7 ವಿಶ್ವದಾಖಲೆಗಳ ಸರದಾರಿಣಿ,ಜಿಲ್ಲಾ ರಾಜ್ಯೋತ್ಸವ ಪುರಸ್ಕೃತೆ,ಯೋಗ ರತ್ನ ತನುಶ್ರೀ ಪಿತ್ರೋಡಿ ಹೆತ್ತವರ ಹೆಮ್ಮೆಯ ಸಂಸ್ಥೆ ಸಂಧ್ಯೋದಯ ಪಿತ್ರೋಡಿ ಇವರ ವತಿಯಿಂದ ವಿದ್ಯಾರ್ಥಿಗಳಿಗಾಗಿ 2 ನೇ ವರ್ಷದ ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿದೆ.
ದಿನಾಂಕ ಮೇ 7 ರಂದು ಉಡುಪಿಯ ಸೈಂಟ್ ಸಿಸಿಲಿ ಸಭಾಂಗಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸ್ಪರ್ಧೆ ಪ್ರಾರಂಭವಾಗಲಿದೆ.ವಯೋಮಿತಿ 5 ರಿಂದ 10 ವರ್ಷದೊಳಗೆ ಮತ್ತು 10 ರಿಂದ 15 ವರ್ಷದೊಳಗಿನ ಸ್ಪರ್ಧಿಗಳಿಗೆ ಭಾಗವಹಿಸಲು ಅವಕಾಶವಿರುತ್ತದೆ.
ಎರಡು ವಿಭಾಗದಲ್ಲೂ ಹುಡುಗರಿಗೆ ಮತ್ತು ಹುಡುಗಿಯರಿಗೆ ಸ್ಪರ್ಧೆ ಇರುತ್ತದೆ.ವಿಜೇತರು ಪ್ರಥಮ,ದ್ವಿತೀಯ,ತೃತೀಯ ನಗದು ಬಹುಮಾನದೊಂದಿಗೆ ಟ್ರೋಫಿಗಳನ್ನು ನೀಡಲಾಗುತ್ತಿದೆ.
ಸ್ಪರ್ಧಿಗಳಿಗೆ ಊಟ ಮತ್ತು ಉಪಹಾರದ ವ್ಯವಸ್ಥೆ ಆಯೋಜಕರ ವತಿಯಿಂದ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ 9740922916 ಮತ್ತು 8217646547 ಈ ನಂಬರ್ ಗಳನ್ನು ಸಂಪರ್ಕಿಸಬಹುದು