SportsKannada | ಸ್ಪೋರ್ಟ್ಸ್ ಕನ್ನಡ

ಏಪ್ರಿಲ್ 7 ರಿಂದ ವಿಕ್ರಮ್ ಕ್ರಿಕೆಟ್ ಕ್ಲಬ್ ಬೈಂದೂರು ನ ಬೇಸಿಗೆ ಕ್ರಿಕೆಟ್ ಶಿಬಿರ

ಬೈಂದೂರು-ವಿಕ್ರಮ್ ಕ್ರಿಕೆಟ್ ಕ್ಲಬ್ ಬೈಂದೂರು ವತಿಯಿಂದ ಬೇಸಿಗೆ ರಜೆಯ ಪ್ರಯುಕ್ತ ಏಪ್ರೀಲ್ ಮತ್ತು ಮೇ ತಿಂಗಳಲ್ಲಿ ಬೈಂದೂರಿನಲ್ಲಿ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವು ಜರುಗಲಿರುವುದು. 7 ರಿಂದ 16 ವರ್ಷದ ಬಾಲಕ ಬಾಲಕಿಯರಿಗೆ ತರಬೇತಿ ಪಡೆಯುವ ಅವಕಾಶವಿದ್ದು ಏಪ್ರೀಲ್ 7 ರಿಂದ ಪ್ರಥಮ ಹಂತದ ಶಿಬಿರ ಆರಂಭಗೊಳ್ಳಲಿದೆ.
ಬೈಂದೂರಿನ ಕ್ರೀಡಾಂಗಣದಲ್ಲಿ ಎರಡು ತಿಂಗಳುಗಳ ಕಾಲ ಪ್ರತಿದಿನ ಮಧ್ಯಾಹ್ನ 3 ರಿಂದ 6 ಗಂಟೆಯ ವರೆಗೆ ಕ್ರಿಕೆಟ್ ತರಬೇತಿ ನಡೆಯಲಿದೆ. ಕ್ರಿಕೆಟ್ ತರಬೇತುದಾರರಾದ ನಿತಿನ್ ಸಾರಂಗ, ದಿನೇಶ್ ಕೆ ಮತ್ತು ರಾಜೇಶ್ ಆಚಾರ್ ಮಾರ್ಗದರ್ಶನ ನೀಡಲಿದ್ದಾರೆ. ಎರಡು ತಿಂಗಳ ಕಾಲ ನಡೆಯುವ ಶಿಬಿರಕ್ಕೆ ಇತರೆ ಸ್ಥಳದ ನುರಿತ ತರಬೇತುದಾರರು ಕೂಡ ಆಗಮಿಸಿ ವಿಶೇಷ ತರಬೇತಿ ನೀಡಲಿದ್ದಾರೆ.
ಕರ್ನಾಟಕ ರಾಜ್ಯ ಟೆನಿಸ್ ಕ್ರಿಕೆಟ್ ನಲ್ಲಿ  ಐವತ್ತು ವರ್ಷಗಳ ಇತಿಹಾಸ ಇರುವ ತಂಡ ವಿಕ್ರಮ್ ಕ್ರಿಕೆಟ್ ಕ್ಲಬ್ ಬೈಂದೂರು ಈ ಸಮ್ಮರ್ ಕ್ರಿಕೆಟ್ ಕೋಚಿಂಗ್ ಕ್ಯಾಂಪ್  ಹಮ್ಮಿಕೊಂಡಿದ್ದಾರೆ . ತರಬೇತಿ ಶಿಬಿರದಲ್ಲಿ ಬೇಸಿಕ್ ಹಾಗೂ ಅಡ್ವಾನ್ಸ್ ಸ್ಕಿಲ್ ಗಳನ್ನು ತರಬೇತುದಾರರು ಕಲಿಸಿಕೊಡುವರು. ಶಿಬಿರದಲ್ಲಿ ಫಿಟ್ನೆಸ್ ಬಗ್ಗೆಯೂ ಹೇಳಿಕೊಡಲಾಗುವುದು. ಶಿಬಿರದ ಮಧ್ಯದಲ್ಲಿ ಬೇರೆ  ಕ್ರಿಕೆಟ್ ತಂಡದ ವಿರುದ್ಧ ಪಂದ್ಯಗಳನ್ನು ಕೂಡ ಆಯೋಜಿಸಲಾಗುವುದು. ಬೈಂದೂರು ಮತ್ತು ಸುತ್ತಮುತ್ತಲಿನ ಕ್ರಿಕೆಟ್ ಉತ್ಸಾಹಿ ಮಕ್ಕಳಿಗೆ ಈ ಸಮ್ಮರ್ ಸ್ಪೆಷಲ್ ಪ್ರಯೋಜನವನ್ನು ನೀಡುತ್ತದೆ. ಎಲ್ಲಾ ಯುವ ಮತ್ತು ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳಿಗೆ ತಮ್ಮ ಬೇಸಿಗೆಯ ರಜಾದಿನಗಳನ್ನು ಅಮೂಲ್ಯವಾದ ರೀತಿಯಲ್ಲಿ ಕಳೆಯಲು ಇದು ಒಂದು ಅದ್ಭುತವಾದ ಅವಕಾಶವಾಗಿದೆ.
ಉದಯೋನ್ಮುಖ ಪ್ರತಿಭೆಗಳನ್ನು ಆಟಕ್ಕೆ ಪರಿಚಯಿಸಿ ಉತ್ತಮ ನಿರ್ವಹಣೆಗಾಗಿ ಪ್ರೋತ್ಸಾಹಿಸಲಾಗುವುದು ಎಂದು ವಿಕ್ರಮ್ ಕ್ರಿಕೆಟ್ ಕ್ಲಬ್ ನ ಪ್ರಕಟಣೆ ತಿಳಿಸಿದೆ. ಆಸಕ್ತರು ಈ ಶಿಬಿರದ ಸದುಪಯೋಗ  ಪಡೆದುಕೊಳ್ಳಬೇಕಾಗಿ ಕೋರಲಾಗಿದೆ. ಬುಕ್ಕಿಂಗ್ ಮತ್ತು ಹೆಚ್ಚಿನ ವಿವರಗಳಿಗಾಗಿ ನಿತಿನ್ ಸಾರಂಗ  98456 41449, ದಿನೇಶ್ ಗಾಣಿಗ 63638 52771,ರಾಜೇಶ್ ಆಚಾರ್ 99164 40337 ಇವರನ್ನು ಸಂಪರ್ಕಿಸಬಹುದು.
ಕ್ರಿಕೆಟ್  ಕೌಶಲ್ಯ  ಅಭಿವೃದ್ಧಿ ಮತ್ತು ತರಬೇತಿಯನ್ನು ಬೈಂದೂರಿನ ವಿಕ್ರಮ್ ಕ್ರಿಕೆಟ್  ಕ್ಲಬ್  ಪರಿಣಾಮಕಾರಿಯಾಗಿ  ಒದಗಿಸಲಿ ಎಂದು ಸ್ಪೋರ್ಟ್ಸ್ ಕನ್ನಡ ಈ ಸಂದರ್ಭದಲ್ಲಿ ಹಾರೈಸುತ್ತಿದೆ.
Exit mobile version