Site icon SportsKannada ಸ್ಪೋರ್ಟ್ಸ್ ಕನ್ನಡ

 ಟೆನಿಸ್‌ಬಾಲ್ ಕ್ರಿಕೆಟ್‌ಗೆ ಹೊಸ ಅಧ್ಯಾಯ- ಕರ್ನಾಟಕ ರಾಜ್ಯ  ಟೆನಿಸ್‌ಬಾಲ್ ಕ್ರಿಕೆಟ್ ಅಸೋಸಿಯೇಷನ್ 

 ಟೆನಿಸ್‌ಬಾಲ್ ಕ್ರಿಕೆಟ್‌ಗೆ ಹೊಸ ಅಧ್ಯಾಯ- ಕರ್ನಾಟಕ ರಾಜ್ಯ  ಟೆನಿಸ್‌ಬಾಲ್ ಕ್ರಿಕೆಟ್ ಅಸೋಸಿಯೇಷನ್ 

ಬೆಂಗಳೂರು: ಟೆನಿಸ್‌ಬಾಲ್ ಕ್ರಿಕೆಟ್ ಕ್ರೀಡಾ ಪ್ರೇಮಿಗಳಿಗೆ ಮತ್ತೊಂದು ಸಿಹಿ ಸುದ್ದಿ! ಕರ್ನಾಟಕ ರಾಜ್ಯ ಮಟ್ಟದಲ್ಲಿ ಅಧಿಕೃತವಾಗಿ ಟೆನಿಸ್‌ಬಾಲ್ ಕ್ರಿಕೆಟ್ ಅಸೋಸಿಯೇಷನ್‌ ಅನ್ನು ಸ್ಥಾಪನೆಗೊಳಿಸಲಾವುದು. ರಾಜ್ಯದ ವಿವಿಧ ಭಾಗಗಳಿಂದ ಕ್ರಿಕೆಟ್ ಪ್ರತಿಭೆಗಳು ಒಗ್ಗಟ್ಟಾಗಿ ಇಂತಹ ಅಸೋಸಿಯೇಷನ್ ಮೂಲಕ ಅವಕಾಶ ಪಡೆದುಕೊಳ್ಳಲಿರುವುದು ಖಚಿತ.

ಕರ್ನಾಟಕದಲ್ಲಿ ಈ ಕ್ರೀಡೆಗೆ ಹೊಸ ರೂಪ ಸಿಗಲಿದೆ.ಈ ಅಸೋಸಿಯೇಷನ್ ಮೂಲಕ ಜನಮಟ್ಟದಲ್ಲಿ ಹೆಚ್ಚು ಜನಪ್ರಿಯತೆ ಗಳಿಸುತ್ತಿರುವ ಟೆನಿಸ್‌ಬಾಲ್ ಕ್ರಿಕೆಟ್‌ಗೆ ಮತ್ತಷ್ಟು ಸಂಸ್ಥಿತರೂಪ, ಪ್ರಾಮಾಣಿಕತೆ ಹಾಗೂ ಬೆಳವಣಿಗೆ ಲಭಿಸಲಿದೆ. ಉಡುಪಿ, ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಕ್ರಿಕೆಟ್ ಗೆ ಆಕರ್ಷಣೆಯೂ, ಆಸಕ್ತಿಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ದೇಶೀಯ ಮಟ್ಟದ ಕ್ರಿಕೆಟ್ ಇತಿಹಾಸದಲ್ಲಿ ಬ್ರಹತ್ ಮೊತ್ತದ ಬಹುಮಾನದ ಕ್ರಿಕೆಟ್ ಪಂದ್ಯಾಟ ಕೂಡ ನಡೆಯಲಿದೆ ಎಂಬ ನಿರೀಕ್ಷೆ ನಿರ್ಮಾಣವಾಗಿದೆ.

ಇದು ಕೇವಲ ಕ್ರೀಡಾ ಪ್ರೇಮಿಗಳಿಗೆ ಮಾತ್ರವಲ್ಲ, ಯುವ ತಲೆಮಾರಿಗೆ ಸಹ ಸ್ಫೂರ್ತಿ ನೀಡುವಂತಹ ಹೆಜ್ಜೆಯಾಗಿದ್ದು, ಕರ್ನಾಟಕದ ಕ್ರಿಕೆಟ್ ನಕ್ಷೆಯಲ್ಲಿ ಟೆನಿಸ್‌ಬಾಲ್ ಕ್ರಿಕೆಟ್ ಅಸೋಸಿಯೇಷನ್ ಪ್ರಮುಖ ಪಾತ್ರ ವಹಿಸಲಿದೆ. ಯುವ ಕ್ರಿಕೆಟಿಗರ ಕನಸುಗಳಿಗೆ ಇದು ಹೊಸ ದಾರಿ. ಇದು ಟೆನಿಸ್‌ಬಾಲ್ ಕ್ರಿಕೆಟ್‌ಗೆ ಹೊಸ ಆವೃತ್ತಿ! ಕ್ರಿಕೆಟ್‌ಗೆ  ಹೊಸ ತಿರುವು ನೀಡಲಿರುವ ಹೆಜ್ಜೆ!

ಜನಪ್ರಿಯ ಟೆನಿಸ್‌ಬಾಲ್ ಕ್ರಿಕೆಟ್‌ ಕ್ರೀಡೆಯು ಈ ಅಸೋಸಿಯೇಷನ್ ಮೂಲಕ ಮತ್ತಷ್ಟು ನಿಯಮಿತ ಹಾಗೂ ಸಂಘಟಿತ ರೀತಿಯಲ್ಲಿ ಬೆಳೆಯಲಿದೆ. ಟೆನಿಸ್‌ಬಾಲ್ ಕ್ರಿಕೆಟ್‌ಗೆ ಈ ಅಸೋಸಿಯೇಷನ್ ಮೂಲಕ ಹೊಸ ದಿಕ್ಕು, ಪ್ರಾಮಾಣಿಕ ಧಾಟಿ ಮತ್ತು ಸಂಘಟಿತ ಬೆಳವಣಿಗೆ ಲಭಿಸಲಿದೆ.

Exit mobile version