SportsKannada | ಸ್ಪೋರ್ಟ್ಸ್ ಕನ್ನಡ

ಓರ್ವ ಕ್ರೀಡಾಪಟು ಸೋಲು,ಗೆಲುವಿನ ಹಾದಿಯನ್ನು ಸುಲಭವಾಗಿ ನಿಭಾಯಿಸುತ್ತಾನೆ.ಕ್ರೀಡೆ ಬದುಕು ರೂಪಿಸುತ್ತದೆ”-ಗೌತಮ್ ಶೆಟ್ಟಿ

ಬೈಂದೂರು ಸ್ಪೋರ್ಟ್ಸ್ ಕ್ಲಬ್ ಇವರ ಆಶ್ರಯದಲ್ಲಿ ಇಲ್ಲಿನ ಗಾಂಧಿ ಮೈದಾನದಲ್ಲಿ ಆಯೋಜಿಸಲಾದ ಎರಡು ದಿನಗಳ ಹಗಲಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಬೈಂದೂರು ಟ್ರೋಫಿ-2022 ಉದ್ಘಾಟನಾ ಸಮಾರಂಭ ಇಂದು ಬೆಳಿಗ್ಗೆ ನಡೆಯಿತು.
ಉದ್ಘಾಟನೆಗೈದು ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡಿದ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಟೊರ್ಪೆಡೋಸ್ “
ದೈಹಿಕ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಅತ್ಯಗತ್ಯ.ಓರ್ವ ಕ್ರೀಡಾಪಟು ಸೋಲು,ಗೆಲುವಿನ ಹಾದಿಯನ್ನು ಸುಲಭವಾಗಿ ಕ್ರಮಿಸಬಲ್ಲ ಮತ್ತು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳುತ್ತಾನೆ. ಕ್ರೀಡೆಯಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ದೇವಾಡಿಗ ನವೋದಯ ಸಂಘ(ರಿ) ಇದರ ಅಧ್ಯಕ್ಷರಾದ ಬಿ.ಆರ್.ದೇವಾಡಿಗ “ಹಲವಾರು ವರ್ಷಗಳ ಇತಿಹಾಸವಿರುವ ಬೈಂದೂರು ಮೈದಾನ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಸ್ಟೇಡಿಯಂ ನಿರ್ಮಾಣ ಅಗತ್ಯ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೈಂದೂರು ಆರಕ್ಷಕ ಠಾಣೆ ವೃತ್ತ ನಿರೀಕ್ಷಕರಾದ ಸಂತೋಷ್ ಆನಂದ್ ಕಾಯ್ಕಿಣಿ ” ಕ್ರೀಡೆಯಲ್ಲಿ ಸೋಲು,ಗೆಲುವು ಸಾಮಾನ್ಯ.ಕ್ರೀಡಾ ಸ್ಪೂರ್ತಿ
ಯಿಂದ ಆಡಿ” ಎಂದು ಕರೆ ನೀಡಿದರು.ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ನಾಗರಾಜ್ ಶೆಟ್ಟಿ ನಾಕಟ್ಟೆ “ಬೈಂದೂರು ಗಾಂಧಿ ಮೈದಾನ ಉಳಿಸಿ” ಪ್ರತಿಭಟನೆಯಲ್ಲಿ ಭಾಗವಹಿಸಿದವರೆಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಗೌರವಾಧ್ಯಕ್ಷ ದಿನೇಶ್ ಗಾಣಿಗ ಬೈಂದೂರು,ಸ್ಪೋರ್ಟ್ಸ್ ಕನ್ನಡ ಕೋಟ ರಾಮಕೃಷ್ಣ ಆಚಾರ್,ಯೂನಿಯನ್ ಬ್ಯಾಂಕ್ ಇಂಡಿಯಾ ವಡೇರಹೋಬಳಿ ಶಾಖಾ ವ್ಯವಸ್ಥಾಪಕ ರಾಮಕೃಷ್ಣ ದೇವಾಡಿಗ,ಟೂರ್ನಮೆಂಟ್ ಪ್ರಮುಖ ಆಯೋಜಕರಾದ ಕಿರಣ್ ಬೈಂದೂರು,ರಾಜೇಶ್ ಆಚಾರ್ಯ ಬೈಂದೂರು,
ನೀತರಾಜ್,ನಿತಿನ್,ಮಹೇಶ್ ಬೈಂದೂರು,ಗುಂಡು ಬೈಂದೂರು ಮತ್ತು ಬೈಂದೂರು ಸ್ಪೋರ್ಟ್ಸ್ ಕ್ಲಬ್ ನ‌ ಸದಸ್ಯರು ಉಪಸ್ಥಿತರಿದ್ದರು.
ಶಿವನಾರಾಯಣ ಐತಾಳ್ ಕೋಟ ಕಾರ್ಯಕ್ರಮ ನಿರೂಪಿಸಿದರು.
Exit mobile version