SportsKannada | ಸ್ಪೋರ್ಟ್ಸ್ ಕನ್ನಡ

ಈಡನ್ ಗಾರ್ಡನ್ ಗೆ ಬೆಂಕಿ ಹಚ್ಚಿದ್ದ ಪ್ರೇಕ್ಷಕರು- ಕಹಿ ನೆನಪನ್ನೇ ನೀಡಿದ ಇಂತಹ ಪಂದ್ಯ ಮುಂದೆಂದೂ ನಡೆಯದಿರಲಿ

ಸುಮಾರು 25 ವರ್ಷದ ಹಿಂದಿನ ಪಂದ್ಯ ದ ಕಹಿ ನೆನಪು. ಅದು ಮಾರ್ಚ್ ತಿಂಗಳಲ್ಲಿ ವಿಲ್ಸ್ ವಿಶ್ವಕಪ್ ನಡೆಯುತಿದ್ದ ಸಮಯ. ಅಂದು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಅಹರ್ನಿಶಿ ಸೆಮಿಫೈನಲ್ ಪಂದ್ಯಕ್ಕೆ ಮುಹೂರ್ತ ನಿಗದಿಯಾಗಿತ್ತು
. ಅಂದಿನ ಎಲ್ಲಾ ಕೆಲಸ ಕಾರ್ಯಗಳನ್ನು ಅಪರಾಹ್ನಕ್ಕಿಂತ ಮುನ್ನ  ಸಮಯ 2.20ರ ಹೊತ್ತಿಗೆ ದೂರದರ್ಶನ ಎದುರು ಹಾಜರಾಗಿದ್ವಿ. ಭಾರತದ ಎದುರುಗಡೆ ಶ್ರೀಲಂಕಾ ಈಗಾಗಲೇ ಪಾಕಿಸ್ತಾನವನ್ನು ಬಗ್ಗುಬಡಿದು ಭರ್ಜರಿ ಸೆಮಿಫೈನಲಿಗೆ ಎಂಟ್ರಿ ಕೊಟ್ಟಿದ್ದ ಭಾರತ ತಂಡ ಸುಲಭವಾಗಿ ಫೈನಲ್ ಪ್ರವೇಶಿಸುತ್ತದೆ ಎಂದು ನಮ್ಮ ಎಲ್ಲರ ಲೆಕ್ಕಾಚಾರವಾಗಿತ್ತು. ಈ ಪಂದ್ಯ ಕೇವಲ ಔಪಚಾರಿಕವಷ್ಟೆ ಎಂದೇ ನಮ್ಮ ಅಂದಾಜಾಗಿತ್ತು. ಶ್ರೀಲಂಕಾ ಎಂದರೆ ಅಷ್ಟು ದೊಡ್ಡ ತಂಡವಾಗಿರಲಿಲ್ಲ. ಶ್ರೀಲಂಕಾ ಜಿಂಬಾಬ್ವೆ ತಂಡಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಸಮಯದಲ್ಲಿ ಸೆಮಿಫೈನಲ್ನಲ್ಲಿ ಶ್ರೀಲಂಕಾ ಎದುರಾದರೆ ಭಾರತಕ್ಕೆ ಸುಲಭ ಜಯವೆಂದು ನಮ್ಮೆಲ್ಲ ಲೆಕ್ಕಾಚಾರವಾಗಿತ್ತು.
ಕೋಲ್ಕತ್ತಾ ದ ಈಡನ್ ಗಾರ್ಡನ್ ನಲ್ಲಿ ಪಂದ್ಯ ಶುರುವಾಗಿತ್ತು. 90000 ಸಾಮರ್ಥ್ಯದ ಕ್ರೀಡಾಂಗಣ 100000 ಪ್ರೇಕ್ಷಕರಿಂದ ತುಂಬಿತುಳುಕುತ್ತಿದೆ ಎಂದು ಹೇಳಿದ್ದ ಕಾಮೆಂಟೇಟರ್ ನ ಮಾತುಗಳು ಇಂದಿಗೂ ನೆನಪಿಗೆ ಬರುತ್ತಿದೆ.
ಪಂದ್ಯ ಶುರುವಾಗಿತ್ತು ಶ್ರೀಲಂಕಾ ಮೊದಲು ಬ್ಯಾಟಿಂಗ್,  ಜಾವಗಲ್ ಶ್ರೀನಾಥ್  ಮೊದಲ ಓವರ್ನಲ್ಲಿ ಕಳುವಿತರಣ ಔಟ್. ಅದೇ ಓವರ್ನಲ್ಲಿ ಜಯಸೂರ್ಯ ಕೂಡ ಅವಾಗ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಕುಣಿದು ಕುಪ್ಪಳಿಸಿದ್ದೆವು. ಆ ವರ್ಲ್ಡ್ ಕಪ್ ಇಡೀ ಬೌಲರ್ ಗಳನ್ನು ಕಾಡಿದ್ದ  ಇಬ್ಬರು ಸ್ಪೋಟಕ ಬ್ಯಾಟ್ಸ್ ಮ್ಯಾನ್ ಗಳು ಔಟಾದ ತಕ್ಷಣ ಭಾರತ ಅರ್ಧ ಪಂದ್ಯ ಗೆದ್ದ ಅನುಭವ.
ಶ್ರೀಲಂಕಾ ಕಡಿಮೆ ಮೊತ್ತಕ್ಕೆ ಪತನಗೊಳ್ಳುತ್ತದೆ ಎಂದು ಎಣಿಸಿದ ನಮ್ಮ ಲೆಕ್ಕಚಾರ ತಪ್ಪಾಗಿತ್ತು. ನಂಬಿಕಸ್ಥ ಆಟಗಾರರ ಅರವಿಂದ ಡಿಸಿಲ್ವ ಅರ್ಜುನ ರಣತುಂಗಾ ಅಸಂಕ ಗುರುಸಿಂಗ ಉಪಯುಕ್ತ ಆಟದ ನೆರವಿನಿಂದ 250ರ ಗಡಿಯನ್ನು ದಾಟಿ ಸಾಧಾರಣವಾಗಿ ಉತ್ತಮ ಎನಿಸುವ ಮೊತ್ತವನ್ನು ಸೇರಿಸುತ್ತದೆ.
ಆತಿಥೇಯ ತಂಡ ಅತಿಥೇಯ ಗ್ರೌಂಡ್ನಲ್ಲಿ 250ರ ಮೊತ್ತ, ಪಾಕಿಸ್ತಾನದ ಎದುರು ಕ್ವಾರ್ಟರ್ ಫೈನಲ್ ನಲ್ಲಿ ಭರ್ಜರಿ  ಮತ್ತು ಪೇರಿಸಿ ಗೆದ್ದು ಬಂದ  ಭಾರತಕ್ಕೆ ಇದೇನು ದೊಡ್ಡ ಮೊತ್ತವಾಗಿ ಇರಲಿಲ್ಲ.ಭಾರತದ ಮೊದಲ ವಿಕೆಟ್ ನವಜೋತ್ ಸಿಂಗ್ ಸಿದ್ದು ರೂಪದಲ್ಲಿ ಬಿದ್ದರೂ ದ್ವಿತೀಯ ವಿಕೆಟ್ ಗೆ ಸಚಿನ್ ತೆಂಡೂಲ್ಕರ್ ಮತ್ತು ಸಂಜಯ್ ಮಂಜ್ರೇಕರ್ ನೂರರ ಗಡಿಗೆ ಭಾರತದ ಮೊತ್ತ ತಂದಾಗ ಭಾರತದ ಜಯ ನಿಶ್ಚಯ ಎಂದೆನಿಸಿತ್ತು.
ಯಾವಾಗ ಸಚಿನ್ ತೆಂಡೂಲ್ಕರ್ 65 ರನ್ ಗಳಿಸಿ ಸ್ಟಂಪ್ ಔಟ್ ಆಗುತ್ತಿದ್ದಂತೆ ಪೆವಿಲಿಯನ್ ಪೆರೆಡ್ ಶುರುವಾಗಿಬಿಡುತ್ತದೆ.  95/1 ಎಂಬ ಸುಸ್ಥಿತಿಯಲ್ಲಿ ಇದ್ದ ಬಾರತ ನೋಡನೋಡುತ್ತಿದ್ದಂತೆ  ಮಂಜ್ರೇಕರ್, ಅಜರುದ್ದೀನ್, ಶ್ರೀನಾಥ್, ಜಡೇಜಾ, ಮೋಂಗಿಯಾ…… ಎಲ್ಲಾ ಔಟ್ 120ಕ್ಕೆ8 ಎಂಬಲ್ಲಿಗೆ ಬಂದು ನಿಲ್ಲುತ್ತದೆ.
ಅಜರುದ್ದೀನ್ ಆಟದ ರೀತಿ ನೋಡಿದರೆ ಎಂಥವರಿಗೂ ಕೋಪ ತರುವಂತಿತ್ತು. ರೀಯಲಿ ನಂಬಲು ಅಸಾಧ್ಯ. ಪ್ರೇಕ್ಷಕರಿಂದ ಮೈದಾನದಲ್ಲಿ ಪ್ಲಾಸ್ಟಿಕ್ ಬಾಟಲ್ ಗಳ .. ಎಸೆತ, ಸ್ಟೇಡಿಯಂನಲ್ಲಿ ಬೆಂಕಿ ಹಚ್ಚಿ ತಮ್ಮ ರೋಷವನ್ನು ತೋರುಪಡಿಸಿಕೊಳ್ಳುತ್ತಿದ್ದರು. ಪ್ರೇಕ್ಷಕರ ಕೋಪ ಕೊನೆಗೂ ನಿಲ್ಲಲೇ ಇಲ್ಲ. ನಿರಂತರ ಬಾಟಲ್ ಎಸೆತ. ಕೊನೆಗೆ ಅಂಪಾಯರ್ ಗಳು ಪಂದ್ಯ ನಡೆಯುವುದೇ ಅಸಾಧ್ಯವೆಂದು ಸಂದರ್ಭದಲ್ಲಿ ಅರ್ಜುನ್ ರಣತುಂಗಾ ನೇತೃತ್ವದ ಶ್ರೀಲಂಕಾ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ವಿನೋದ್ ಕಾಂಬ್ಳಿ ಚಿಕ್ಕ ಮಕ್ಕಳ ಹಾಗೆ ಅತ್ತು ಪೆವಿಲಿಯನ್ ನಡೆದಿದ್ದ. ಯೆಸ್ ವಿ ಕ್ಯಾನ್ ಅಂಡರ್ ಸ್ಟಾಂಡ್ ಯುವರ್ ಫೀಲಿಂಗ್ಸ್ ಕಾಂಬ್ಳಿ.  ತಂಡದ ಕಪ್ತಾನನಾಗಿ ಅಜರುದ್ದೀನ್ ಔಟಾದ ರೀತಿ ಮ್ಯಾಚ್ ಫಿಕ್ಸಿಂಗ್ ಆಗಿದೆಯೇ ಎಂದು ಅನುಮಾನ ಬರಿಸುವಂತಿತ್ತು.
ಫೈನಲ್ ಪಾಕಿಸ್ತಾನದಲ್ಲಿ ನಡೆಯಲಿರುವ ಕಾರಣ ಭಾರತೀಯ ತಂಡ ಉದ್ದೇಶಪೂರ್ವಕವಾಗಿ ಸೋತರು ಎಂದೆಲ್ಲಾ ಮಾತುಗಳು ನಮ್ಮ ನಡುವೆ ಬಂದವು.
ಏನೇ ಇರಲಿ ಈ ಪಂದ್ಯ ಅದೆಷ್ಟು ಅಭಿಮಾನಿಗಳ ಕಣ್ಣೀರಿಗೆ ಕಾರಣವಾಯಿತೋ, ಅದೆಷ್ಟು ಅಭಿಮಾನಿಗಳು ಇಲ್ಲಿಂದ ಮುಂದೆ ಕ್ರಿಕೆಟ್ ವೀಕ್ಷಣೆ ಕೊನೆಗೊಳಿಸಿದರೋ ದೇವರೇ ಬಲ್ಲ.
ಈ ಪಂದ್ಯಾಟ ನಾವು ವೀಕ್ಷಿಸಿದ ಪಂದಗಳಲ್ಲಿ ಅತ್ಯಂತ ಕೆಟ್ಟ ಮತ್ತು ಕಹಿ ನೆನಪಿನ ಪಂದ್ಯ.
ಭಾರತ ಅಂದು ತನ್ನ ಕೈಗಳಿಂದ ವರ್ಲ್ಡ್ ಕಪ್ ಶ್ರೀಲಂಕಾ ಕೈಗೆ ನೀಡಿದಂತಿತ್ತು. ಮುಂದೆಂದೂ ಇಂತಹ ಪಂದ್ಯ ನಡೆಯದಿರಲಿ.
Exit mobile version