Categories
ಕ್ರಿಕೆಟ್

83 ರ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಯಶ್‌ಪಾಲ್ ಶರ್ಮಾ ಇಂದು ಕೊನೆ ಉಸಿರೆಳೆದಿದ್ದಾರೆ…

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ 83 ರ  ವಿಶ್ವಕಪ್‌ ನಲ್ಲಿ ಟೀಮ್ ಇಂಡಿಯಾ ಪರ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಭಾರತದ ಮಡಿಲಿಗೆ ಮೊದಲ ವಿಶ್ವಕಪ್ ಗೆದ್ದುಕೊಟ್ಟಂತಹ ತಂಡದಲ್ಲಿದ್ದ ಮಾಜಿ ಕ್ರಿಕೆಟರ್ ಯಶ್‌ಪಾಲ್‌ ಶರ್ಮಾ ಇಂದು ನಿಧನರಾಗಿದ್ದಾರೆ.
ತೀವ್ರ ಹೃದಯಾಘಾತದಿಂದ ಶರ್ಮಾ ಇಂದು (ಜುಲೈ 13) ನಿಧನರಾಗಿರುವುದಾಗಿ ತಿಳಿದುಬಂದಿದೆ. ಮೂಲತಃ ಪಂಜಾಬ್‌ನವರಾದ ಯಶ್‌ಪಾಲ್‌ಗೆ ಸುಮಾರು 66 ವರ್ಷ ವಯಸ್ಸಾಗಿತ್ತು.
70 ಮತ್ತು 80ನೇ ದಶಕದ ವೇಳೆ ಯಶ್‌ಪಾಲ್‌ ಶರ್ಮಾ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ಕ್ರಿಕೆಟ್ ಅಂಗಳದಲ್ಲಿ ಮಿಂಚಿದವರು. 1983ರ ವಿಶ್ವಕಪ್‌ ವೇಳೆ ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲಿ ಶರ್ಮಾ ಬಾರಿಸಿದ 61 ರನ್‌ ಗಳು ತಂಡದ ಗೆಲುವಿಗೆ ಕಾರಣವಾಗಿತ್ತು. ಭಾರತ ತಂಡದ ಪರ ಯಶ್‌ಪಾಲ್ ಅವರು 37 ಟೆಸ್ಟ್‌ ಪಂದ್ಯ, 42 ಏಕದಿನ ಪಂದ್ಯಗಳನ್ನಾಡಿದ್ದಾರೆ.
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿದ್ದ ಯಶ್‌ಪಾಲ್ ಶರ್ಮಾ 37 ಟೆಸ್ಟ್‌ ಪಂದ್ಯಗಳಲ್ಲಿ 1606 ರನ್, 2 ಶತಕ, 9 ಅರ್ಧ ಶತಕ, 42 ಏಕದಿನ ಪಂದ್ಯಗಳಲ್ಲಿ 883 ರನ್, 4 ಅರ್ಧ ಶತಕ ಬಾರಿಸಿದ್ದಾರೆ. ಇನ್ನು ಲಿಸ್ಟ್‌ ಎ 74 ಪಂದ್ಯಗಳಲ್ಲಿ 1859 ರನ್, 160 ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 8933 ರನ್ ದಾಖಲೆ ಹೊಂದಿದ್ದಾರೆ.1979 ರಲ್ಲಿ
ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಯಶ್‌ಪಾಲ್, 1978ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಶರ್ಮಾ ಮಡದಿ ರೇಣು ಶರ್ಮಾ, ಇಬ್ಬರು ಪುತ್ರಿಯರಾದ ಪೂಜಾ, ಪ್ರೀತಿ ಮತ್ತು ಒಬ್ಬ ಪುತ್ರ ಚಿರಾಗ್ ಶರ್ಮಾ ಅವರನ್ನು ಅಗಲಿದ್ದಾರೆ.
ಕ್ರಿಕೆಟ್ ನಿವೃತ್ತಿಯ ಬಳಿಕ ಶರ್ಮಾ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ), ಪಂಜಾಬ್ ಮತ್ತು ಹರ್ಯಾಣ ಕ್ರಿಕೆಟ್‌ನಲ್ಲಿ ಬೇರೆ ಬೇರೆ ಕರ್ವವ್ಯಗಳನ್ನು ನಿಭಾಯಿಸುತ್ತಾ  ಕ್ರಿಕೆಟ್ ನಂಟನ್ನು ನಿವೃತ್ತಿ ನಂತರವು ಮುಂದುವರೆಸಿಕೊಂಡು ಹೊಗುತ್ತಿದ್ದರು. ಕ್ರಿಕೆಟ್ ವಿಶ್ಲೇಷಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಯಶ್ ಪಾಲ್ ಶರ್ಮಾ ಭಾರತೀಯ ಕ್ರಿಕೆಟ್ ಕಂಡ ಒಬ್ಬ ಮನಮೋಹಕ ಆಟಗಾರ ಇಂದು ತಮ್ಮ ಬದುಕಿಗೆ ವಿದಾಯ ಹೇಳಿ ಅಪಾರ ಅಭಿಮಾನಿಗಳನ್ನು ಕ್ರಿಕೆಟ್ ಪ್ರಿಯರನ್ನು ಬಿಟ್ಟಿ ಅಗಲಿದ್ದಾರೆ……

By ಸುಧೀರ್ ವಿಧಾತ

*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Leave a Reply

Your email address will not be published.

3 × five =