
ಶೆಫ್‌ಟಾಕ್ ಪ್ರೀಮಿಯರ್ ಲೀಗ್ ಸೀಸನ್ 6 ಕ್ರಿಕೆಟ್ ಸಂಭ್ರಮ-ಕಂಪೆನಿ ಸಿಬ್ಬಂದಿಗಳ ಮಹಾಸಂಗಮ!
ಬೆಂಗಳೂರು: ಪ್ರತೀ ಬಾರಿಯಂತೆ ಈ ವರ್ಷದ ‘Cheftalk Premier League – Season 6’ ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 13 ಮತ್ತು 14, 2025 ರಂದು ಬೆಳಗ್ಗೆ 7.00 ರಿಂದ ಸಂಜೆ 6.00 ಗಂಟೆವರೆಗೆ ಕೂಡ್ಲು ಗೇಟ್, ಬೆಂಗಳೂರು ಮೈದಾನದಲ್ಲಿ ನಡೆಯಲಿದೆ.
ಈ ಟೂರ್ನಿಯನ್ನು Cheftalk Food & Hospitality Services Pvt. Ltd. ಸಂಸ್ಥೆ ಆಯೋಜಿಸಿದ್ದು, ಸಂಸ್ಥೆಯ ಸ್ಥಾಪಕ ಹಾಗೂ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅವರು ಈ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲರಿಗೂ ಆತ್ಮೀಯ ಸ್ವಾಗತ ನೀಡಿದ್ದಾರೆ. ಸಂಸ್ಥೆಯ ನೂರಾರು ಶೆಫ್‌ಗಳು ಮತ್ತು ಹಾಸ್ಪಿಟಾಲಿಟಿ ವೃತ್ತಿಪರರು ಮೈದಾನದಲ್ಲಿ ತಮ್ಮ ಕ್ರಿಕೆಟ್ ಕೌಶಲ್ಯ ಪ್ರದರ್ಶಿಸಲಿದ್ದಾರೆ.
CHEFTALK PREMIER LEAGUE – SEASON 6 ಕ್ರಿಕೆಟ್ !
ಕಳೆದ ಐದು ಸೀಸನ್‌ಗಳಲ್ಲಿ ಭರ್ಜರಿ ಯಶಸ್ಸು ಕಂಡ CPL ಈಗ ಆರನೇ ಆವೃತ್ತಿಯೊಂದಿಗೆ ಹೊಸ ಉತ್ಸಾಹದ ಕ್ರಿಕೆಟ್ ಕಣವನ್ನು ಸಿದ್ಧಪಡಿಸಿದೆ. ತಂಡಗಳ ಮಧ್ಯೆ ನಡೆಯಲಿರುವ ತೀವ್ರ ಹೋರಾಟ, ಕ್ರೀಡಾತ್ಮಕ ಮನೋಭಾವ ಹಾಗೂ ಸಹಕಾರದ ಸಂಸ್ಕೃತಿಗೆ ಈ ಲೀಗ್ ವೇದಿಕೆಯಾಗಲಿದೆ.
