
ಸರಣಿ ಶ್ರೇಷ್ಟ ಪ್ರಶಸ್ತಿ 10 ಲಕ್ಷ ವಿಮಾ ಪಾಲಿಸಿಯನ್ನು ಸಹ ಆಟಗಾರನಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದ ಕೃಷ್ಣ ಉಡುಪಿ.
ನವೆಂಬರ್ 17 ಭಾನುವಾರದಂದು ಉಡುಪಿಯ ದೊಡ್ಡನಗುಡ್ಡೆ ಮೈದಾನದಲ್ಲಿ ನಡೆದ ಜಿ.ಎಫ್.ಸಿ ಟ್ರೋಫಿ-2024 ಕ್ರಿಕೆಟ್ ಪಂದ್ಯಾಟ ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾಯಿತು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ವಿಶೇಷ ಚೇತನರಿಗೆ ವೀಲ್ ಚೇರ್,ಆಶ್ರಮಗಳಿಗೆ ಸಹಾಯ ನಿಧಿ,ಜೊತೆಗೆ ಹಿರಿಯ ಕ್ರೀಡಾಪಟುಗಳಿಗೆ,ಸೇವಾ ನಿರತ ಸಂಸ್ಥೆಗಳಿಗೆ ಗೌರವ ಸಲ್ಲಿಸಲಾಯಿತು.
ಇದಲ್ಲದೇ ಟೆನಿಸ್ಬಾಲ್ ಕ್ರಿಕೆಟ್ ಆಟಗಾರರಿಗೆ ಯಾವುದೇ ಅವಘಡದ ಸಂದರ್ಭದಲ್ಲಿ ಯಾವುದೇ ಜೀವ ವಿಮೆ ಇಲ್ಲದ ಕಾರಣ ಇದನ್ನು ಮನಗಂಡ ಗುಂಡಿಬೈಲ್ ಫ್ರೆಂಡ್ಸ್ ಕ್ರಿಕೆಟರ್ಸ್ ಸರಣಿಶ್ರೇಷ್ಟ ಆಟಗಾರನಿಗೆ 10 ಲಕ್ಷ ಜೀವರಕ್ಷಕ ವಿಮೆ ಬಹುಮಾನ ರೂಪದಲ್ಲಿ ಘೋಷಿಸಿತ್ತು.
ತನ್ನ ಅತ್ಯಮೂಲ್ಯ ಆಲ್ರೌಂಡರ್ ಪ್ರದರ್ಶನ ನೀಡಿದ ನೀಲಾ ಚಾಲೆಂಜರ್ಸ್ ತಂಡದ ಕೃಷ್ಣ ಉಡುಪಿ ಅರ್ಹವಾಗಿ ಸರಣಿಶ್ರೇಷ್ಟ ಗೌರವಕ್ಕೆ ಪಾತ್ರರಾಗಿದ್ದು,ತನಗೆ ನೀಡಿದ 10 ಲಕ್ಷ ವಿಮಾ ಪಾಲಿಸಿಯನ್ನು ತನ್ನ ತಂಡದ ಸಹ ಆಟಗಾರನಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.
ಪ್ರತಿಭಾನ್ವಿತ ಆಟಗಾರ ಉಡುಪಿಯ ಕೃಷ್ಣ, ವಿಷ್ಣುಮೂರ್ತಿ ದೊಡ್ಡನಗುಡ್ಡೆ,ಸೈಮಂಡ್ಸ್ ಕಡಿಯಾಳಿ,ಗುರುಬ್ರಹ್ಮ ಉದ್ಯಾವರ,ಸ್ಯಾಟರ್ಡೇ ಪ್ಯಾಂಥರ್ಸ್ ಹಾಗೂ ರಾಜ್ಯಮಟ್ಟದಲ್ಲಿ ಜಾನ್ಸನ್ ಕುಂದಾಪುರ ತಂಡವನ್ನು ಪ್ರತಿನಿಧಿಸುತ್ತಿದ್ದು,ಹೆಚ್.ಡಿ.ಎಫ್.ಸಿ ಬ್ಯಾಂಕ್ ಮಲ್ಪೆ ಶಾಖೆಯ ಉದ್ಯೋಗಿಯಾಗಿದ್ದಾರೆ.
ಕೃಷ್ಣ ಉಡುಪಿ ಇವರ ಈ ಕ್ರೀಡಾಸ್ಪೂರ್ತಿ ಇತರ ಆಟಗಾರರಿಗೂ ಮಾದರಿಯಾಗಲಿ ಎಂಬುದೇ ಸ್ಪೋರ್ಟ್ಸ್ ಕನ್ನಡ ಹಾರೈಕೆ.
