Site icon SportsKannada ಸ್ಪೋರ್ಟ್ಸ್ ಕನ್ನಡ

ಶ್ರೀ ಕೃಷ್ಣ ಬಾಲನಿಕೇತನದ ಮಕ್ಕಳಿಗೆ ಹೊಸಬಟ್ಟೆ ವಿತರಿಸಿ ದೀಪಾವಳಿ ಸಂಭ್ರಮಾಚರಿಸಿದ ವೆಂಕಟರಮಣ ಸಂಸ್ಥೆ ಪಿತ್ರೋಡಿ

ಶ್ರೀ ಕೃಷ್ಣ ಬಾಲನಿಕೇತನದ ಮಕ್ಕಳಿಗೆ ಹೊಸಬಟ್ಟೆ ವಿತರಿಸಿ ದೀಪಾವಳಿ ಸಂಭ್ರಮಾಚರಿಸಿದ ವೆಂಕಟರಮಣ ಸಂಸ್ಥೆ ಪಿತ್ರೋಡಿ

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ) ಪಿತ್ರೋಡಿ ಇವರ ವತಿಯಿಂದ,ದೀಪಾವಳಿ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಶ್ರೀ ಕೃಷ್ಣ ಬಾಲನಿಕೇತನ ಆಶ್ರಮ ಕುಕ್ಕಿಕಟ್ಟೆ ಇಲ್ಲಿನ ಮಕ್ಕಳಿಗೆ ಹೊಸ ಬಟ್ಟೆ ವಿತರಿಸಲಾಯಿತು.

ಈ ಸಂದರ್ಭ ಸ್ಪೋರ್ಟ್ಸ್ ಕನ್ನಡದೊಂದಿಗೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಸಂದೀಪ್ ಕುಮಾರ್ “ನಮ್ಮ ಸಂಸ್ಥೆ ಸದಸ್ಯರು ದೀಪಾವಳಿಗೆ ಪಟಾಕಿಗೆ ಹಣವನ್ನು ವ್ಯಯಿಸದೆ ಸಂಗ್ರಹಿಸಿದ ಮೊತ್ತದಲ್ಲಿ ಆಶ್ರಮದ ಮಕ್ಕಳಿಗೆ ಹೊಸಬಟ್ಟೆ ವಿತರಿಸಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ” ಎಂದರು.

ಸಂಸ್ಥೆಯ ಪದಾಧಿಕಾರಿಗಳಾದ ಜಿತೇಂದ್ರ ಶೆಟ್ಟಿ,ವಿಜಯ್ ಕೋಟ್ಯಾನ್,ನವೀನ್ ಸಾಲ್ಯಾನ್,ಲೋಕೇಶ್ ಸುವರ್ಣ,ಉಮೇಶ್ ಕರ್ಕೇರ,ನಾಗೇಶ್ ಮೈಂದನ್,ಪ್ರಕಾಶ್ ಶೆಟ್ಟಿ, ಯೋಗೀಶ್ ಪಿತ್ರೋಡಿ, ಸುರೇಶ್ ಹಾಗೂ ಪ್ರವೀಣ್ ಪಿತ್ರೋಡಿ ಉಪಸ್ಥಿತರಿದ್ದರು

Exit mobile version