SportsKannada | ಸ್ಪೋರ್ಟ್ಸ್ ಕನ್ನಡ

ಡಿಸೆಂಬರ್ 21, 22 : 2ನೇ ಆವೃತ್ತಿಯ ಅಸ್ತ್ರ ಪ್ರೀಮಿಯರ್ ಲೀಗ್ – 2019

ಅಸ್ತ್ರ ಇವೆಂಟ್ಸ್ ಹುಬ್ಬಳ್ಳಿ ಅರ್ಪಿಸುವ ಬಂಟ ಸಮುದಾಯದ ಪ್ರತಿಷ್ಟಿತ 2ನೇ ಆವೃತ್ತಿಯ ಅಸ್ತ್ರ ಪ್ರೀಮಿಯರ್ ಲೀಗ್ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಡಿಸೆಂಬರ್ 21,22 ರಂದು 2 ದಿನಗಳ‌ ಹೊನಲು ಬೆಳಕಿನಲ್ಲಿ ನಡೆಯಲಿದೆ.

ಪ್ರಥಮ ಪ್ರಶಸ್ತಿ ವಿಜೇತ ತಂಡ 2.5 ಲಕ್ಷ ನಗದು ಹಾಗೂ ದ್ವಿತೀಯ ಸ್ಥಾನಿ ತಂಡ 1ಲಕ್ಷ 25 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು, ಗರಿಷ್ಠ ಸ್ಕೋರ್ ದಾಖಲಿಸಿದ ಆಟಗಾರರಿಗೆ ಆರೆಂಜ್ ಕ್ಯಾಪ್, ಗರಿಷ್ಠ ವಿಕೆಟ್‌ ಗಳಿಸಿದ ಎಸೆತಗಾರರಿಗೆ ಪರ್ಪಲ್ ಕ್ಯಾಪ್ ಹಾಗೂ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ತೋರಿದ ಆಟಗಾರರಿಗೆ ವಿಶೇಷ ಪ್ರಶಸ್ತಿ ನೀಡಲಾಗುತ್ತಿದೆ.

ಐ‌.ಪಿ.ಎಲ್ ಮಾದರಿಯ ಈ ಪಂದ್ಯಾವಳಿಯಲ್ಲಿ, 4 ಐಕಾನ್ ಆಟಗಾರರನ್ನು ಒಳಗೊಂಡ ಒಟ್ಟು 7 ಫ್ರಾಂಚೈಸಿಗಳು ಭಾಗವಹಿಸಲಿದ್ದು, ತಂಡಗಳ ವಿವರ ಈ ಕೆಳಗಿನಂತಿದೆ.

1)ಸುಗ್ಗಿ ಸೂಪರ್ ಸ್ಟಾರ್
ಮಾಲೀಕರು:ಸುಗ್ಗಿ ಸುಧಾಕರ ಶೆಟ್ಟಿ.
ಐಕಾನ್-ನಿಕೇಶ್ ಶೆಟ್ಟಿ, ಶಿವ ಪ್ರಸಾದ್ ಕಿಲ್ಲೆ, ಪ್ರದೀಪ್, ಕಶ್ಯಪ್

2)ಎಸ್.ಕೆ.ಪಿ ಟೈಟನ್ಸ್ ಧಾರವಾಡ
ಮಾಲೀಕರು: ಸುಜನ್ ಶೆಟ್ಟಿ ಹಾಗೂ ಗಿರೀಶ್ ಶೆಟ್ಟಿ
ಐಕಾನ್- ಪ್ರಥಮ್, ಸತೀಶ್, ಪ್ರಜ್ವಲ್, ಸತೀಶ್

3)ಅಭಯ್ ಕ್ರಿಕೆಟ್ ಕ್ಲಬ್
ಮಾಲೀಕರು:ಉಮೇಶ್ ಶೆಟ್ಟಿ
ಐಕಾನ್- ಅಮೃತ್, ಪ್ರಥ್ವೀರಾಜ್, ಕಿಶನ್, ಶಶಾಂಕ್

4)ಗೂಗ್ಲಿ ಪೊಳಲಿ ಟೈಗರ್ಸ್
ಮಾಲೀಕರು: ಜಯರಾಜ್ ಶೆಟ್ಟಿ.
ಐಕಾನ್- ಪವನ್, ಮನೀಷ್, ಅಭಿಷೇಕ್, ಕೀರ್ತನ್

5)ಉಡುಪಿ ಹಾಸ್ಪಿಟಾಲಿಟಿ ಸರ್ವಿಸಸ್
ಮಾಲೀಕರು:ರಂಜಿತ್ ಕುಮಾರ್ ಶೆಟ್ಟಿ
ಐಕಾನ್-ರಕ್ಷಿತ್, ರವಿ, ಕೌಶಿಕ್ ಶೆಟ್ಟಿ, ವಿನೀತ್

6)ಮೈಟಿ ರೈಡರ್ಸ್
ಮಾಲೀಕರು: ಪ್ರವೀಣ್ ಶೆಟ್ಟಿ
ಐಕಾನ್ : ದೀಕ್ಷಿತ್, ಭೋಜರಾಜ್, ಪ್ರದೀಪ್, ಶ್ರೀಕಾಂತ್

7)ಟೀಮ್ ಎಂಪೈರ್
ಮಾಲೀಕರು: ಶರತ್ ಶೆಟ್ಟಿ.
ಐಕಾನ್- ಕಿರಣ್ ಶೆಟ್ಟಿ, ಪ್ರಥ್ವೀರಾಜ್ ಶೆಟ್ಟಿ, ಸುಧೀರ್, ಪ್ರಸಾದ್.

ರಾಜ್ಯದ ಪ್ರಸಿದ್ಧ ತಂಡದ ಖ್ಯಾತನಾಮ‌ ಆಟಗಾರರು,ಯುವ ಕ್ರಿಕೆಟಿಗರು ತಂಡಗಳಲ್ಲಿ ಭಾಗವಹಿಸಲಿದ್ದಾರೆ. 2 ತಿಂಗಳ ಹಿಂದೆ ನಡೆದಿದ್ದ ಆಕ್ಷನ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಪ್ರಸಿದ್ಧ ವೀಕ್ಷಕ ವಿವರಣೆಕಾರ ಶಿವನಾರಾಯಣ ಐತಾಳ್ ಕೋಟ ವೀಕ್ಷಕ ವಿವರಣೆಯ ನೇತೃತ್ವ ವಹಿಸಲಿದ್ದು, ಕ್ರಿಕ್ ಸೇ ಪಂದ್ಯಾವಳಿಯ ನೇರ ಪ್ರಸಾರವನ್ನು ಬಿತ್ತರಿಸಲಿದೆ.

Exit mobile version