“ಕೊರೋನಾ ಮಹಾಮಾರಿಗೆ ಸಿಲುಕಿ ಒತ್ತಡದಲ್ಲಿ ಇರುವ ಯುವ ಶಕ್ತಿಗೆ ಕ್ರೀಡೆಗಳು ಹೆಚ್ಚು ಸಹಕಾರಿ” ಎಂದು ಎಸ್.ಎನ್.ಆರ್ ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ನಾರಾಯಣ ಸ್ವಾಮಿ ತಿಳಿಸಿದರು.
ಕೋಲಾರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವೈ.ಎಸ್.ಸಿ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ,ಪ್ರತಿಯೊಬ್ಬರಿಗೂ ಸಹ ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಸಧೃಡತೆಯನ್ನು ನೀಡುವುದರ ಜೊತೆಗೆ ಕೊರೋನಾ ಸಂಕಷ್ಟದಿಂದ ಹೊರಬರಲು ಇಂತಹ ಕ್ರೀಡಾ ಆಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ನಗರ ಹಾಗೂ ಗ್ರಾಮಾಂತರ ಪ್ರದೇಶದ ಯುವಕರಿಗೆ ಕ್ರೀಡೆಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಆಯೋಜಕರು ಮುಂದಾಗಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪಣತೊಡಬೇಕು ಎಂದು ತಿಳಿಸಿದರು.
ಕ್ರಿಕೆಟ್ ಟೂರ್ನಮೆಂಟ್ ಮಾದರಿಯಲ್ಲಿ ಕಬಡ್ಡಿ,ವಾಲಿಬಾಲ್ ನಂತಹ ಪಂದ್ಯಗಳನ್ನು ಸಹ ಆಯೋಜನೆ ಮಾಡಿದರೆ ನೋಡುಗರಿಗೆ,ಕ್ರೀಡಾಪಟುಗಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಿದರು.
ಜೈ ಭೀಮ್ ದಲಿತ ಸೇನೆಯ ರಾಜ್ಯಾಧ್ಯಕ್ಷ ಹಾಗೂ ಟೂರ್ನಮೆಂಟ್ ನ ಪ್ರಮುಖ ಆಯೋಜಕರಾದ ಎಲ್.ನಿರಂಜನ್ ಹಾಗೂ ನಿಜಾಮ್ ಮಾತನಾಡಿ ಕೊರೋನಾ ವಾರಿಯರ್ಸ್ ಗಳು ತಮ್ಮ ಪ್ರಾಣದ ಹಂಗು ತೊರೆದು ಮಹಾಮಾರಿಯ ವಿರುದ್ಧ ಹೋರಾಡಿ ಅನೇಕರ ಪ್ರಾಣವನ್ನು ಉಳಿಸಲು ಶ್ರಮಿಸಿರುವ ಕಾರ್ಯವನ್ನು ಶ್ಲಾಘಿಸಿದರು.ಇಂತಹ ಕೊರೋನಾ ವಾರಿಯರ್ಸ್ ಗಳನ್ನು ಸನ್ಮಾನಿಸುತ್ತಿರುವುದು ತುಂಬಾ ಸಂತಸದ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಸರ್ವೇಕ್ಷಣ ಇಲಾಖೆ ವೈದ್ಯೆ ಚಾರಿಣಿ,ನಿಜಾಮ್,
ತಬ್ರೇಜ್,ಸಾಧಿಕ್,ಮತೀನ್,
ನದೀಮ್,ಯಾಸೀನ್,ಜಾಫರ್,
ವಿಕ್ರಮ್,ಮುಜಾಮಿಲ್,ಫೈಜನ್,ಯೂಸುಫ್, ಆರಿಫ್,ಅನಿಲ್ ಉಪಸ್ಥಿತರಿದ್ದರು.
ಈ ಪಂದ್ಯಾವಳಿಯ ನೇರ ಪ್ರಸಾರ Y.Sports ಯೂ ಟ್ಯೂಬ್ ಚಾನೆಲ್ ಬಿತ್ತರಿಸುತ್ತಿದೆ.