Site icon SportsKannada ಸ್ಪೋರ್ಟ್ಸ್ ಕನ್ನಡ

ಕ್ರಿಕೆಟಿಗ ಮೋಹನ್ ಅವರ ಆರೋಗ್ಯದಲ್ಲಿ ಸುಧಾರಣೆ – ಸ್ನೇಹಿತರಿಂದ ಧನ್ಯವಾದ ಸಂದೇಶ

ಕ್ರಿಕೆಟಿಗ ಮೋಹನ್ ಅವರ ಆರೋಗ್ಯದಲ್ಲಿ ಸುಧಾರಣೆ – ಸ್ನೇಹಿತರಿಂದ ಧನ್ಯವಾದ ಸಂದೇಶ

ಬೆಂಗಳೂರು: ಇತ್ತೀಚೆಗೆ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕೆ.ಆರ್.ಪುರಂ ಮೂಲದ ಕ್ರಿಕೆಟಿಗ ಮೋಹನ್ ಅವರ ಚಿಕಿತ್ಸೆಗೆ ನೆರವು ನೀಡುವಂತೆ ಸ್ಪೋರ್ಟ್ಸ್ ಕನ್ನಡ ವೆಬ್‌ಸೈಟ್ ಮೂಲಕ ಮನವಿ ಮಾಡಲಾಗಿತ್ತು.

ಸಮಾಜದ ಹಲವಾರು ಕಡೆಯಿಂದ ಬಂದ ಪ್ರಾರ್ಥನೆ, ಆರ್ಥಿಕ ಹಾಗೂ ಮಾನಸಿಕ ಬೆಂಬಲದ ಫಲವಾಗಿ, ಮೋಹನ್ ಅವರ ಆರೋಗ್ಯದಲ್ಲಿ ಈಗ ನಿಧಾನವಾಗಿ ಸುಧಾರಣೆ ಕಂಡುಬಂದಿದೆ.

ಮೋಹನ್ ಅವರ ಆತ್ಮೀಯ ಸ್ನೇಹಿತರು ಇಂದು ಕೃತಜ್ಞತೆಯ ಸಂದೇಶ ನೀಡಿ ಹೀಗೆ ತಿಳಿಸಿದ್ದಾರೆ:

“Thank you all, dear friends. Mohan is doing well despite the risks, and your prayers and support have had a positive impact on his life and family. Once again, thank you very much for your kindness and support.”

ಈ ಸಂದೇಶವು ಕೇವಲ ಕುಟುಂಬದಷ್ಟೇ ಅಲ್ಲ, ಮೋಹನ್ ಅವರನ್ನು ಬೆಂಬಲಿಸಿದ ಪ್ರತಿಯೊಬ್ಬರ ಹೃದಯವನ್ನು ಸ್ಪರ್ಶಿಸಿದೆ.

ಮೋಹನ್ ಅವರ ಕುಟುಂಬದ ಪರವಾಗಿ ಅವರ ಆಪ್ತರು ಮತ್ತೊಮ್ಮೆ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

 

Exit mobile version