SportsKannada | ಸ್ಪೋರ್ಟ್ಸ್ ಕನ್ನಡ

ತಲ್ಲೂರಿನಲ್ಲಿ ನಡೆದ ಕ್ರಿಕೆಟ್ ಹಬ್ಬ- ಟಿಪಿಎಲ್ 6-ಸಬ್ಲಾಡಿ ನೈಟ್ ರೈಡರ್ಸ್ ಚಾಂಪಿಯನ್ಸ್

ಕುಂದಾಪುರ-ತಲ್ಲೂರು ಫ್ರೆಂಡ್ಸ್ ಇವರ ವತಿಯಿಂದ TPL -6 (ತಲ್ಲೂರ್ ಪ್ರೀಮಿಯರ್ ಲೀಗ್) ಕ್ರಿಕೆಟ್ ಪಂದ್ಯಾಟವು ದಿನಾಂಕ ಅಕ್ಟೋಬರ್-2022 ದಿನಾಂಕ 29 ಮತ್ತು 30 ರಂದು ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ, ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್(ಕಿವುಡರ ಕ್ರಿಕೆಟ್) ಆಟಗಾರರಾದ ಪ್ರಥ್ವಿರಾಜ್ ಶೆಟ್ಟಿ ಹುಂಚನಿ, ಸಮುದಾಯ ಯುವಕ ಮಂಡಲದ ಗೌರವಾಧ್ಯಕ್ಷರು ಮತ್ತು ಹಿರಿಯ ವಕೀಲರಾದ  ಟಿ.ಬಿ. ಶೆಟ್ಟಿಯವರು, ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಭೀಮವ್ವರವರು, ಮಾಜಿ ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆನಂದ ಬಿಲ್ಲವ, ಸ್ಪೋರ್ಟ್ಸ್ ವರ್ಡ್ ಕನ್ನಡ  ವೆಬ್ ಸೈಟ್ ನ ಮಾಲೀಕರಾದ ಕೆ.ಆರ್.ಕೆ ಆಚಾರ್ಯ, ಜಿ. ಕನ್ನಡದಲ್ಲಿ ನಡೆದ ಡ್ರಾಮಾ ಜ್ಯೂನಿಯರ್ಸ್ ವಿಜೇತ ಸಮೃದ್ಧಿ ಎಸ್ ಮೊಗವೀರ, ಮನೋಜ್ ನಾಯರ್, ಚಂದ್ರ ಮಾಸ್ಟರ್, ರಾಘವೇಂದ್ರ ಕಡೆಮನೆ, ಸುರೇಶ್ ಆಚಾರ್ಯ ತಲ್ಲೂರು, ಫಿರೋಜ್ ಖಾನ್, ಕುಸುಮಾಕರ ಶೆಟ್ಟಿ, ಗ್ಲಾನ್ ಬೆರೆಟ್ಟೊ, ಸಂತೋಷ್ ಶೆಟ್ಟಿ ದೊಡ್ಮನೆ, ಮೂರ್ತಿ ಅಣ್ಣ, ಗೋಪಾಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಾಧನೆಗೈದ ಸ್ಥಳೀಯ ಪ್ರತಿಭೆಗಳಾದ, ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್(ಕಿವುಡರ ಕ್ರಿಕೆಟ್) ಆಟಗಾರರಾದ ಪ್ರಥ್ವಿರಾಜ್ ಶೆಟ್ಟಿ ಹುಂಚನಿ, ಜಿ. ಕನ್ನಡದಲ್ಲಿ ನಡೆದ ಡ್ರಾಮಾ ಜ್ಯೂನಿಯರ್ಸ್ ವಿಜೇತ ಸಮೃದ್ಧಿ ಎಸ್ ಮೊಗವೀರ, ಸ್ಪೋರ್ಟ್ಸ್ ಕನ್ನಡ  ವೆಬ್ ಸೈಟ್ ನ ಮಾಲೀಕರಾದ ಕೆ.ಆರ್.ಕೆ ಆಚಾರ್ಯ, ವಿನ್ಸ್ಟನ್ ಮೆಂಡೊನ್ಸಾ, ಆದಿತ್ಯ, ಕಾರ್ತಿಕ್ ಐತಾಳ್, ದರ್ಶನ್   ದೇವರಾಜ್ ಪೂಜಾರಿ ಅವರಿಗೆ ಸನ್ಮಾನಿಸಲಾಯಿತು.
“ಸ್ನೇಹದ ಪಿಚ್ಚಿನಲ್ಲಿ ಕ್ರಿಕೆಟ್ ಕದನ” ಎಂಬ ಶೀರ್ಷಿಕೆ ಅಡಿಯಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಬ್ಲಾಡಿ ನೈಟ್ ರೈಡರ್ಸ್ ತಂಡ 4 ನೇ ಬಾರಿ ಟಿಪಿಎಲ್ ಟ್ರೋಫಿಯನ್ನು ಜಯಿಸಿದರು ಮತ್ತು ಎಂಸಿಸಿ ಗರಡಿ ತಂಡವು ರನ್ನರ್ಸ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಪಂದ್ಯಾಟದಲ್ಲಿ “ಮ್ಯಾನ್ ಆಫ್ ದಿ ಸಿರೀಸ್” ಪ್ರಶಸ್ತಿಯನ್ನು ನೈಟ್ ರೈಡರ್ಸ್ ಸಬ್ಲಾಡಿ  ತಂಡದ ಶಶಾಂಕ್ ಶೆಟ್ಟಿ(ಶಶಿ), “ಬೆಸ್ಟ್ ಬ್ಯಾಟ್ಸ್ಮನ್” ಪ್ರಶಸ್ತಿಯನ್ನು ಎಂಸಿಸಿ ಗರಡಿ ತಂಡದ ರಜತ್, “ಬೆಸ್ಟ್ ಬೌಲರ್” ಕೋಟೆಬಾಗಿಲು ಫ್ರೆಂಡ್ಸ್ ತಂಡದ ಬಾಲು ಹಾಗೂ “ಎಮರ್ಜಿಂಗ್ ಪ್ಲೇಯರ್” ಪ್ರಶಸ್ತಿಯನ್ನು ಎಂಸಿಸಿ ಗರಡಿ ತಂಡದ ಸುಶಾಂತ್ ಅವರು ಪಡೆದುಕೊಂಡರು.
ಟಿಪಿಎಲ್ 6 ಪಂದ್ಯಾಕೂಟದಲ್ಲಿ ಸಬ್ಲಾಡಿ ನೈಟ್ ರೈಡರ್ಸ್, ಕಿಂಗ್ಸ್ ಇಲೆವೆನ್ ತಲ್ಲೂರು, ಫ್ರೆಂಡ್ಸ್‌ ಪಿಂಗಾಣಿ, ಕೋಟೆಬಾಗಿಲು ಫ್ರೆಂಡ್ಸ್, ಪಾರ್ತಿಕಟ್ಟೆ ಫ್ರೆಂಡ್ಸ್, ಎಮ್.ಸಿ.ಸಿ. ಗರಡಿ, ರೈಸಿಂಗ್ ಸ್ಟಾರ್ಸ್ ತಲ್ಲೂರು (ಗರಡಿ ಬಿ ತಂಡ), ಪವರ್ ಫ್ರೆಂಡ್ಸ್ ತಲ್ಲೂರು, ತಲ್ಲೂರು ಸೂಪರ್ ಕಿಂಗ್ಸ್, ಯು.ಬಿ.ಎಫ್ ಉಪ್ಪಿನಕುದ್ರು, ತಲ್ಲೂರು ಟೈಟನ್ಸ್. ಎಮ್ ಕೆ ಕ್ರಿಕೆಟರ್ಸ್ ಸಬ್ಲಾಡಿ, ಮಾಸ್ತಿ ಕ್ರಿಕೆಟರ್ಸ್ ಮಾರನಮನೆ, ಒಟ್ಟು 13 ತಂಡಗಳು ಭಾಗವಹಿಸಿದರು.
ಟಿಪಿಎಲ್ ಇದರ ನೇರಪಸಾರವನ್ನು MalnadNetwork  ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಂಡಿತ್ತು.
ಮತ್ತು “ನಮ್ಮ ತಲ್ಲೂರು ಮಿಮ್ಸ್” ಎಂಬ ಪೇಸ್ಬುಕ್ ಪೇಜ್  ಆನಲೈನ್ ಪಾರ್ಟ್ನರ್ಸ್ ಆಗಿ ಕಾರ್ಯ ನಿರ್ವಹಿಸಿದರು.
Exit mobile version