SportsKannada | ಸ್ಪೋರ್ಟ್ಸ್ ಕನ್ನಡ

ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯಾಗುತ್ತಾ…?

ಟೋಕಿಯೋ ಒಲಿಂಪಿಕ್ಸ್ 2020 ಕಳೆದ ಭಾನುವಾರ ಅಂತ್ಯವಾಗಿದೆ. ಈ ಮಹತ್ವದ ಕ್ರೀಡಾಕೂಟ ಅಂತ್ಯಗೊಳ್ಳುವ ವೇಳೆಗೆ ಭಾರತ 7 ಪದಕಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವುದರ  ಮೂಲಕ ಐತಿಹಾಸಿಕ ಸಾಧನೆ ಮಾಡಿದೆ ಅದರಲ್ಲೂ ಜಾವಲಿನ್ ಥ್ರೂನಲ್ಲಿ ಚಿನ್ನ ಗೆದ್ದು ಬಿಗಿದೆ ಭಾರತ .
ಆಧುನಿಕ ಒಲಿಂಪಿಕ್ಸ್ ಆರಂಭವಾದ ನಂತರದಲ್ಲಿ  ಒಲಿಂಪಿಕ್ಸ್‌ನಲ್ಲಿ ಭಾರತದ  ಅತ್ಯುತ್ತಮ ಪ್ರದರ್ಶನ ಇದಾಗಿದೆ. ಹೀಗಾಗಿ ಭಾರತದ ಕ್ರೀಡಾಪಟುಗಳ ಈ ಬಾರಿಯ ಸಾಧನೆ ದೇಶದ  ಪ್ರತಿಯೊಬ್ಬ ಪ್ರಜೆಯು  ಹೆಮ್ಮೆ ಪಡುವಂತೆಮಾಡಿದೆ.
ಈ ಮಧ್ಯೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟ್‌ಅನ್ನು ಕೂಡ ಸೇರ್ಪಡೆಗೊಳಿಸುವ ಪ್ರಯತ್ನಗಳು  ನಡೆಯುತ್ತಿದೆ. ಹೀಗಾಗಿ ಈ ಬೆಳವಣಿಗೆ ಕ್ರಿಕೆಟ್ ಪ್ರೇಮಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಾಗಿದ್ದು. 8 ತಂಡಗಳ ನಡುವೆ ಪದಕಕ್ಕಾಗಿ ಹೊರಟ ನಡೆಯುವ ಸಾಧ್ಯತೆಯಿದೆ. ಈ ಮೂಲಕ ಒಲಿಂಪಿಕ್ಸ್‌ಗೆ ಕ್ರಿಕೆಟ್ ಮರು ಸೇರ್ಪಡೆಯಾಗಲು ವೇದಿಕೆ ಸಜ್ಜಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಜಗತ್ತಿನಲ್ಲಿ ಅತಿ ಹೆಚ್ಚು ಆಡುವ ಕ್ರೀಡೆ.ಅತಿಹೆಚ್ಚು ಕ್ರೀಡಾ ಪ್ರೇಮಿಗಳಿರುವ ಆಟ  ಕ್ರಿಕೆಟ್ ಕೂಡ ಒಂದಾಗಿದ್ದರೂ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಯಾಗದಿರುವುದು ಕ್ರಿಕೆಟ್ ಪ್ರೇಮಿಗಳ ನಿರಾಸೆಗೆ ಕಾರಣವಾಗಿತ್ತು. ಆದರೆ ಆ ದಿನಗಳು ಹತ್ತಿರವಾಗುವ ಸಾಧ್ಯತೆ ಇದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ಮೂಡಿದೆ.
ಈ ಹಿಂದೆ ಒಲಿಂಪಿಕ್ಸ್‌ನಲ್ಲಿ  ಕ್ರಿಕೆಟ್ ಕೂಡ ಇತ್ತು..?
ಹೌದು, ಬಹುತೇಕರಿಗೆ ಈ ವಿಚಾರ ತಿಳಿದಿರುವ ಸಾಧ್ಯತೆ ತುಂಬಾ ಕಡಿಮೆ. ಕ್ರಿಕೆಟ್ ಈವರೆಗೆ ಒಲಿಂಪಿಕ್ಸ್‌ನಲ್ಲಿ ಇಲ್ಲವೆಂದೆ ಭಾವಿಸಿದ್ದಾರೆ ಅನೇಕರು. ಆದರೆ 1900ನೇ ಇಸವಿಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕೂಡ ಸ್ಪರ್ಧೆಯಲ್ಲಿತ್ತು. ಈ ಸಂದರ್ಭದಲ್ಲಿ ಕೇವಲ ಎರಡು ತಂಡಗಳು ಮಾತ್ರವೇ ಕ್ರಿಕೆಟ್‌ನಲ್ಲಿ ಪದಕ್ಕಾಗಿ ಭಾಗವಹಿಸಿದ್ದವು. ಫ್ರಾನ್ಸ್ ಹಾಗೂ ಗ್ರೇಟ್ ಬ್ರಿಟನ್ ಮಧ್ಯೆ ಪದಕಕ್ಕಾಗಿ ಸ್ಪರ್ಧೆ ಏರ್ಪಟ್ಟಿತ್ತು. ಎರಡು ದಿನಗಳ ಕ್ರಿಕೆಟ್ ಪಂದ್ಯವನ್ನು ಒಲಿಂಪಿಕ್ಸ್‌ನಲ್ಲಿ ಆಯೋಜಿಸಲಾಗಿದ್ದು ಇದರಲ್ಲಿ ಗ್ರೇಟ್ ಬ್ರಿಟನ್ ಗೆದ್ದು ಚಿನ್ನದ ಪದಕ ಗಳಿಸಿದ್ದರೆ ಫ್ರಾನ್ಸ್ ಸೋಲು ಕಾಣುವ ಮೂಲಕ ಬೆಳ್ಳಿಯ ಪದಕವನ್ನು ಮುಡಿಗೇರಿಸಿಕೊಂಡಿತ್ತು.
ಒಲಿಂಪಿಕ್ಸ್‌ನಲ್ಲಿ  ಕ್ರಿಕೆಟ್ ಸೇರ್ಪಡೆಗೆ ಐಸಿಸಿ ಪ್ರಸ್ತಾವನೆ..
ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ಅನ್ನು ಸೇರ್ಪಡೆಗೊಳಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಈ ಹಿಂದೆಯೇ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ಪ್ರಸ್ತಾವನೆಯನ್ನು ಕಳುಹಿಸಿಕೊಟ್ಟಿದ್ದಾರೆ. ಆದರೆ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ನ ಸೇರ್ಪಡೆಗೆ ಬಿಸಿಸಿಐ ಹಿಂದೇಟು ಹಾಕಿತ್ತು. ಹೀಗಾಗಿ ಐಸಿಸಿ ಕೂಡ ಈ ಪ್ರಸ್ತಾವನೆಯ ಬಗ್ಗೆ ಮರು ಚಿಂತನೆ ನಡೆಸುವಂತಾಗಿತ್ತು.
ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯಾದರೆ ಭಾರತ ಭಾಗವಹಿಸಲಿದೆ…
ಈಗಿನ ಮಾಹಿತಿಯ ಪ್ರಕಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದು ಕ್ರಿಕೆಟ್ ಒಲಿಂಪಿಕ್ಸ್‌ನ ಭಾಗವಾದರೆ ಭಾರತ ಈ ಟೂರ್ನಿಯಲ್ಲಿ ಭಾಗವಹಿಸಲಿದೆ ಎಂದು ತಿಳಿಸಿದ್ದಾರೆ.
ಟಿ20 ಮಾದರಿ ಚುಟುಕು ಕ್ರಿಕೆಟ್ ಪಂದ್ಯಾಟ ಸೇರ್ಪಡೆಗೊಳಿಸುವ ಸಾಧ್ಯತೆ…
ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ಅನ್ನು ಸೇರ್ಪಡೆಗಿಳಿಸುವ ಬಗ್ಗೆ ಇನ್ನೂ ಸ್ಪಷ್ಟನೆಯಿಲ್ಲ. ಅಲ್ಲದೆ ಯಾವ ಮಾದರಿಯ ಕ್ರಿಕೆಟ್‌ಅನ್ನು ಆಡಿಸಲಾಗುತ್ತದೆ ಎಂಬ ಬಗ್ಗೆಯೂ ಸಾಕಷ್ಟು ಗೊಂದಲಗಳು ಇವೆ. ಎಂಟು ತಂಡಗಳು ಭಾಗವಹಿಸುವ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟಿ20 ಮಾದರಿಯನ್ನು ಸೇರ್ಪಡೆಗೊಳಿಸುವ ಸಾಧ್ಯತೆಯಿದೆ. ನಾಲ್ಕು ಗಂಟೆಗಳ ಅವಧಿಯಲ್ಲಿ ಫಲಿತಾಂಶ ಪಡೆಯುವ ಸಾಧ್ಯತೆಯಿರುವ ಕಾರಣದಿಂದಾಗಿ ಚುಟುಕು ಮಾದರಿಯೇ ಸೂಕ್ತ ಎನ್ನಲಾಗುತ್ತಿದೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಸಾಧನೆಗೆ ಬಿಸಿಸಿಐ ಹರ್ಷ…
ಇನ್ನು ಮತ್ತೊಂದೆಡೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ನೀಡಿದ ಪ್ರದರ್ಶನದಿಂದಾಗಿ ಬಿಸಿಸಿಐ ಸಂತಸಗೊಂಡಿದೆ.
ಅದೇನೇ ಇರಲಿ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯಾದರೆ ವಿಶ್ವದ ಅಸಂಖ್ಯಾತ ಕ್ರಿಕೆಟ್ ಪ್ರೇಮಿಗಳ ಹರ್ಷ ಮುಗಿಲು ಮುಟ್ಟಲಿದೆ.
Exit mobile version