವಾರ ಡಿಸೆಂಬರ್ 9 ರಂದು ಆರಂಭಗೊಂಡ ಈ ಪಂದ್ಯಾಕೂಟದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ,ಒರಿಸ್ಸಾ, ಉತ್ತರಪ್ರದೇಶ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರ 400ಕ್ಕೂ ಹೆಚ್ಚು ಚೆಸ್ ಆಟಗಾರರು ಭಾಗವಹಿಸಿದ್ದರು. ಪಂದ್ಯಾಕೂಟದಲ್ಲಿ ಸುಮಾರು 26 ಲಕ್ಷ ಮೊತ್ತದ ಬಹುಮಾನ ಅಲ್ಲದೇ ವಿವಿಧ ವಯೋಮಾನದ ವಿಭಾಗಗಳಲ್ಲಿ ಗೆದ್ದ ವಿಜೇತರಿಗೆ ಬಹುಮಾನ ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ   ಮಾಜಿ ಲೋಕಾಯುಕ್ತರು, ಮಾಜಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಎನ್ ಸಂತೋಷ ಹೆಗ್ಡೆ ಮಾತನಾಡುತ್ತಾ ತಾನು ಶಾಲಾ, ಕಾಲೇಜು ದಿನಗಳಲ್ಲಿ ಸ್ವತಃ ಆಟಗಾರನಾಗಿದ್ದು, ಚೆಸ್ ಬುದ್ದಿಮತ್ತೆಗೆ ಸಂಬಂದಪಟ್ಟಿದ್ದು ಎಲ್ಲಾ ವಯೋಮಾನದವರು ಆಡಬಹುದು ಎಂದರು.
 ಅಂತರಾಷ್ಟ್ರೀಯ ಗ್ರಾಂಡ್ ಮಾಸ್ಟರ್ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕ್ರತ ಪ್ರವೀಣ ತಿಪ್ಸೆ ಮಾತನಾಡುತ್ತಾ ಭಾರತೀಯ ಮೂಲದ ಆಟವಾದ ಚದುರಂಗ ಮುಂದೆ ಚೆಸ್ ಆಗಿ ಪರಿವರ್ತಿಯಗೊಂಡಿದ್ದು ಇಂದು ಸುಮಾರು 180 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆಡಲಾಗುತ್ತಿದೆ. ಸ್ಥಳೀಯ ಶಾಲಾ ಕಾಲೇಜುಗಳಲ್ಲಿ ಚೆಸ್ ಆಟದ ತರಭೇತಿ ನೀಡಬೇಕು. ಹಾಗೂ ಇಂತಹ ಪಂದ್ಯಾವಳಿಯಿಂದ ಸ್ಥಳೀಯ ಆಟಗಾರರಿಗೆ ದೇಶದ ಅಗ್ರಮಾನ್ಯ ಆಟಗಾರರೋಂದಿಗೆ ಆಟವಾಡಲು ಒಂದು ಉತ್ತಮ ಅವಕಾಶ ಎಂದರು. ಮಕ್ಕಳು ಈ ಆಟವನ್ನು ವೃತ್ತಿಯಾಗಿ ಪರಿಗಣಿಸಿದರೆ ಇತರ ಆಟದಂತೆ ವಿಪುಲ ಸದವಕಾಶವಿದೆ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್(ರಿ), ಅಧ್ಯಕ್ಷರು ರಮೇಶ ಕೋಟೆ,  ಪಂದ್ಯಾವಳಿಯ ಅಧ್ಯಕ್ಷ, ಕಶ್ವಿ ಚೆಸ್ ಸ್ಕೂಲ್ ಸ್ಥಾಪಕ ಅಧ್ಯಕ್ಷ ಹಾಗೂ ಪಂದ್ಯಾವಳಿಯ ಆಯೋಜಕ ನರೇಶ್ ಬಿ, ಕಶ್ವಿ ಚೆಸ್ ಸ್ಕೂಲ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕಾಮತ್, ಕಟಿಲೇಶ್ವರಿ ಡವಲಪರ್ಸನ ಪ್ರಕಾಶ ಶೆಟ್ಟಿ, ಪಂದ್ಯಾವಳಿಯ ಸಲಹೆಗಾರ ಸುರೇಶ ಶೆಟ್ಟಿ ಉಪಸ್ಥಿತರಿದ್ದರು.
ಅವಿನಾಶ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಆರಾಧ್ಯ ಎಸ್ ಶೆಟ್ಟಿ ಪ್ರಾಸ್ಥಾವನೆಗೈದರು ಪ್ರಕೃತಿ ಪಿ ಶೆಟ್ಟಿ ದನ್ಯವಾಧಗೈದರು.
ವಿಜೇತರು ತಮಿಳುನಾಡಿನ ರತ್ನವೇಲು ಪ್ರಥಮ, ಪ್ರಣವ ದ್ವಿತೀಯ ಹಾಗೂ ಕರ್ನಾಟಕದ ಬಾಲಕೃಷ್ಣ ತೃತೀಯ ಸ್ಥಾನ ಪಡೆದರು.
ಅಲ್ಲದೇ ರೇಟಿಂಗ್ ವಿಭಾಗ, ವಯೋಮಿತಿ, ಹಿರಿಯ ನಾಗರೀಕ, ಮಹಿಳಾ ವಿಭಾಗ, ಅತ್ಯಂತ ಕಿರಿಯ ಆಟಗಾರ, ವಿಶೇಷ ಮಕ್ಕಳು‌ ಹೀಗೆಯೇ ನೂರಕ್ಕೂ ಹೆಚ್ಚು ವಿಭಾಗದಲ್ಲಿ ನಗದು ಬಹುಮಾನ ಹಾಗೂ ಟ್ರೋಫಿಯನ್ನು ನೀಡಲಾಯಿತು
Exit mobile version