SportsKannada | ಸ್ಪೋರ್ಟ್ಸ್ ಕನ್ನಡ

ಸೌದಿ ಅರೇಬಿಯಾ-ಡಿ.ಎಮ್.ನಜ್ಜದ್ ರಿಯಾದ್ ಮಡಿಲಿಗೆ “ತಮೀಮಿ ಚಾಂಪಿಯನ್ಸ್ ಟ್ರೋಫಿ-2020

ಖೋಬರ್-ದಮಾಮ್ ನ ಪ್ರತಿಷ್ಟಿತ ತಮೀಮಿ ಗ್ರೂಪ್ ಆಯೋಜಿಸಿದ
ತಮೀಮಿ ಚಾಂಪಿಯನ್ಸ್ ಟ್ರೋಫಿ-2020 ಪ್ರಶಸ್ತಿಯನ್ನು
ಅಫ್ರೋಜ್ ನಕ್ವಾ ಸಾರಥ್ಯದ ಡಿ.ಎಮ್‌.ನಜ್ಜದ್ ರಿಯಾದ್ ತಂಡ ಜಯಿಸಿದೆ.
ತಮೀಮಿ ಅಂಗಣದಲ್ಲಿ ಜರುಗಿದ ಈ ಪಂದ್ಯಾವಳಿಯ ಫೈನಲ್ ನಲ್ಲಿ
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ನಡೆಸಿದ
 ಡಿ‌.ಎಮ್‌‌.ನಜ್ಜದ್ ನಿಗದಿತ 8 ಓವರ್ ಗಳಲ್ಲಿ 68 ರನ್ ಕಲೆ ಹಾಕಿತ್ತು.ಸ್ಪರ್ಧಾತ್ಮಕ ಗುರಿಯನ್ನು ಬೆಂಬತ್ತುವಲ್ಲಿ ಕೊನೆಯ ಹಂತದಲ್ಲಿ ವಿಫಲವಾದ ಈಸ್ಟರ್ನ್ ಬ್ಲೂಸ್ 8 ಓವರ್ ಗಳಲ್ಲಿ 61 ರನ್ ಗಳಿಸಲಷ್ಟೇ ಶಕ್ತವಾಗಿ 7 ರನ್ ಹಿನ್ನಡೆಯಿಂದ ಸೋಲೋಪ್ಪಿಕೊಂಡಿತು.
ಪ್ರಶಸ್ತಿ ವಿಜೇತ ಡಿ‌.ಎಮ್.ನಜ್ಜದ್
10,000 ಸೌದಿ ರಿಯಲ್ ಹಾಗೂ ರನ್ನರ್ ಅಪ್ ಈಸ್ಟರ್ನ್ ಬ್ಲೂಸ್ 5,000 ಸೌದಿ ರಿಯಲ್ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು.
ಫೈನಲ್ ನಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿದ ಡಿ‌.ಎಮ್.ನಜ್ಜದ್ ನ ಮುಶಿನ್ ಪಂದ್ಯಶ್ರೇಷ್ಟ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರೆ,
ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್ ಹಮ್ಜತ್ ಜುಬೈಲ್,ಬೆಸ್ಟ್ ಬೌಲರ್ ಡಿ.ಎಮ್.ನಜ್ಜದ್ ನ ಮಜೀದ್ ಪಡೆದರು.
Exit mobile version