SportsKannada | ಸ್ಪೋರ್ಟ್ಸ್ ಕನ್ನಡ

ಮಾನವೀಯ ನೆಲೆಯ ಸುಂದರ ಪರಿಕಲ್ಪನೆ-ಸುಚೇತ್ ಶೆಟ್ಟಿ ಸಾರಥ್ಯದಲ್ಲಿ ಅದ್ಧೂರಿಯ ಬಂಟ್ಸ್ ಬಿಗ್ ಬ್ಯಾಶ್ ಲೀಗ್.

ಪ್ರತಿಕ್ಷಣವೂ ಬರುವ ಸಣ್ಣ ಸಣ್ಣ ಸಂತೋಷಗಳನ್ನು ಅನುಭವಿಸುತ್ತಾ,ತಮ್ಮ ಪುಟ್ಟ ಕಂಗಳಲ್ಲಿ ಕನಸನ್ನು ಕಾಣುತ್ತಿರುವ,ಅಪ್ಪ ಅಮ್ಮನ ಕಣ್ಣಿಂದ ಕಣ್ಣು ತೆರೆಯುವ ಮುನ್ನವೇ ಅನಾಥರಾಗುವ ಅದೆಷ್ಟೋ ಮುಗ್ಧ ಮನಸ್ಸುಗಳಿಗೆ ಆಸರೆಯಾಗಬೇಕು ಎನ್ನುವ ಒಂದು ಸುಂದರ ಪರಿಕಲ್ಪನೆಯ ಜೊತೆಗೆ ಪ್ರಾಮಾಣಿಕವಾಗಿ ಬದುಕಿ,ಸ್ವಂತ ಚಿಂತೆಗಳನ್ನು ಬದಿಗಿಟ್ಟು ಇನ್ನೊಬ್ಬರ ಧ್ವನಿಗೆ ಧ್ವನಿಯಾಗಬೇಕೆಂಬ ಮಾನವೀಯ ನೆಲೆಯಲ್ಲಿ ಕುಂದಾಪುರ ಮೂಲದ ಉದ್ಯಮಿ ಸುಚೇತ್‌ ಶೆಟ್ಟಿ ಸಾರಥ್ಯದಲ್ಲಿ ಬಂಟ್ಸ್ ಬ್ಯಾಶ್ ಲೀಗ್-2021 ಪಂದ್ಯಾಕೂಟ ನಡೆಯಲಿದೆ.
2020ರಲ್ಲೇ ಘೊಷಣೆಯಾಗಿದ್ದ ಈ ಪಂದ್ಯಾಕೂಟ ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್-19 ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು.ಈ ಬಾರಿ ಬಂಟ್ಸ್ ಬಿಗ್ ಬ್ಯಾಶ್ ಲೀಗ್ ಮಾರ್ಚ್ 27 ಹಾಗೂ 28 ರಂದು ಬೆಂಗಳೂರಿನ ಜೆ‌.ಪಿ‌.ಪಾರ್ಕ್ ಅಂಗಣದಲ್ಲಿ ಹೊನಲು ಬೆಳಕಿನಲ್ಲಿ ಆಯೋಜಿಸಲಾಗಿದೆ.
ಬಂಟ ಸಮುದಾಯದ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ವಿಜೇತ ತಂಡಕ್ಕೆ ಚಿನ್ನದ ಮಿನುಗುವ ಟ್ರೋಫಿಯೊಂದಿಗೆ 2 ಲಕ್ಷ ನಗದು ಹಾಗೂ ರನ್ನರ್ ಅಪ್ ತಂಡಕ್ಕೆ 1ಲಕ್ಷ ನಗದು ಬಹುಮಾನ‌ ಸಹಿತ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತಿದೆ.
ಈಗಾಗಲೇ ತಂಡಗಳ ಬಿಡ್ಡಿಂಗ್ ಪ್ರಕ್ರಿಯೆ ಮುಗಿದಿದ್ದು 8 ತಂಡಗಳ ವಿವರ ಈ ಕೆಳಗಿನಂತಿದೆ.
1)ಅಭಯ್ ಕ್ರಿಕೆಟರ್ಸ್
2)ಬಂಟ್ಸ್ ಯುನೈಟೆಡ್
3)ಗೂಗ್ಲಿ ಪೊಳಲಿ ಟೈಗರ್ಸ್
4)ಈಶಾನಿ ಸಹಾರಾ ಕ್ರಿಕೆಟರ್ಸ್
5)S.D.C.C(ಶ್ರೀ ದುರ್ಗಾ ಕ್ರಿಕೆಟ್ ಕ್ಲಬ್)
6)ಶೆಟ್ಟಿ ಎಂಪೈರ್‌
7)ಉಡುಪಿ ಹಾಸ್ಪಿಟಾಲಿಟಿ ಸರ್ವಿಸಸ್
8)ಯುನೈಟೆಡ್ ವಾರಿಯರ್ಸ್
ಪಂದ್ಯಾಕೂಟದ  ನೇರ ಪ್ರಸಾರವನ್ನು ಕ್ರಿಕ್ ಸೇ ಬಿತ್ತರಿಸಿದರೆ,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.
Exit mobile version