ಸುಳ್ಯದ ಬಹುಮುಖ ಪ್ರತಿಭೆ ಅವನಿ.ಎಂ.ಎಸ್ ರವರು ಯೋಗಾಸನ ಸ್ಪೋರ್ಟ್ಸ್ ಫೆಡರೇಶನ್ ಇಂಡಿಯಾ ಏರ್ಪಡಿಸಿದ್ದ ಆನ್ಲೈನ್ ನ್ಯಾಷನಲ್ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ಶಿಪ್ ವರ್ಕ್ ಶಾಪ್ ನಲ್ಲಿ ಸ್ಟಾರ್ ಪ್ಲೇಯರ್ ಅವಾರ್ಡ್ ಪುರಸ್ಕಾರ ಪಡೆದಿದ್ದಾರೆ.
ಜನವರಿ 26 ರಂದು ನಡೆದ 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಯೋಗಪಟು ಅವನಿ.ಎಂ.ಎಸ್.ಸುಳ್ಯ ಇವರು ದ್ವಿತೀಯ ಸ್ಥಾನ ಪಡೆದು ನ್ಯಾಷನಲ್ ಯೋಗಾಸನ ಸ್ಟಾರ್ ಪ್ಲೇಯರ್ ಅವಾರ್ಡ್ ಪುರಸ್ಕಾರ ಪಡೆದಿದ್ದಾರೆ.ಅವನಿ.ಎಂ.ಎಸ್ ಸುಳ್ಯದ ಸೈಂಟ್ ಜೋಸೆಫ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ 3 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ರೇಶ್ಮಾ ಕೆ.ಎಸ್ ಮತ್ತು ಶಶಿಧರ.ಎಂ.ಜೆ ಇವರ ಪುತ್ರಿ.