SportsKannada | ಸ್ಪೋರ್ಟ್ಸ್ ಕನ್ನಡ

ಬೆಂಗಳೂರು-ಡೆರಿನ್ ಸ್ಪೋಟಕ ಬ್ಯಾಟಿಂಗ್-ಗೆಲುವಿನ‌ ಶುಭಾರಂಭಗೈದ ರಾಕರ್ಸ್ ರಾಗಿಗುಡ್ಡ

K.T.P.L ನ 4 ನೇ ಪಂದ್ಯದಲ್ಲಿ ಅಜಯ್ ರಾವ್
ಮಾಲೀಕತ್ವದ ರಾಕರ್ಸ್ ರಾಗಿಗುಡ್ಡ ಶಿವಮೊಗ್ಗ,
ಸ್ನೇಹಜೀವಿ ಮೈಸೂರು ತಂಡದ ವಿರುದ್ಧ 10 ರನ್ ಗಳ ಅಂತರದ ಗೆಲುವು ಸಾಧಿಸಿದೆ‌.
ಟಾಸ್ ಗೆದ್ದು ಸ್ನೇಹಜೀವಿ ಮೈಸೂರು ತಂಡ ಫೀಲ್ಡಿಂಗ್ ಆಯ್ದುಕೊಂಡಿತ್ತು.ರಾಕರ್ಸ್ ರಾಗಿಗುಡ್ಡ ತಂಡದ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಉಡುಪಿಯ ಡೆರಿನ್ 11 ಎಸೆತಗಳಲ್ಲಿ   2 ಸಿಕ್ಸರ್ ಮತ್ತು 1 ಬೌಂಡರಿ ಸಹಿತ 17 ರನ್ ಗಳಿಸಿದರೆ, ಮಧು ಮ್ಯಾಡಿ 7ಎಸೆತಗಳಲ್ಲಿ
15 ರನ್ ಸಿಡಿಸಿ ಎದುರಾಳಿಗಳಿಗೆ 8 ಓವರ್ ಗಳಲ್ಲಿ 65 ರನ್ ಗಳ ಗುರಿ ನೀಡಿತ್ತು.
ರನ್ ಚೇಸಿಂಗ್ ವೇಳೆ ಸ್ನೇಹಜೀವಿ ಮೈಸೂರಿನ ಅಗ್ರ ಕ್ರಮಾಂಕದ ಆಟಗಾರರ ಹಠಾತ್ ಕುಸಿತದ ಬಳಿಕ
ಜೀವನ್ 10 ಮತ್ತು ಸಂದೀಪ್ ಕೀನ್ಯಾ 6 ಎಸೆತಗಳಲ್ಲಿ 17 ರನ್ ಸಿಡಿಸಿ ಪ್ರತಿಹೋರಾಟ ನೀಡಿದರೂ,ರಾಕರ್ಸ್ ರಾಗಿಗುಡ್ಡ ಕೊನೆಯ ಹಂತದಲ್ಲಿ ಅತ್ಯುತ್ತಮ ಬೌಲಿಂಗ್ ಸಂಘಟಿಸಿ 10 ರನ್ ಗಳ ಅಂತರದ ಜಯ ಸಾಧಿಸಿದೆ.
ರಾಕರ್ಸ್ ರಾಗಿಗುಡ್ಡ ತಂಡದ ಪರವಾಗಿ ಸ್ಪೋಟಕ ಆರಂಭ ನೀಡಿದ ಡೆರಿನ್ ಅರ್ಹವಾಗಿ ಪಂದ್ಯಶ್ರೇಷ್ಟ ಗೌರವಕ್ಕೆ ಪಾತ್ರರಾದರು
Exit mobile version