SportsKannada | ಸ್ಪೋರ್ಟ್ಸ್ ಕನ್ನಡ

ಪ್ರತಿಭಾವಂತ ಕ್ರಿಕೆಟ್ ಆಟಗಾರರಿಗೆ ಶೋಧ–ಚಕ್ರವರ್ತಿ ಕ್ರಿಕೆಟ್ ಕ್ಲಬ್‍ನಿಂದ ತರಬೇತಿ ಶಿಬಿರ

ಕುಂದಾಪುರ-ಏಪ್ರಿಲ್ 1 ರಿಂದ ಏಪ್ರಿಲ್ 30 ರವರೆಗೆ ನಡೆಯುವ ಬೇಸಿಗೆ ಕ್ರಿಕೆಟ್‌ ತರಬೇತಿ ಶಿಬಿರ.ಏಪ್ರಿಲ್  ಮೊದಲ ವಾರದಿಂದ ಆರಂಭವಾಗಲಿರುವ ವಾರ್ಷಿಕ ತರಬೇತಿ ಶಿಬಿರ.

80-90 ರ ಧಶಕದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ನಲ್ಲಿ ಚಕ್ರಾದಿಪಥ್ಯ ಸಾಧಿಸಿ ಮೆರೆದ ಸಂಸ್ಥೆ ಅದು ನಮ್ಮೂರಿನ ಹೆಮ್ಮೆಯ ಕುಂದಾಪುರದ ಚಕ್ರವರ್ತಿ ಕ್ರಿಕೆಟ್ ಕ್ಲಬ್. ಶ್ರೀಪಾದ ಉಪಾಧ್ಯಾಯ, ಸತೀಶ್ ಕೋಟ್ಯಾನ್, ಮನೋಜ್ ನಾಯರ್, ಕೆ ಪಿ ಸತೀಶ್, ಪ್ರದೀಪ್ ವಾಜ್, ರಾಜ, ಶಾಹೀದ್,ರಾಘವೇಂದ್ರ ಚರಣ್ ನಾವಡ, ರಂಜಿತ್ ಶೆಟ್ಟಿ ಹೀಗೇ ಇನ್ನಿತರ ಆಟಗಾರರು ಸೇರಿ ಕರ್ನಾಟಕ ರಾಜ್ಯದಲ್ಲೇ ಪ್ರಾಬಲ್ಯವನ್ನು ಮೆರೆದಿತ್ತು.

ಕ್ರಿಕೆಟ್  ಟೂರ್ನಮೆಂಟ್ ನಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದಾರರೂ ಕ್ರಿಕೆಟ್ ಮೇಲೆ ಇರುವ ಇವರ  ಪ್ರೀತಿ ಎಂದಿಗೂ ನಿಲ್ಲಲಿಲ್ಲ ಪ್ರತಿಭಾವಂತ ಕ್ರಿಕೆಟ್ ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ರತಿಷ್ಠಿತ ಚಕ್ರವರ್ತಿ ಕ್ರಿಕೆಟ್ ಕ್ಲಬ್. ವಾರ್ಷಿಕ ತರಬೇತಿ ಶಿಬಿರವನ್ನು ನಡೆಸುತ್ತಾ ಬಂದಿದೆ.

ಕುಂದಾಪುರ ನಗರದ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಪ್ರತಿಭಾವಂತ ಕ್ರಿಕೆಟ್ ಪಟುಗಳಿಗಾಗಿ ಆಯೋಜಿಸಿರುವ ಶಿಬಿರ ಏಪ್ರಿಲ್ 1 ರಿಂದ ಪ್ರಾರಂಭಗೊಳ್ಳಲಿದೆ, ಗಾಂಧಿ ಮೈದಾನದಲ್ಲಿ ಶಿಬಿರ ನಡೆಸಿ ತರಬೇತಿ ನೀಡಲಿದೆ. ಅಂಡರ್ 13  ಮತ್ತು 14 ವರ್ಷ ಮಿಗಿಲಾದ ಮಕ್ಕಳಿಗಾಗಿ ( Both Boys & Girls ) ಇಲ್ಲಿ ಲೆದರ್ ಬಾಲ್ ತರಬೇತಿ ನೀಡಿ ಪ್ರತಿಭಾವಂತರನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಭಾಗಿತ್ವದಲ್ಲಿ ಈ ತರಬೇತಿ ಶಿಬಿರ ನಡೆಯಲಿದೆ.

ಕಳೆದ ಹಲವಾರು ವರ್ಷಗಳಿಂದ ಸತತವಾಗಿ ವಾರ್ಷಿಕ ತರಬೇತಿ, ಬೇಸಿಗೆ ಶಿಬಿರಗಳನ್ನು ನಡೆಸುತ್ತಿರುವ  ಚಕ್ರವರ್ತಿ ಕ್ರಿಕೆಟ್ ಕ್ಲಬ್, ಒಂದು ತಿಂಗಳ ಕಾಲ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ನಡೆಸಲಿದೆ. ಉತ್ಸಾಹಿ ಹಿರಿಯ ಆಟಗಾರರು ಮತ್ತು ತಜ್ಞ ಕ್ರಿಕೆಟ್ ಪಟುಗಳ ಮಾರ್ಗದರ್ಶನದಲ್ಲಿ ತರಬೇತಿ ನೀಡಿ, ಪ್ರತಿಭಾವಂತರನ್ನು ವೃತ್ತಿಪರ ಕ್ರಿಕೆಟ್‍ಗೆ ಪೂರಕವಾಗಿ ತಯಾರಿ ನಡೆಸಲಾಗುತ್ತದೆ ಎಂದು ಕ್ಲಬ್ ನ ಕ್ರಿಕೆಟ್ ಕೋಚ್  ಪ್ರದೀಪ್ ವಾಜ್ ತಿಳಿಸಿದ್ದಾರೆ. ಇಲ್ಲಿ ತರಬೇತಿ ಪಡೆದ ಸಾಕಷ್ಟು ಮಕ್ಕಳು ಜಿಲ್ಲಾಮಟ್ಟ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದು ತಿಳಿಸಿರುವ ಅವರು, ಆಸಕ್ತ ಕ್ರಿಕೆಟ್ ಪ್ರೇಮಿಗಳು ಒಟ್ಟುಗೂಡಿ ಈ ಸತ್ಕಾರ್ಯದಲ್ಲಿ ತೊಡಗಿರುವುದಾಗಿ ಹೇಳಿದ್ದಾರೆ.

ಶಿಬಿರದಲ್ಲಿ ಮಕ್ಕಳ ದೈಹಿಕ ಸಾಮರ್ಥ್ಯ ವೃದ್ಧಿ, ಮನೋಬಲ ಹೆಚ್ಚಿಸುವುದರ ಜೊತೆಗೆ ವೃತ್ತಿಪರ ಕ್ರಿಕೆಟ್‌ಗೆ ಪೂರಕವಾಗಿ ತಯಾರಿ ಮಾಡಲಾಗುವುದು. ಪ್ರಸ್ತುತ ಕುಂದಾಪುರದ ಗಾಂಧಿ  ಮೈದಾನದಲ್ಲಿ ವಾರ್ಷಿಕ ತರಬೇತಿ ನೀಡಲಾಗುತ್ತಿದ್ದು ಮಕ್ಕಳನ್ನು ದೈಹಿಕ ಮತ್ತು ಮಾನಸಿಕವಾಗಿ ತಯಾರುಗೊಳಿಸಿ ಭವಿಷ್ಯದ ಕ್ರಿಕೆಟ್ ಪಟುಗಳಾಗಿ ರೂಪುಗೊಳಿಸುವುದೇ ಇವರ ಗುರಿ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಪ್ರದೀಪ್ ವಾಜ್  9448252649 ಅಥವಾ ಅರ್ಮಾನ್  8792444376,  ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಚಕ್ರವರ್ತಿ ಕ್ರಿಕೆಟ್ ಕ್ಲಬ್ನ ಸೇವೆಯನ್ನು ಸ್ಪೋರ್ಟ್ಸ್ ಕನ್ನಡ ಶ್ಲಾಘಿಸುತ್ತಿದೆ. ರಾಜ್ಯಕ್ಕೆ ಪ್ರತಿಭಾವಂತ ಕ್ರಿಕೆಟಿಗರನ್ನು ಕೊಡುಗೆಯಾಗಿ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿ ಎಂದು ಹಾರೈಸುತ್ತಿದೆ. ಭವಿಷ್ಯದಲ್ಲೂ ಕ್ಲಬ್ ನ ಉತ್ತಮ ಕಾರ್ಯಕ್ಕೆ ಸಂಪೂರ್ಣ ಸಹಕಾರ ಸ್ಪೋರ್ಟ್ಸ್ ಕನ್ನಡ ನೀಡಲಿದೆ.

ಏಪ್ರಿಲ್ 1 ರಿಂದ ಏಪ್ರಿಲ್ 30 ರವರೆಗೆ ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯುವ  ಬೇಸಿಗೆ ತರಬೇತಿ ಕ್ರಿಕೆಟ್‌ ಶಿಬಿರ ಯಶಸ್ವಿಯಾಗಿ ಮುಕ್ತಾಯವಾಗಲಿ.

Exit mobile version