Site icon SportsKannada ಸ್ಪೋರ್ಟ್ಸ್ ಕನ್ನಡ

ಅಂಬಿಗ್ ಪ್ರೀಮಿಯರ್ ಲೀಗ್–2026: APL–3 ಮತ್ತು WAPL–1 ಟೂರ್ನಿ

ಅಂಬಿಗ್ ಪ್ರೀಮಿಯರ್ ಲೀಗ್–2026: APL–3 ಮತ್ತು WAPL–1 ಟೂರ್ನಿ

ಅಂಬಿಗ ಸಮಾಜದ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಅಂಬಿಗ್ ಪ್ರೀಮಿಯರ್ ಲೀಗ್–2026 ಕ್ರಿಕೆಟ್ ಟೂರ್ನಿ ಅದ್ಧೂರಿಯಾಗಿ ಆಯೋಜಿಸಲಾಗುತ್ತಿದೆ. ಈ ಟೂರ್ನಿಯಲ್ಲಿ APL–3 (ಪುರುಷರ ವಿಭಾಗ) ಮತ್ತು WAPL–1 (ಮಹಿಳಾ ವಿಭಾಗ) ಪಂದ್ಯಗಳು ನಡೆಯಲಿದ್ದು, ಯುವ ಹಾಗೂ ಅನುಭವಿ ಆಟಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಮಹತ್ವದ ವೇದಿಕೆ ಒದಗಲಿದೆ.

ಈ ಟೂರ್ನಿಯಲ್ಲಿ ವಿವಿಧ ಶಕ್ತಿಶಾಲಿ ತಂಡಗಳು ಹಾಗೂ ಖ್ಯಾತ ಆಟಗಾರರು ಭಾಗವಹಿಸಲಿದ್ದು, ಈಗಾಗಲೇ ತಂಡಗಳ ಮಾಲೀಕರು ಮತ್ತು ತಂಡದ ಲೋಗೋಗಳನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಇದರಿಂದ ಟೂರ್ನಿಯ ಮೇಲಿನ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.

ಬಹುಮಾನ ವಿವರ

APL–3 ವಿಭಾಗದಲ್ಲಿ

ಪ್ರಥಮ ಬಹುಮಾನ: ₹40,000

ದ್ವಿತೀಯ ಬಹುಮಾನ: ₹25,000

WAPL–1 ವಿಭಾಗದಲ್ಲಿ

ಪ್ರಥಮ ಬಹುಮಾನ: ಆಕರ್ಷಕ ಟ್ರೋಫಿ

ದ್ವಿತೀಯ ಬಹುಮಾನ: ನೆನಪಿನ ಕಾಣಿಕೆ

ಇದಲ್ಲದೆ ಪಂದ್ಯಾವಳಿಯಲ್ಲಿ ವಿವಿಧ ವೈಯಕ್ತಿಕ ಪ್ರಶಸ್ತಿಗಳಾದ ಬೆಸ್ಟ್ ಬ್ಯಾಟ್ಸ್‌ಮನ್, ಬೆಸ್ಟ್ ಬೌಲರ್ ಮತ್ತು ಇತರೆ ವಿಶೇಷ ಗೌರವಗಳು ನೀಡಲಾಗಲಿವೆ.

ಪಂದ್ಯಾವಳಿ ದಿನಾಂಕ

ಈ ಪಂದ್ಯಾವಳಿ 10-01-2026 ಮತ್ತು 11-01-2026 ರಂದು ಬೆಂಗಳೂರಿನ ಗೊರಗುಂಟೆ ಪಾಳ್ಯದ ರಾಜಣ್ಣ ಗ್ರೌಂಡ್ ಪೀಣ್ಯ ಪಾರ್ಕ್ ನಲ್ಲಿ ನಡೆಯಲಿದೆ.

ನೇರ ಪ್ರಸಾರ

ಈ ಅಂಬಿಗ್ ಪ್ರೀಮಿಯರ್ ಲೀಗ್–2026 ಪಂದ್ಯಾವಳಿಯ ಎಲ್ಲಾ ಪ್ರಮುಖ ಕ್ಷಣಗಳನ್ನು Sports Kannada Live ಮೂಲಕ ನೇರ ಪ್ರಸಾರ ಮಾಡಲಾಗುವುದು.

 

Exit mobile version