SportsKannada | ಸ್ಪೋರ್ಟ್ಸ್ ಕನ್ನಡ

ಟೆಸ್ಟ್ ಪಂದ್ಯಗಳ ರೋಚಕತೆ ಹೆಚ್ಚಿಸುವ ಕಪ್ತಾನರ ಧೈರ್ಯಶಾಲಿ ನಿರ್ಧಾರಗಳು

ಹೌದು ಕಪ್ತಾನರುಗಳು ಮನಸ್ಸು ಮಾಡಿದರೆ ಹೇಗೆ ಒಂದು ಟೆಸ್ಟ್ ಪಂದ್ಯ ಜೀವ ಪಡೆದುಕೊಳ್ಳುತ್ತದೆ ಎನ್ನುವುದಕ್ಕೆ ಜೀವಂತ ಉದಾಹರಣೆ 2001 1st TEST ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯ ಸಾಕ್ಷಿ.
     ಮೊದಲ ನಾಲ್ಕು ದಿನ ಕೇವಲ15 ವಿಕೆಟ್ ಪತನವಾಗಿ ಪಂದ್ಯ ನೀರಸ ಡ್ರಾದತ್ತ ಸಾಗುತ್ತಿರುವಾಗ ಎರಡು ತಂಡದ ನಾಯಕರುಗಳ ಧೈರ್ಯಶಾಲಿ ಡಿಕ್ಲರೇಷನ್ ಗಳು ಪಂದ್ಯ ರೋಚಕತೆಗೆ ಕೊಂಡೊಯ್ಯುತ್ತದೆ. ಆಸ್ಟ್ರೇಲಿಯಾ ಮೊದಲ ಇನಿಂಗ್ಸಲ್ಲಿ ಗಳಿಸಿದ 486 ಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ನ ಸ್ಟೀಫನ್ ಫ್ಲೆಮಿಂಗ್ ಕೇವಲ ಫಾಲೋಆನ್ ತಪ್ಪಿಸಿ 287 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡುತ್ತಾನೆ. ಇದನ್ನು ಮನಗಂಡ ಎದುರಾಳಿ ಕಪ್ತಾನ ಸ್ಟೀವ್ ವಾ ಕೇವಲ 14 ಓವರ್ಗಳಲ್ಲಿ 88 ರನ್ ಗೆ ಆಸ್ಟ್ರೇಲಿಯಾ ಇನ್ನು  57 ಓವರ್ ಇರುವಾಗ ತನ್ನ ಇನ್ನಿಂಗ್ಸ್ ಕೊಡ ಡಿಕ್ಲೇರ್ ಮಾಡಿ ನ್ಯೂಜಿಲೆಂಡ್ ತಂಡಕ್ಕೆ 283 ಟಾರ್ಗೆಟ್ (57 over) ಕೊಡುತ್ತಾನೆ.
      ಪಂದ್ಯಾಟ ಐದನೇ ದಿನದ ಕೊನೆಯ ತನಕವೂ ರೋಚಕತೆ ಸಾಕ್ಷಿಯಾಗುತ್ತದೆ.ನ್ಯೂಜಿಲೆಂಡ್ ನ ಹೋರಾಟ ಎಷ್ಟು ಉತ್ತಮ ಮಟ್ಟದಲ್ಲಿ ಇತ್ತೆಂದರೆ ನಿರಾಯಾಸವಾಗಿ ಚೇಸ್ ಮಾಡಿಬಿಡುತ್ತೆ ಎಂದೆನಿಸಿತ್ತು. ಕೊನೆಯ 3 ಓವರ್ಗಳಲ್ಲಿ 21 ರನ್ ಅವಶ್ಯಕತೆ ಇದ್ದಾಗ ಆಸ್ಟ್ರೇಲಿಯಾ ಪಂದ್ಯ ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ MecMilan ಕ್ರೀಸ್ ನಲ್ಲಿ ಹೈ ಟಚ್ ನಲ್ಲಿ ಇರುವಾಗ ಇದೇನು ಅಸಾಧ್ಯ ಆಗಿರಲಿಲ್ಲ ನ್ಯೂಜಿಲ್ಯಾಂಡ್ ನ ವಿಜಯಕ್ಕೆ ಆವಾಗಲೇ ವೇದಿಕೆ ಸಿದ್ಧವಾಗಿತ್ತು. ಕೊನೆಗೆ ಗ್ಲೆನ್ ಮೆಗ್ರಾಥ್ ಟೆಸ್ಟ್ ಕ್ರಿಕೆಟ್ ನ ಅವೈಜ್ಞಾನಿಕ ನಿಯಮದ(ಸಾಮಾನ್ಯವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ತೀರ ಹೊರಹೋದ ಎಸೆತಗಳನ್ನು ಮಾತ್ರ ವೈಡ್ ಎಂದು ಘೋಷಿಸಲಾಗುತ್ತದೆ) ಲಾಭ ಪಡೆದುಕೊಂಡು ಅಗಲವಾದ ಎಸೆತಗಳನ್ನು ಕ್ರೆಗ್ Mecmilan ಗೆ ಎಸೆದು ಓವರ್ ಕಂಪ್ಲೀಟ್ ಆಗುವಂತೆ ನೋಡಿಕೊಂಡು ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುತ್ತದೆ.
ಈ ಪಂದ್ಯಾಟ ಟೆಸ್ಟ್ ಕ್ರಿಕೆಟಿಗೆ ತದ್ವಿರುದ್ಧವಾಗಿದ ನಡೆದರೂ ಎರಡು ತಂಡದ ನಾಯಕರುಗಳ ಧೈರ್ಯಶಾಲಿ ನಿರ್ಧಾರಗಳು, ಡಿಕ್ಲರೇಷನ್ ಗಳು,  ನಮ್ಮ ಮನದಲ್ಲಿ ಇಂದಿಗೂ ಅಚ್ಚೊತ್ತಿದೆ.
    ಹಾಗೆಯೇ ಇಂದಿನ  ನಾಯಕರುಗಳು ಇನ್ನಿಂಗ್ಸ್ ಡಿಕ್ಲರೇಷನ್ ತೀರಾ ಲೇಟ್ ಮಾಡಿದಾಗೆಲ್ಲ ಪಂದ್ಯಾಟ ಕಣ್ಣ ಮುಂದೆ ಬಂದು ಹೋಗುತ್ತದೆ. ಈ ಪಂದ್ಯಾಟ ನಾವು ವೀಕ್ಷಿಸಿದ ಅತ್ಯುತ್ತಮ ಟೆಸ್ಟ್ ಗಳಲ್ಲಿ ಒಂದು.
️ಅಶೋಕ್ ಹೆಗ್ಡೆ ಹೆಬ್ರಿ
Australia 486/9 Dec
Newzealand 287 Dec
Australia 84/2 Dec
Newzealand 274/6
10run short
Match drawn.
Attachments area
Exit mobile version