Site icon SportsKannada ಸ್ಪೋರ್ಟ್ಸ್ ಕನ್ನಡ

ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯಿಂದ ಕ್ರಿಕೆಟ್ ಪಂದ್ಯಾಟ – ಸೆಪ್ಟೆಂಬರ್ 20 ಮತ್ತು 21ರಂದು ಭರ್ಜರಿ ಆಯೋಜನೆ

ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯಿಂದ ಕ್ರಿಕೆಟ್ ಪಂದ್ಯಾಟ – ಸೆಪ್ಟೆಂಬರ್ 20 ಮತ್ತು 21ರಂದು ಭರ್ಜರಿ ಆಯೋಜನೆ

ನಿಗದಿತ ಓವರ್‌ಗಳ ಪಂದ್ಯಾವಳಿ

ಹೆಬ್ರಿ: ಈ ಬಾರಿ 15ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ವಿಶೇಷವಾಗಿ ಕ್ರೀಡಾ ಹಬ್ಬದೊಂದಿಗೆ ಸಂಭ್ರಮಿಸಲು ಸಜ್ಜಾಗಿದೆ. ಮಹೋತ್ಸವ ಸಮಿತಿ ವತಿಯಿಂದ ಮುಕ್ತ ಓವರ್ ಆರ್ಮ್ ಕ್ರಿಕೆಟ್ ಟೂರ್ನಮೆಂಟ್ ನ್ನು ಸೆಪ್ಟೆಂಬರ್ 20 ಮತ್ತು 21, 2025ರಂದು ಆಯೋಜಿಸಲಾಗುತ್ತಿದೆ.

ಸ್ಪರ್ಧೆಯ ಪ್ರಮುಖ ಆಕರ್ಷಣೆಗಳಾಗಿ ವಿಜೇತ ತಂಡಕ್ಕೆ ರೂ. 11,111/- ಬಹುಮಾನ ಹಾಗೂ ರನ್ನರ್-ಅಪ್ ತಂಡಕ್ಕೆ ರೂ. 6,666/- ಬಹುಮಾನಗಳನ್ನು ಘೋಷಿಸಲಾಗಿದೆ. ಸ್ಪರ್ಧೆಯಲ್ಲಿ ನಗದಿನ ಬಹುಮಾನಗಳ ಜೊತೆಗೆ ಆಕರ್ಷಕ ಟ್ರೋಫಿಗಳು ಕೂಡ ವಿತರಿಸಲಾಗುವುದು.

ಸುಕೇಶ್ ಶೆಟ್ಟಿ, ಅಲೋಕ್ ಹೆಗ್ಡೆ ಮತ್ತು ದಿನೇಶ್ ಶೆಟ್ಟಿ ಹಾಗೂ ಮಹೋತ್ಸವ ಸಮಿತಿ ಎಲ್ಲಾ ಕ್ರಿಕೆಟ್ ಪ್ರೇಮಿಗಳು ಮತ್ತು ಸ್ಥಳೀಯ ಕ್ರೀಡಾ ಅಭಿಮಾನಿಗಳನ್ನು ಈ ಕ್ರೀಡಾ ಹಬ್ಬದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದೆ.

Exit mobile version